ಏಕ ಗಂಟಿನ (ಲಂಪ್ಸಮ್) ಹೂಡಿಕೆ ಕ್ಯಾಲ್‌ಕ್ಯುಲೇಟರ್
ನಿಮ್ಮ ಪ್ರಸ್ತುತ ಹೂಡಿಕೆಯನ್ನು ಪರಿಗಣಿಸಿ ಅಗತ್ಯವಿರುವ ಏಕ ಗಂಟಿನ (ಲಂಪ್ಸಮ್) ಮೊತ್ತವನ್ನು ಲೆಕ್ಕ ಮಾಡಿಕೊಂಡು ನಿಮ್ಮ ಹಣಕಾಸಿನ ಗುರಿಯನ್ನು ಯೋಜಿಸಿ.
ಒಟ್ಟು ಮೊತ್ತದ ಲೆಕ್ಕಾಚಾರ ನಿರೀಕ್ಷಿತ ನಿಧಿಗೆ ಏಕ ಗಂಟಿನ
ಮೊತ್ತವನ್ನು ಲೆಕ್ಕ ಮಾಡುವುದು
₹ | |
ವರ್ಷಗಳು | |
% | |
% |
ಹಕ್ಕು ನಿರಾಕರಣೆ:
ಹಿಂದಿನ ಕಾರ್ಯಕ್ಷಮತೆಯು ಭವಿಷ್ಯದಲ್ಲಿ ಉಳಿಯಬಹುದು ಅಥವಾ ಇಲ್ಲದಿರಬಹುದು ಮತ್ತು ಯಾವುದೇ ಭವಿಷ್ಯದ ಆದಾಯದ ಭರವಸೆ ಅಲ್ಲ.
ಈ ಲೆಕ್ಕಾಚಾರಗಳು ಕೇವಲ ಸಾಂದರ್ಭಿಕವಾಗಿವೆ ಮತ್ತು ನಿಜವಾದ ವಾಪಸಾತಿಗಳನ್ನು ಪ್ರತಿನಿಧಿಸುವುದಿಲ್ಲ.
ಮ್ಯೂಚುವಲ್ ಫಂಡ್‌ಗಳು ಖಚಿತ ವಾಪಸಾತಿ ದರವನ್ನು ಹೊಂದಿರುವುದಿಲ್ಲ ಮತ್ತು ವಾಪಸಾತಿ ದರವನ್ನು ಊಹಿಸುವುದು ಸಾಧ್ಯವಿಲ್ಲ.
₹ | |
% | |
₹1.27 Lakh
|
|
% | |
ವರ್ಷಗಳು |
ಹಕ್ಕು ನಿರಾಕರಣೆ:
ಹಿಂದಿನ ಕಾರ್ಯಕ್ಷಮತೆಯು ಭವಿಷ್ಯದಲ್ಲಿ ಉಳಿಯಬಹುದು ಅಥವಾ ಇಲ್ಲದಿರಬಹುದು ಮತ್ತು ಯಾವುದೇ ಭವಿಷ್ಯದ ಆದಾಯದ ಭರವಸೆ ಅಲ್ಲ.
ಈ ಲೆಕ್ಕಾಚಾರಗಳು ಕೇವಲ ಸಾಂದರ್ಭಿಕವಾಗಿವೆ ಮತ್ತು ನಿಜವಾದ ವಾಪಸಾತಿಗಳನ್ನು ಪ್ರತಿನಿಧಿಸುವುದಿಲ್ಲ.
ಮ್ಯೂಚುವಲ್ ಫಂಡ್‌ಗಳು ಖಚಿತ ವಾಪಸಾತಿ ದರವನ್ನು ಹೊಂದಿರುವುದಿಲ್ಲ ಮತ್ತು ವಾಪಸಾತಿ ದರವನ್ನು ಊಹಿಸುವುದು ಸಾಧ್ಯವಿಲ್ಲ.
ಏಕ ಗಂಟಿನ ಹೂಡಿಕೆ ಎಂದರೇನು?
