ಈಕ್ವಿಟಿ ಮತ್ತು ಡೆಟ್ ಫಂಡ್‌ಗಳು ವಿಭಿನ್ನ ರಿಸ್ಕ್ ಅಂಶಗಳನ್ನು ಹೊಂದಿವೆಯೇ?

Video

ಈಕ್ವಿಟಿ ಫಂಡ್‌ಗಳು ಕಂಪನಿಗಳ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುತ್ತವೆ. ಇನ್ನು ಡೆಟ್‌ ಫಂಡ್‌ಗಳು ಕಂಪನಿಗಳ ಬಾಂಡ್‌ಗಳಲ್ಲಿ ಮತ್ತು ಮನಿ ಮಾರ್ಕೆಟ್‌ ಇನ್‌ಸ್ಟ್ರುಮೆಂಟ್‌ಗಳಲ್ಲಿ ಹೂಡಿಕೆ ಮಾಡುತ್ತವೆ. ನಮ್ಮ ಹಣವನ್ನು ಈ ಫಂಡ್‌ಗಳು ವಿಭಿನ್ನ ಅಸೆಟ್‌ಗಳಲ್ಲಿ ಹೂಡಿಕೆ ಮಾಡುವುದರಿಂದ, ಇವು ಆ ಅಸೆಟ್ ಕ್ಲಾಸ್‌ಗಳಿಗೆ ಬಾಧಿಸುವ ರಿಸ್ಕ್‌ ಫ್ಯಾಕ್ಟರ್‌ಗಳಿಗೆ ಒಳಪಟ್ಟಿರುತ್ತವೆ.

ಸ್ಟಾಕ್‌ಗಳು ಮಾರ್ಕೆಟ್‌ ಮೂಮೆಂಟ್‌ಗಳಿಂದ ಬಾಧಿಸಲ್ಪಡುತ್ತವೆ. ಹೀಗಾಗಿ ಈಕ್ವಿಟಿ ಫಂಡ್‌ಗಳಲ್ಲಿ ಮಾರ್ಕೆಟ್‌ ರಿಸ್ಕ್ ಅತ್ಯಂತ ದೊಡ್ಡ ರಿಸ್ಕ್‌ ಫ್ಯಾಕ್ಟರ್ ಆಗಿರುತ್ತದೆ. ಅಂತಾರಾಷ್ಟ್ರೀಯ ಈಕ್ವಿಟಿ ಫಂಡ್‌ಗಳು ಕೂಡ ವಿನಿಮಯ ದರದಲ್ಲಿ ವ್ಯತ್ಯಾಸ ಉಂಟಾಗುವುದರಿಂದ ಕರೆನ್ಸಿ ರಿಸ್ಕ್‌ ಅನ್ನು ಎದುರಿಸುತ್ತವೆ. ಈಕ್ವಿಟಿ ಫಂಡ್‌ಗಳು ಆರ್ಥಿಕ ಮತ್ತು ಔದ್ಯಮಿಕ ರಿಸ್ಕ್‌ಗಳಿಗೆ ಒಳಪಟ್ಟಿರುತ್ತವೆ. ಯಾಕೆಂದರೆ, ಸ್ಟಾಕ್‌ಗಳು ನೇರವಾಗಿ ಆ ಕಂಪನಿಯ ವಹಿವಾಟು ಮತ್ತು ಆರ್ಥಿಕ ವಾತಾವರಣಕ್ಕೆ ಬಾಧಿಸುವ ಅಂಶಗಳನ್ನು ಆಧರಿಸಿ ಬದಲಾಗುತ್ತಿರುತ್ತವೆ.

ಬಾಂಡ್‌ಗಳು ಬಡ್ಡಿ ದರ ಬದಲಾವಣೆಗಳಿಗೆ ಒಳಪಟ್ಟಿರುತ್ತವೆ. ಯಾಕೆಂದರೆ ಬಾಂಡ್‌ಗಳು ಕೇವಲ ಸಾಲ ಸಲಕರಣೆಯ ಒಂದು ವಿಧಾನವಾಗಿರುತ್ತವೆ. ಹೀಗಾಗಿ ಡೆಟ್‌ ಫಂಡ್‌ಗಳಲ್ಲಿ ಬಡ್ಡಿ ದರದ ರಿಸ್ಕ್ ಅತ್ಯಂತ ದೊಡ್ಡ ರಿಸ್ಕ್‌ ಫ್ಯಾಕ್ಟರ್ ಆಗಿರುತ್ತದೆ. ಬಾಂಡ್‌ಗಳು ಕೂಡ ಡೀಫಾಲ್ಟ್ ಮತ್ತು ಕ್ರೆಡಿಟ್ ಇಳಿಕೆಗೆ ಒಳಪಟ್ಟಿರುತ್ತವೆ. ಅಂದರೆ, ಬಾಂಡ್ ಅಡಿಯಲ್ಲಿ ಪಾವತಿಯನ್ನು ಊರ್ಜಿತಗೊಳಿಸಲು ಬಾಂಡ್ ವಿತರಕರು ವಿಫಲವಾಗಬಹುದು ಅಥವಾ ಹಣಕಾಸು ವಿಪತ್ತಿಗೆ ಒಳಗಾಗಬಹುದು. ಇದರಿಂದಾಗಿ ಬಾಂಡ್‌ ಪಾವತಿಗಳನ್ನು ಪೂರೈಸುವ ಸಾಮರ್ಥ್ಯವು ಕುಂದಬಹುದು. ಹೀಗಾಗಿ, ಡೆಟ್‌ ಫಂಡ್‌ಗಳು ಗಮನಾರ್ಹವಾದ ಡೀಫಾಲ್ಟ್ ಮತ್ತು ಕ್ರೆಡಿಟ್‌ ರಿಸ್ಕ್ ಅನ್ನು ಎದುರಿಸುತ್ತವೆ.

ಎರಡೂ ವಿಧದ ಫಂಡ್‌ಗಳು ಲಿಕ್ವಿಡಿಟಿ ರಿಸ್ಕ್‌ಗೆ ಒಳಪಟ್ಟಿರುತ್ತವೆ. ಅಂದರೆ ಪೋರ್ಟ್‌ಫೋಲಿಯೋದ ಕೆಲವು ಹೋಲ್ಡಿಂಗ್‌ಗಳು ಕಡಿಮೆ ಟ್ರೇಡ್ ಆಗುತ್ತಿದ್ದರೆ ಅಥವಾ ಆ ಸೆಕ್ಯುರಿಟಿಗೆ ಬೇಡಿಕೆ ಕಡಿಮೆ ಇದ್ದರೆ ಮಾರಾಟ ಮಾಡುವುದು ಫಂಡ್ ಮ್ಯಾನೇಜರ್‌ಗೆ ಕಷ್ಟವಾಗಬಹುದು.

436

ಮ್ಯೂಚುವಲ್‌ ಫಂಡ್‌ ಸೂಕ್ತವೇ??