ಮ್ಯೂಚುವಲ್‌ ಫಂಡ್‌ನಲ್ಲಿ ನಿತ್ಯವೂ ಹೂಡಿಕೆ ಮಾಡಬೇಕೇ?

ಮ್ಯೂಚುವಲ್‌ ಫಂಡ್‌ನಲ್ಲಿ ನಿತ್ಯವೂ ಹೂಡಿಕೆ ಮಾಡಬೇಕೇ? zoom-icon

ನಿಧಾನವಾಗಿ ಒಂದೇ ವೇಗದಲ್ಲಿ ಓಡಿದರೆ ಗೆಲ್ಲುತ್ತೇವೆ ಎಂಬ ನೀತಿ ಪಾಠವನ್ನು ಹೇಳುವ ಜನಪ್ರಿಯ ಆಮೆ ಮತ್ತು ಮೊಲದ ಕಥೆಯನ್ನು ನಾವು ಕೇಳುತ್ತಲೇ ಬೆಳೆದಿದ್ದೇವೆ. ಹೂಡಿಕೆಯೂ ಸೇರಿದಂತೆ ಜೀವನದ ಎಲ್ಲ ಹಂತಗಳಲ್ಲಿ ಈ ನೀತಿಯನ್ನು ಅಳವಡಿಸಿಕೊಳ್ಳಬಹುದು. ಹೂಡಿಕೆದಾರರಲ್ಲಿ ಸಿಸ್ಟಮ್ಯಾಟಿಕ್ ಹೂಡಿಕೆ ಪ್ಲಾನ್‌ಗಳು (ಎಸ್‌ಐಪಿಗಳು) ಜನಪ್ರಿಯವಾಗುತ್ತಿರುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ದೀರ್ಘಕಾಲದಲ್ಲಿ ಸಂಪತ್ತು ಸಂಚಯಕ್ಕೆ ಸ್ಥಿರ ಉಳಿತಾಯಕ್ಕೆ ಎಸ್‌ಐಪಿ ಉತ್ತಮ ವಿಧಾನವಾಗಿದೆ.

ಸಂಪತ್ತು ರಚನೆಗೆ ಹೂಡಿಕೆ ಮಾಡಲು ನೀವು ಬಯಸುವ ಮೊತ್ತವನ್ನು ಆಧರಿಸಿ ನೀವು ಸಾಪ್ತಾಹಿಕ, ಮಾಸಿಕ ಅಥವಾ ತ್ರೈಮಾಸಿಕ ಎಸ್‌ಐಪಿಯನ್ನು ಪಡೆಯಬಹುದು. ಕೆಲವು ಫಂಡ್‌ ಹೌಸ್‌ಗಳು ನಿತ್ಯದ ಎಸ್‌ಐಪಿಗಳನ್ನೂ ಪರಿಚಯಿಸಿವೆ. ಆದರೆ, ಅಧಿಕ ಸಂಪತ್ತು ಸಂರಚನೆಯಲ್ಲ, ಜನಪ್ರಿಯವಾದ ಮಾಸಿಕ ಆಯ್ಕೆಗೆ ಹೋಲಿಸಿದರೆ ನಿತ್ಯದ ಎಸ್‌ಐಪಿ ಸಹಾಯ ಮಾಡುತ್ತದೆಯೇ? ಎಸ್‌ಐಪಿಗಳು ದೀರ್ಘಕಾಲೀನ ಗುರಿ ಯೋಜನೆಗೆ ಆಗಿರುವುದರಿಂದ, 10-15 ವರ್ಷಗಳ ಅವಧಿಯಲ್ಲಿ ಸಂಚಯಗೊಂಡ ಮೊತ್ತಕ್ಕೆ ಹೆಚ್ಚಿನ ವ್ಯತ್ಯಾಸವನ್ನು ಉಂಟು ಮಾಡುವುದಿಲ್ಲ. ಆದರೆ ಇದು ಕಡಿಮೆ ಅವಧಿಯಲ್ಲಿ ಇದು ಪರಿಣಾಮ ಬೀರಬಹುದು. ನಿತ್ಯದ ಎಸ್‌ಐಪಿಗಳು ತಿಂಗಳಿಗೆ ಒಂದರಿಂದ ಇಪ್ಪತ್ತಕ್ಕೂ ಹೆಚ್ಚಾಗಬಹುದು ಮತ್ತು ನಿರ್ವಹಿಸಲು ಕಷ್ಟವಾಗಬಹುದು. ಈಗಲೂ ನಿಮಗೆ “ಹಣವನ್ನು ಹೂಡಿಕೆ ಮಾಡುವುದು ಹೇಗೆ” ಎಂಬ ಗೊಂದಲವಿದ್ದರೆ? ಮಾಸಿಕ ಎಸ್‌ಐಪಿಯಿಂದ ಆರಂಭಿಸುವುದು ಉತ್ತಮವಾಗಿದೆ.

435

ಮ್ಯೂಚುವಲ್‌ ಫಂಡ್‌ ಸೂಕ್ತವೇ??