ಹೂಡಿಕೆಯ ವಿಶ್ವದಲ್ಲಿ, ಫ್ಲೆಕ್ಸಿಬಿಲಿಟಿ ಪ್ರಮುಖವಾಗಿರುತ್ತದೆ ಮತ್ತು ತಮ್ಮ ಮ್ಯೂಚುವಲ್ ಫಂಡ್ ಹೋಲ್ಡಿಂಗ್ಗಳನ್ನು ನಗದನ್ನಾಗಿ ಪರಿವರ್ತಿಸುವಾಗ ಹೂಡಿಕೆದಾರರಿಗೆ ಒಂದಷ್ಟು ಸನ್ನಿವೇಶಗಳಿರುತ್ತವೆ. ವೈಯಕ್ತಿಕ ಹಣಕಾಸಿನ ತುರ್ತು ಪರಿಸ್ಥಿತಿ ಅಥವಾ ತಾವು ಹೂಡಿಕೆ ಮಾಡುತ್ತಿದ್ದ ಗುರಿ ಸಾಧನೆಯಾದಾಗ, ತೆರಿಗೆ ಕ್ರೆಡಿಟ್, ನಿವೃತ್ತಿ ಇತ್ಯಾದಿಯ ಸನ್ನಿವೇಶದಲ್ಲಿ ಹೂಡಿಕೆದಾರರು ತಮ್ಮ ಮ್ಯೂಚುವಲ್ ಫಂಡ್ ಹೋಲ್ಡಿಂಗ್ಗಳನ್ನು ಮಾರಾಟ ಮಾಡಲು ಆರಿಸಿಕೊಳ್ಳಬಹುದು.
ಮ್ಯೂಚುವಲ್ ಫಂಡ್ಗಳನ್ನು ರಿಡೀಮ್ ಮಾಡುವ ವಿಧಾನಗಳು
ಎಎಂಸಿ ಮತ್ತು ಹೂಡಿಕೆದಾರರ ಆಯ್ಕೆಗೆ ಅನುಗುಣವಾಗಿ ಆನ್ಲೈನ್ ಅಥವಾ ಆಫ್ಲೈನ್ ಚಾನೆಲ್ಗಳ ಮೂಲಕ ಮ್ಯೂಚುವಲ್ ಫಂಡ್ ಅನ್ನು ರಿಡೀಮ್ ಮಾಡಬಹುದಾಗಿದ್ದು, ಒಂದೊಂದಕ್ಕೂ ಪ್ರತ್ಯೇಕ ಹಂತಗಳಿವೆ:
ಆಫ್ಲೈನ್ ರಿಡೆಂಪ್ಷನ್: ಎಎಂಸಿ/ಆರ್ಟಿಎ/ಏಜೆಂಟರು/ವಿತರಕರು
ನಿಮ್ಮ ಮ್ಯೂಚುವಲ್ ಫಂಡ್ ಯುನಿಟ್ಗಳನ್ನು ಆಫ್ಲೈನ್ನಲ್ಲಿ ರಿಡೀಮ್ ಮಾಡಲು, ಎಎಂಸಿಗೆ ಅಥವಾ ರಿಜಿಸ್ಟ್ರಾರ್ ನಿಯೋಜಿಸಿದ ಕಚೇರಿಗೆ ಸಹಿ ಮಾಡಿದ ರಿಡೆಂಪ್ಷನ್ ವಿನಂತಿಯನ್ನು ನೀವು ಸಲ್ಲಿಸಬೇಕು. ಸಹಿ ಮಾಡಿದ ರಿಡೆಂಪ್ಷನ್ ನಮೂನೆಯನ್ನು ಸಲ್ಲಿಸುವ ಮೂಲಕ ಏಜೆಂಟರು ಅಥವಾ ವಿತರಕರ ಮೂಲಕವೂ ತಮ್ಮ ಮ್ಯೂಚುವಲ್ ಫಂಡ್ಗಳನ್ನು ರಿಡೀಮ್ ಮಾಡಲು ಹೂಡಿಕೆದಾರರು ಆಯ್ಕೆ ಮಾಡಿಕೊಳ್ಳಬಹುದು. ಈ ನಮೂನೆಯನ್ನು ನಂತರ ಎಎಂಸಿ ಅಥವಾ ಆರ್ಟಿಎ ಕಚೇರಿಗೆ ಸಲ್ಲಿಸಲಾಗುತ್ತದೆ. ಹೋಲ್ಡರ್ ಹೆಸರು, ಫಾಲಿಯೋ ಹೆಸರು ಮತ್ತು ಯುನಿಟ್ಗಳ ಸಂಖ್ಯೆ ಅಥವಾ ರಿಡೆಂಪ್ಷನ್ಗೆ ಅಗತ್ಯವಿರುವ ಮೊತ್ತ ಸೇರಿದಂತೆ ಅಗತ್ಯ ವಿವರಗಳನ್ನು ನೀವು ಭರ್ತಿ ಮಾಡಬೇಕು ಮತ್ತು ನಂತರ ರಿಡೆಂಪ್ಷನ್ ನಮೂನೆಗೆ ಸಹಿ ಮಾಡಬೇಕು. ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದ ನಂತರ, ನೋಂದಣಿ ಮಾಡಿದ ಬ್ಯಾಂಕ್ ಖಾತೆಗೆ ನಿಮ್ಮ ರಿಟರ್ನ್ಸ್ ಅನ್ನು ಕ್ರೆಡಿಟ್ ಮಾಡಲಾಗುತ್ತದೆ ಅಥವಾ ಐಎಫ್ಎಸ್ಸಿ ಕೋಡ್ ಅನ್ನು ಒದಗಿಸಿಲ್ಲದಿದ್ದರೆ ಅಕೌಂಟ್ ಪೇಯೀ ಚೆಕ್ ಮೂಲಕ ಒದಗಿಸಲಾಗುತ್ತದೆ.
ಆನ್ಲೈನ್ ರಿಡೆಂಪ್ಷನ್: ಎಎಂಸಿ/ಆರ್ಟಿಎ/ಏಜೆಂಟರು/ವಿತರಕರು/ಎಂಎಫ್ಸೆಂಟ್ರಲ್ ಮತ್ತು /ಟ್ರೇಡಿಂಗ್/ಡಿಮ್ಯಾಟ್ ಖಾತೆಯ ವೆಬ್ಸೈಟ್ಗಳು
ನಿಮ್ಮ ಮ್ಯೂಚುವಲ್ ಫಂಡ್ ಯುನಿಟ್ಗಳನ್ನು ಆನ್ಲೈನ್ನಲ್ಲಿ ರಿಡೀಮ್ ಮಾಡಲು, ನೀವು ಬಯಸಿದ ಮ್ಯೂಚುವಲ್ ಫಂಡ್ / ರಿಜಿಸ್ಟ್ರಾರ್ / ಎಂಎಫ್ಡಿ /ಅಗ್ರಿಗೇಟರ್ ವೆಬ್ಸೈಟ್ ಅಥವಾ ಎಂಎಫ್ ಸೆಂಟ್ರಲ್ ವೆಬ್ಸೈಟ್ಗೆ ನೀವು ಭೇಟಿ ನೀಡಬಹುದು. ಫಾಲಿಯೋ ನಂಬರ್ ಅಥವಾ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಬಳಸಿ ಲಾಗಿನ್ ಮಾಡಿ ಅಥವಾ ಆ ವೆಬ್ಸೈಟ್ಗೆ ಇರುವ ನಿರ್ದಿಷ್ಟ ಬಳಕೆದಾರರ ಐಡಿ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಮಾಡಿ. ಸ್ಕೀಮ್ ಆಯ್ಕೆ ಮಾಡಿ ಮತ್ತು ಯುನಿಟ್ಗಳ ಸಂಖ್ಯೆ ಅಥವಾ ರಿಡೆಂಪ್ಷನ್ ಮಾಡುವ ಮೊತ್ತವನ್ನು ಸ್ಪಷ್ಟಪಡಿಸಿ.