ಏಕ ಗಂಟಿನ ಹೂಡಿಕೆ ಎಂಬುದನ್ನು ಒಂದು ಬಾರಿಯ ಹೂಡಿಕೆ ಎಂದೂ ಕರೆಯಲಾಗುತ್ತದೆ. ಇದು ಒಂದು ರೀತಿಯ ಹೂಡಿಕೆಯಾಗಿದ್ದು, ಇದರಲ್ಲಿ ಒಂದು ಬಾರಿ ಹೂಡಿಕೆ ಮಾಡಲಾಗುತ್ತದೆ ಮತ್ತು ನಿಗದಿತ ಕಾಲಾವಧಿಯಲ್ಲಿ ಕ್ರೋಢೀಕೃತ ರಿಟರ್ನ್ಸ್ ಅನ್ನು ಜನರೇಟ್ ಮಾಡಲು ನೀವು ಹೂಡಿಕೆ ಮಾಡಿದ ಹಣಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
ಏಕ ಗಂಟಿನ ಹೂಡಿಕೆ ಕ್ಯಾಲ್‌ಕ್ಯುಲೇಟರ್ ಎಂದರೇನು?
ಏಕ ಗಂಟಿನ ಹೂಡಿಕೆ ಕ್ಯಾಲ್‌ಕ್ಯುಲೇಟರ್ ಎಂಬುದು ಒಂದು ಸಾಫ್ಟ್‌ವೇರ್ ಟೂಲ್ ಆಗಿದ್ದು, ಮ್ಯೂಚುವಲ್ ಫಂಡ್‌ಗಳಲ್ಲಿ ನಿಮ್ಮ ಏಕ ಗಂಟಿನ ಹೂಡಿಕೆಯ ಅಂದಾಜು ಮೆಚ್ಯುರಿಟಿ ಮೌಲ್ಯವನ್ನು ಲೆಕ್ಕ ಹಾಕಲು ಬಳಸಲಾಗುತ್ತದೆ.
ಸರಳವಾಗಿ ಹೇಳುವುದಾದರೆ, ನಿರ್ದಿಷ್ಟ ಬಡ್ಡಿ ದರದಲ್ಲಿ ನೀವು ಇಂದು ಮಾಡಿದ ಹೂಡಿಕೆಯ ಭವಿಷ್ಯದ ಅಂದಾಜು ಮೌಲ್ಯವನ್ನು ಮ್ಯೂಚುವಲ್ ಫಂಡ್ ಏಕ ಗಂಟಿನ ಕ್ಯಾಲ್‌ಕ್ಯುಲೇಟರ್ ನಿಮಗೆ ಹೇಳುತ್ತದೆ.
ಉದಾಹರಣೆಗೆ, ಹತ್ತು ವರ್ಷಗಳವರೆಗೆ 12% ಬಡ್ಡಿ ದರದಲ್ಲಿ 2 ಲಕ್ಷ ರೂ. ಹೂಡಿಕೆ ಮಾಡುತ್ತೀರಿ. ಏಕ ಗಂಟಿನ ರಿಟರ್ನ್ ಕ್ಯಾಲ್‌ಕ್ಯುಲೇಟರ್ ಪ್ರಕಾರ, ನಿಮ್ಮ ಹೂಡಿಕೆಯ ಭವಿಷ್ಯದ ಮೌಲ್ಯವು ರೂ. 6,21,169.64 ಆಗಿರುತ್ತದೆ. ಆದರೆ, ನೀವು ಪಡೆಯುವ ರಿಟರ್ನ್ಸ್‌ನ ಅಂದಾಜು ಮಾತ್ರ ಇದಾಗಿರುತ್ತದೆ. ನಿಜವಾದ ಮೌಲ್ಯ ಇದಾಗಿರುವುದಿಲ್ಲ. ಯಾಕೆಂದರೆ, ಮ್ಯೂಚುವಲ್ ಫಂಡ್‌ಗಳು ಮಾರುಕಟ್ಟೆಯ ಚಲನೆಗೆ ಒಳಪಟ್ಟಿರುತ್ತದೆ.
ಎಂಎಫ್‌ಎಸ್‌ಎಚ್ ಏಕ ಗಂಟಿನ ಹೂಡಿಕೆ ಕ್ಯಾಲ್‌ಕ್ಯುಲೇಟರ್ ಅನ್ನು ಬಳಸುವುದು ಹೇಗೆ?
