ಮ್ಯೂಚುವಲ್‌ಫಂಡ್‌ಗಳು ಕೇವಲ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುತ್ತವೆಯೇ?

ಮ್ಯೂಚುವಲ್‌ಫಂಡ್‌ಗಳು ಕೇವಲ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುತ್ತವೆಯೇ?

ಅಮ್ಯೂಸ್‌ಮೆಂಟ್‌ಪಾರ್ಕ್‌ಬಗ್ಗೆ ನೀವು ಯೋಚಿಸಿದಾಗ ನಿಮಗೆ ಕೇವಲ ರೋಲರ್ ಕೋಸ್ಟರ್‌ಗಳು ಅಥವಾ ಆಟಿಕೆ ಟ್ರೇನ್‌ಗಳು ನೆನಪಾಗುತ್ತವೆಯೇ? ಬಹುಶಃ ನಿಮಗೆ ರೋಲರ್ ಕೋಸ್ಟರ್‌ನೆನಪಾಗಬಹುದು. ಇಂತಹ ಪಾರ್ಕ್‌ಗಳಲ್ಲಿ ಸಾಮಾನ್ಯವಾಗಿ ರೋಲರ್ ಕೋಸ್ಟರ್ ರೈಡ್‌ಗಳು ಭಾರಿ ಆಕರ್ಷಕವೇನೋ ಹೌದು. ಇದು ಅಮ್ಯೂಸ್‌ಮೆಂಟ್‌ಪಾರ್ಕ್‌ಗಳ ಬಗ್ಗೆ ಒಂದಷ್ಟು ದೃಷ್ಟಿಕೋನವನ್ನು ರೂಪಿಸುತ್ತವೆ. ಮ್ಯೂಚುವಲ್‌ಫಂಡ್‌ಗಳು ಕೂಡ ಇದೇ ರೀತಿಯ ದೃಷ್ಟಿಕೋನವನ್ನು ಬಿಂಬಿಸುತ್ತವೆ. ಇವು ಕೇವಲ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುತ್ತವೆ. ಹೀಗಾಗಿ ತುಂಬಾ ರಿಸ್ಕಿಯಾಗಿದೆ ಎಂದು ಭಾವಿಸಲಾಗುತ್ತದೆ. ಜನರ ವಿವಿಧ ಹೂಡಿಕೆ ಅಗತ್ಯವನ್ನು ಪೂರೈಸುವ ವಿವಿಧ ರೀತಿಯ ಮ್ಯೂಚುವಲ್‌ಫಂಡ್‌ಗಳಿವೆ. ಕೆಲವು ಹೂಡಿಕೆದಾರರಿಗೆ ಅಧಿಕ ರಿಟರ್ನ್ಸ್‌ಅಗತ್ಯವಿದ್ದು, ಇದನ್ನು ಕೇವಲ ಸ್ಟಾಕ್‌ಗಳು ಪೂರೈಸಬಲ್ಲವು. ಇಂತಹ ಹೂಡಿಕೆದಾರರು ಈಕ್ವಿಟಿ ಮ್ಯೂಚುವಲ್‌ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಈ ಉದ್ದೇಶಗಳನ್ನು ಸಾಧಿಸಲು ಲಭ್ಯವಿರುವ ಉತ್ತಮ ದೀರ್ಘಕಾಲೀನ ಹೂಡಿಕೆ ಆಯ್ಕೆಗಳಲ್ಲಿ ಇವು ಒಂದಾಗಿವೆ. ಆದರೆ, ಈ ಮ್ಯೂಚುವಲ್‌ಫಂಡ್‌ಗಳು ಹೆಚ್ಚು ಸ್ಥಿತ್ಯಂತರವನ್ನೂ ಹೊಂದಿವೆ. ಯಾಕೆಂದರೆ, ಇವು ವಿವಿಧ ಕಂಪನಿಗಳ ಸ್ಟಾಕ್‌ಗಳಿಗೆ ಒಡ್ಡುವಿಕೆ (ಎಕ್ಸ್‌ಪೋಶರ್) ಹೊಂದಿರುತ್ತವೆ.

ಈಕ್ವಿಟಿಯಲ್ಲಿ ಹೂಡಿಕೆ ಮಾಡದ ಇತರ ಮ್ಯೂಚುವಲ್‌ಫಂಡ್‌ಗಳ ವಿಧಗಳೂ ಇವೆ. ಇವು ಬ್ಯಾಂಕ್‌ಗಳು, ಕಂಪನಿಗಳು, ಸರ್ಕಾರಿ ಸಂಸ್ಥೆಗಳು ಮತ್ತು ಹಣ ಮಾರುಕಟ್ಟೆ ಇನ್‌ಸ್ಟ್ರುಮೆಂಟ್‌ಗಳು (ಬ್ಯಾಂಕ್‌ಸಿಡಿಗಳು, ಟಿ ಬಿಲ್‌ಗಳು, ವಾಣಿಜ್ಯಿ ಪೇಪರ್‌ಗಳು)  ವಿತರಿಸಿದ ಬಾಂಡ್‌ಗಳ ಮೇಲೆ ಹೂಡಿಕೆ ಮಾಡುತ್ತವೆ. ಇವು ಈಕ್ವಿಟಿ ಫಂಡ್‌ಗಳಿಗೆ ಹೋಲಿಸಿದರೆ ಕಡಿಮೆ ರಿಟರ್ನ್ಸ್‌ಅನ್ನು ಹೊಂದಿರುತ್ತವೆ. ಬ್ಯಾಂಕ್‌ನ ಫಿಕ್ಸೆಡ್ ಡೆಪಾಸಿಟ್‌ಗಳು ಅಥವಾ ಪಿಪಿಎಫ್‌ಗಳಂತಹ ಸಾಂಪ್ರದಾಯಿಕ ಆಯ್ಕೆಗಳಿಗೆ ಈ ಫಂಡ್‌ಗಳು ಉತ್ತಮ ಪರ್ಯಾಯ ಎಂದು ಭಾವಿಸಲಾಗಿದೆ. ಹೀಗಾಗಿ, ಬ್ಯಾಂಕ್‌ಅಥವಾ ಅಂಚೆ ಕಚೇರಿ ಎಫ್‌ಡಿಗಳಿಗಿಂತ ಉತ್ತಮ ರಿಟರ್ನ್ಸ್ ಅನ್ನು ನೀಡುವ ಮತ್ತು ಕಡಿಮೆ ತೆರಿಗೆ ಹೊರೆ ನೀಡುವಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಲು ಎದುರು ನೋಡುತ್ತಿದ್ದರೆ, ಇಂತಹ ಹಣಕಾಸು ಗುರಿಗಳನ್ನು ಸಾಧಿಸಲು ಡೆಟ್‌ ಮ್ಯೂಚುವಲ್‌ ಫಂಡ್‌ಗಳು ಉತ್ತಮ ವಿಧಾನವಾಗಿದೆ.
 

436

ಮ್ಯೂಚುವಲ್‌ ಫಂಡ್‌ ಸೂಕ್ತವೇ??