ರಿಸ್ಕ್ಗಳನ್ನು ನಿಯಂತ್ರಿಸಬಹುದು. ಮ್ಯೂಚುವಲ್ ಫಂಡ್ಗಳು ಲಾಭವನ್ನು ತರಬಲ್ಲವು!
ಹೂಡಿಕೆಯಲ್ಲಿ ನಾವು ರಿಸ್ಕ್ ಎಂದು ಹೇಳಿದಾಗ, ಹೂಡಿಕೆದಾರರ ಮನಸಿನಲ್ಲಿ ಕೆಲವು ಪ್ರಶ್ನೆಗಳು ತಕ್ಷಣ ಮೂಡುತ್ತವೆ. “ನನ್ನ ಹಣ ಸುರಕ್ಷಿತವಾಗಿದೆಯೇ?” “ನಾನು ಎಷ್ಟು ರಿಟರ್ನ್ ಪಡೆಯಬಹುದು?” “ನಾನು ಬಯಸಿದಾಗ ನನಗೆ ಹಣ ವಾಪಸ್ ಸಿಗುತ್ತದೆಯೇ?” ಈ ಎಲ್ಲ ಪ್ರಶ್ನೆಗಳೂ ಸಹಜವಾದದ್ದೇ. ಮ್ಯೂಚುವಲ್ ಫಂಡ್ಗಳನ್ನು ಉತ್ತಮವಾಗಿ ತಿಳಿದುಕೊಳ್ಳಲು ಇವುಗಳನ್ನು ಮೂರು ದೃಷ್ಟಿಕೋನಗಳಿಂದ ನಾವು ನೋಡಬಹುದು.
ಪ್ರೊಫೆಷನಲ್ ಫಂಡ್ ಮ್ಯಾನೇಜ್ಮೆಂಟ್ – ಮ್ಯೂಚುವಲ್ ಫಂಡ್ಗಳನ್ನು ವೃತ್ತಿಪರ ಫಂಡ್ ಮ್ಯಾನೇಜರ್ಗಳು ನಿರ್ವಹಿಸುತ್ತಾರೆ ಮತ್ತು ಹೂಡಿಕೆದಾರರಾಗಿ ನಿಮಗೆ ಅವರ ಸಂಶೋಧನೆ ಮತ್ತು ಪರಿಣಿತಿಯ ಲಾಭ ಸಿಗುತ್ತದೆ. ಆದರೆ ಇದರಿಂದಾಗಿ ರಿಸ್ಕ್ ಸಂಪೂರ್ಣ ನಿವಾರಣೆಯಾಗದಿದ್ದರೂ, ರಿಸ್ಕ್ ಕಡಿಮೆಯಾಗುವುದಂತೂ ಖಚಿತ.
ವೈವಿಧ್ಯತೆ - ಮ್ಯೂಚುವಲ್ ಫಂಡ್ಗಳು ಹಲವು ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತವೆ. ಕಡಿಮೆ ಪರ್ಫಾರ್ಮ್ ಮಾಡುತ್ತಿರುವ ನಿರ್ದಿಷ್ಟ ಸೆಕ್ಯುರಿಟಯಿಂದ ರಿಸ್ಕ್ ಅನ್ನು ಕಡಿಮೆಗೊಳಿಸಲು ವೈವಿಧ್ಯತೆಯು ಸಹಾಯ ಮಾಡುತ್ತದೆ.
ನಿಮ್ಮ ಹೂಡಿಕೆ ಉದ್ದೇಶಕ್ಕೆ ಅನುಗುಣವಾಗಿ ಸ್ಕೀಮ್ ಆಯ್ಕೆ ಮಾಡಿಕೊಳ್ಳಿ – ಆಯ್ಕೆ ಮಾಡಿದ ಫಂಡ್ಗೂ ಹೂಡಿಕೆಯ ಕಾಲಾವಧಿಗೂ ಹೊಂದಿಕೆಯಾಗುತ್ತಿದ್ದರೆ, ಅಲ್ಪಾವಧಿಯ ಏರಿಳಿತಗಳಿಂದ ನೀವು ನಿಮ್ಮನ್ನು ರಕ್ಷಿಸಿಕೊಳ್ಳುತ್ತೀರಿ. ಉದಾಹರಣೆಗೆ, ನೀವು ಈಕ್ವಿಟಿ ಫಂಡ್ನಲ್ಲಿ ಹೂಡಿಕೆ ಮಾಡಿದ್ದರೆ, ನಿಮಗೆ ಅಲ್ಪಾವಧಿ ಏರಿಳಿತಗಳು ಬಾಧಿಸಬಹುದು. ಆದರೆ ದೀರ್ಘಾವಧಿಯಲ್ಲಿ ನೀವು ಈಕ್ವಿಟಿಯಿಂದ ಸಿಗುವ ದೀರ್ಘಕಾಲೀನ ರಿಟರ್ನ್ಸ್ಪಡೆಯಬಹುದು.
ಬಹುತೇಕ ಜನರು ಮ್ಯೂಚುವಲ್ ಫಂಡ್ಗಳು ಅಪಾಯಕಾರಿ ಎಂದು ಭಾವಿಸುತ್ತಾರೆ. ಯಾಕೆಂದರೆ ಮ್ಯೂಚುವಲ್ಫಂಡ್ ಜಾಹೀರಾತುಗಳಲ್ಲಿ ಕಾಣಿಸುವ ಶಿಷ್ಟ ಹಕ್ಕು ಅಭಾದ್ಯತೆಯ ಹೇಳಿಕೆ ಅವರನ್ನು ಈ ಹೀಗೆ ಯೋಚಿಸುವಂತೆ ಮಾಡಿರುತ್ತದೆ. ಇದರಲ್ಲಿನ ಅಪಾಯವನ್ನು ಬಹಳಷ್ಟು ಕಡಿಮೆ ಮಾಡುವುದಕ್ಕಾಗಿ ರೂಪಿಸಲಾದ ಕಠಿಣ ನಿಯಮಗಳಿಂದಾಗಿ ಹೂಡಿಕೆದಾರರ ರಕ್ಷಣೆ, ವೃತ್ತಿಪರ ಫಂಡ್ ನಿರ್ವಹಣೆ ಮತ್ತು ವೈವಿಧ್ಯತೆ ಯಿಂದಾಗಿ, ಹೂಡಿಕೆದಾರರಿಗೆ ಅನುಕೂಲಕರವಾಗಿದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಅತ್ಯಗತ್ಯ.