ಮ್ಯೂಚುವಲ್ ಫಂಡ್ಸ್ ಸಹಿ ಹೈ (ಎಂಎಫ್‌ಎಸ್‌ಎಚ್) ಏಕ ಗಂಟಿನ ಹೂಡಿಕೆ ಕ್ಯಾಲ್‌ಕ್ಯುಲೇಟರ್ ಒಂದು ಬಳಸಲು ಸುಲಭವಾದ ಆನ್‌ಲೈನ್ ಟೂಲ್ ಆಗಿದ್ದು, ಇದನ್ನು ಯಾರು ಬೇಕಾದರೂ ಬಳಸಬಹುದು. ಏಕ ಗಂಟಿನ ಹೂಡಿಕೆ ಕ್ಯಾಲಕ್ಯುಲೇಟರ್‌ನಲ್ಲಿ, ಪ್ರಾಥಮಿಕ ಮೂಲಾಂಶಗಳನ್ನು ನೀವು ನಮೂದಿಸಬೇಕು. ಉದಾಹರಣೆಗೆ:
ಎ) ಆರಂಭಿಕ ಹೂಡಿಕೆ ಮೊತ್ತ
ಬಿ) ಬಡ್ಡಿ ದರ
ಸಿ) ಹೂಡಿಕೆ ವರ್ಷಗಳು (ಅವಧಿ)
ಟೂಲ್‌ನಲ್ಲಿ ನೀವು ಈ ವಿವರಗಳನ್ನು ನಮೂದಿಸಿದ ನಂತರ, ಈ ಏಕ ಗಂಟಿನ ಮ್ಯೂಚುವಲ್ ಫಂಡ್ ಹೂಡಿಕೆಯ ಭವಿಷ್ಯದ ಅಂದಾಜು ಮೌಲ್ಯವನ್ನು ನೀವು ಕಂಡುಕೊಳ್ಳಬಹುದು.
ಏಕ ಗಂಟಿನ ಮ್ಯೂಚುವಲ್ ಫಂಡ್ ರಿಟರ್ನ್ಸ್ ಲೆಕ್ಕ ಮಾಡುವ ಫಾರ್ಮುಲಾ
ಈ ಮೇಲೆ ಹೇಳಿದಂತೆ, ನಿಮ್ಮ ಮ್ಯೂಚುವಲ್ ಫಂಡ್ ಏಕ ಗಂಟಿನ ಹೂಡಿಕೆಯ ರಿಡೆಂಪ್ಷನ್ ಮೌಲ್ಯವು ನಿಮ್ಮ ಹೂಡಿಕೆಯ ಮಾರ್ಕೆಟ್ ಕಾರ್ಯಕ್ಷಮತೆಯನ್ನು ಆಧರಿಸಿರುತ್ತದೆ. ಆದರೆ, ಏಕ ಗಂಟಿನ ಹೂಡಿಕೆಯಿಂದ ಬರುವ ರಿಟರ್ನ್ಸ್ ಅನ್ನು ಅಂದಾಜು ಮಾಡಲು ಅದೇ ಸೂತ್ರವನ್ನೇ ಏಕ ಗಂಟಿನ ಹೂಡಿಕೆ ಕ್ಯಾಲ್‌ಕ್ಯುಲೇಟರ್ ಬಳಕೆ ಮಾಡುತ್ತದೆ.
A = P (1 + r/n) ^ nt
r – ಅಂದಾಜು ರಿಟರ್ನ್ಸ್
P – ಮೂಲ ಹೂಡಿಕೆ
T – ಒಟ್ಟು ಅವಧಿ
n – ಹೂಡಿಕೆಯ ಸಂಖ್ಯೆ
ಉದಾಹರಣೆಯ ಜೊತೆಗೆ ಲೆಕ್ಕಾಚಾರ -
ಅಸಲು: 50,000
ಬಡ್ಡಿ ದರ: 12%
ಅವಧಿ: 10 ವರ್ಷಗಳು
A = P (1 + r/n) ^ nt
= ರೂ. 1.55 ಲಕ್ಷ (ಇದು ಅಂದಾಜು ರಿಡೆಂಪ್ಷನ್ ಮೌಲ್ಯವಾಗಿದೆ/)
ಏಕ ಗಂಟಿನ ಹೂಡಿಕೆ ಕ್ಯಾಲ್‌ಕ್ಯುಲೇಟರ್ ನಿಮಗೆ ಹೇಗೆ ಸಹಾಯ ಮಾಡಬಹುದು?