ಡಿಮ್ಯಾಟ್ ಮೂಲಕ ರಿಡೆಂಪ್ಷನ್: ನೀವು ಆರಂಭದಲ್ಲಿ ನಿಮ್ಮ ಡಿಮ್ಯಾಟ್ ಅಥವಾ ಟ್ರೇಡಿಂಗ್ ಅಕೌಂಟ್ ಮೂಲಕ ಮ್ಯೂಚುವಲ್ ಫಂಡ್ಗಳನ್ನು ಖರೀದಿ ಮಾಡಿದ್ದರೆ, ರಿಡೆಂಪ್ಷನ್ ಪ್ರಕ್ರಿಯೆಯನ್ನು ಅದೇ ಅಕೌಂಟ್ ಬಳಸಿಕೊಂಡು ಮಾಡಬೇಕು. ಮುಗಿದ ನಂತರ, ರಿಡೆಂಪ್ಷನ್ ವಿನಂತಿಗೆ ಪ್ರತಿಕ್ರಿಯೆಯಾಗಿ ಎಲೆಕ್ಟ್ರಾನಿಕ್ ಪಾವತಿಯನ್ನು ಆರಂಭಿಸಲಾಗುತ್ತದೆ. ನಿಮ್ಮ ಡಿಮ್ಯಾಟ್ ಅಕೌಂಟ್ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಮೊತ್ತವನ್ನು ಕ್ರೆಡಿಟ್ ಮಾಡಲಾಗುತ್ತದೆ.
ಕೊನೆಯದಾಗಿ, ನಿರ್ದಿಷ್ಟ ಅವಧಿಗೂ ಮೊದಲು ಮ್ಯೂಚುವಲ್ ಫಂಡ್ ಹೋಲ್ಡಿಂಗ್ಗಳನ್ನು ರಿಡೀಮ್ ಮಾಡುವಾಗ ಎಕ್ಸಿಟ್ ಲೋಡ್ನಂತಹ ಸಂಭಾವ್ಯ ಶುಲ್ಕಗಳ ಬಗ್ಗೆ ನೀವು ಎಚ್ಚರಿಕೆಯಿಂದಿರಬೇಕು. ಫಂಡ್ನ ಕ್ಯಾಟಗರಿ ಮತ್ತು ಅವಧಿಯನ್ನು ಆಧರಿಸಿ ಎಕ್ಸಿಟ್ ಲೋಡ್ ವಿಭಿನ್ನವಾಗಿರುತ್ತವೆ. ಇಎಲ್ಎಸ್ಎಸ್ ರೀತಿಯ ಸ್ಕೀಮ್ಗಳಿಗೆ ನಿರ್ದಿಷ್ಟ ಲಾಕ್ ಇನ್ ಅವಧಿ ಇರುತ್ತದೆ. ಅದರೊಳಗೆ ನೀವು ಅವುಗಳನ್ನು ರಿಡೀಮ್ ಮಾಡಲಾಗುವುದಿಲ್ಲ. ಇದರ ಜೊತೆಗೆ, ಹೂಡಿಕೆ ಮೊತ್ತ ಮತ್ತು ಹೋಲ್ಡಿಂಗ್ನ ಅವಧಿಯನ್ನು ಆಧರಿಸಿದ ಕ್ಯಾಪಿಟಲ್ ಗೇನ್ಸ್ ತೆರಿಗೆಗಳು ರಿಟರ್ನ್ಸ್ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಬಹುದು. ಮಾಹಿತಿಯುತ ನಿರ್ಧಾರಗಳನ್ನು ಮಾಡಲು, ಹೂಡಿಕೆದಾರರು ತಮ್ಮ ಮ್ಯೂಚುವಲ್ ಫಂಡ್ ಯೂನಿಟ್ಗಳನ್ನು ರಿಡೀಮ್ ಮಾಡುವುದಕ್ಕೂ ಮೊದಲೇ ಎಕ್ಸಿಟ್ ಲೋಡ್ಗಳನ್ನು ಮತ್ತು ತೆರಿಗೆ ಪರಿಣಾಮಗಳನ್ನು ವಿಶ್ಲೇಷಿಸಬೇಕು.
ಹಕ್ಕು ನಿರಾಕರಣೆ
ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.