ಈ ಏಕ ಗಂಟಿನ ಹೂಡಿಕೆ ಕ್ಯಾಲ್‌ಕ್ಯುಲೇಟರ್ ನಿಮಗೆ ಈ ಕೆಳಗಿನ ಸಹಾಯ ಮಾಡಬಲ್ಲದು:
ಇಡೀ ಹೂಡಿಕೆ ಅವಧಿಯಿಂದ ಬರುವ ಅಂದಾಜು ರಿಟರ್ನ್ಸ್ ಅನ್ನು ಒದಗಿಸುವುದು.
ಮ್ಯೂಚುವಲ್ ಫಂಡ್‌ಗಳು ಮಾರುಕಟ್ಟೆಯ ಏರಿಳಿತಗಳಿಗೆ ಒಳಪಟ್ಟಿವೆ ಮತ್ತು ಅದನ್ನು ಊಹಿಸಲು ಸಾಧ್ಯವಾಗದಿದ್ದರೂ, ಲೆಕ್ಕಾಚಾರಗಳನ್ನು ಹೂಡಿಕೆ ಕ್ಯಾಲ್‌ಕ್ಯುಲೇಟರ್ ನಿಮಗೆ ನೀಡುತ್ತದೆ (ಕೈಯಿಂದ ಲೆಕ್ಕಾಚಾರ ಮಾಡುವಾಗ ಉಂಟಾಗುವ ತಪ್ಪುಗಳಿಲ್ಲದೇ).
ಇದು ಸರಳವಾಗಿದೆ ಮತ್ತು ಬಳಕೆಗೆ ಸುಲಭವಾಗಿದೆ. ಲೆಕ್ಕಾಚಾರ ಮಾಡುವುದನ್ನು ಇದು ಸುಲಭವಾಗಿಸುತ್ತದೆ. ಅಂದಾಜು ರಿಟರ್ನ್ ಆಧಾರದಲ್ಲಿ ನಿಮ್ಮ ಹಣಕಾಸನ್ನು ನೀವು ಚೆನ್ನಾಗಿ ಯೋಜಿಸುತ್ತೀರಿ ಎಂಬುದನ್ನು ಮ್ಯೂಚುವಲ್ ಫಂಡ್ ಏಕ ಗಂಟಿನ ಕ್ಯಾಲ್‌ಕ್ಯುಲೇಟರ್ ಖಾತ್ರಿಪಡಿಸುತ್ತದೆ.
ಈ ಏಕ ಗಂಟಿನ ಹೂಡಿಕೆ ಕ್ಯಾಲ್‌ಕ್ಯುಲೇಟರ್ ಹೇಗೆ ಕೆಲಸ ಮಾಡುತ್ತದೆ?
ಮ್ಯೂಚುವಲ್ ಫಂಡ್ಸ್ ಸಹಿ ಹೈ ಪೋರ್ಟಲ್‌ನಲ್ಲಿ ಲಭ್ಯವಿರುವ ಏಕಗಂಟಿನ ಹೂಡಿಕೆ ಕ್ಯಾಲಕ್ಯುಲೇಟರ್ ಅಗತ್ಯ ಸ್ಲಾಟ್‌ಗಳಲ್ಲಿ ಒದಗಿಸಿದ ಅಗತ್ಯ ವೇರಿಯೇಬಲ್‌ಗಳಿಗೆ ಈ ಮೇಲೆ ನಮೂದಿಸಿದ ಫಾರ್ಮುಲಾವನ್ನು ಅಳವಡಿಸುತ್ತದೆ ಮತ್ತು ಕೆಲವೇ ಸೆಕೆಂಡುಗಳಲ್ಲಿ ನಿಮಗೆ ಅಂದಾಜು ಮೌಲ್ಯವನ್ನು ನೀಡುತ್ತದೆ.
ಅಸಲಿ ರಿಟರ್ನ್ಸ್‌ನಲ್ಲಿ ವ್ಯತ್ಯಾಸವಾಗಬಹುದು ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ. ಉದಾಹರಣೆಗೆ, ಫೀಗಳು, ತೆರಿಗೆಗಳು ಮತ್ತು ಮಾರುಕಟ್ಟೆ ಏರಿಳಿತಗಳು ಹೂಡಿಕೆಯ ನಿಜವಾದ ಕಾರ್ಯಕ್ಷಮತೆಯ ಮೇಲೆ ಪ್ರಭಾವ ಬೀರಬಹುದು.
ಎಂಎಫ್ಎಸ್‌ಎಚ್ ಏಕ ಗಂಟಿನ ಹೂಡಿಕೆ ಕ್ಯಾಲ್‌ಕ್ಯುಲೇಟರ್ ಅನ್ನು ಬಳಸುವುದರ ಅನುಕೂಲಗಳು
ಈ ಏಕ ಗಂಟಿನ ಹೂಡಿಕೆ ಕ್ಯಾಲ್‌ಕ್ಯುಲೇಟರ್ ಒಂದು ಹಣಕಾಸಿನ ಟೂಲ್ ಆಗಿದ್ದು, ಇದರಲ್ಲಿ ಹಲವು ಮಾಪನಗಳಿವೆ. ಉದಾಹರಣೆಗೆ:
1. ಹೂಡಿಕೆ ಮಾಡಬೇಕಿರುವ ಮೊತ್ತವನ್ನು ನಿರ್ಧಾರ ಮಾಡಲು ಇದು ನಿಮಗೆ ಅನುವು ಮಾಡುತ್ತದೆ: ಈ ಅಂದಾಜನ್ನು ಆಧರಿಸಿ ಮೆಚ್ಯುರಿಟಿ ಮೌಲ್ಯವನ್ನು ಪಡೆಯಲು ಎಷ್ಟು ಹಣ ಬೇಕಿದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬಹುದು.
2. ಹೂಡಿಕೆ ಯೋಜನೆಗೆ ಅನುಕೂಲ: ಮ್ಯೂಚುವಲ್ ಫಂಡ್ ಹೂಡಿಕೆ ಯೋಜನೆಗೆ ಬಳಸಲಾಗುವ ಒಂದು ಟೂಲ್ ಆಗಿಯೂ ಈ ಕ್ಯಾಲ್‌ಕ್ಯುಲೇಟರ್ ಕೆಲಸ ಮಾಡುತ್ತದೆ.
ಎಫ್ಎಕ್ಯೂ
ಪ್ರ1. ಏಕ ಗಂಟಿನ ಹೂಡಿಕೆಯು ಹೇಗೆ ಉತ್ತಮ ಆಯ್ಕೆಯಾಗಿದೆ?
ಇದು ಹೂಡಿಕೆದಾರರ ಹಣಕಾಸು ಗುರಿಗಳನ್ನು ಇದು ಅವಲಂಬಿಸಿರುತ್ತದೆ. ಅವರು ಏಕ ಗಂಟಿನ ರೂಪದಲ್ಲಿ ಹೂಡಿಕೆ ಮಾಡಬೇಕೆ ಅಥವಾ SIP ಯಲ್ಲಿ ಹೂಡಿಕೆ ಮಾಡಬೇಕೆ ಎಂಬುದನ್ನು ನಿರ್ಧರಿಸಲು ಇದು ಸಹಾಯ ಮಾಡುತ್ತದೆ. ಆದರೆ, ದೀರ್ಘಕಾಲೀನ ಹೂಡಿಕೆದಾರರಿಗೆ ಏಕ ಗಂಟಿ ನಹೂಡಿಕೆಯು ಉತ್ತಮ ಆಯ್ಕೆಯಾಗಿದೆ. ಏಕೆಂದರೆ, ಪ್ರತಿ ಬಾರಿಯೂ ಹೂಡಿಕೆ ಮಾಡುವುದಕ್ಕೆ ಹೂಡಿಕೆದಾರರಿಗೆ ನೆನಪು ಮಾಡಿಕೊಳ್ಳಬೇಕಿರುವುದಿಲ್ಲ.
ಪ್ರ2. ಏಕ ಗಂಟಿನ ಕ್ಯಾಲ್‌ಕ್ಯುಲೇಟರ್ ನನಗೆ ನಿಖರ ಫಲಿತಾಂಶಗಳನ್ನು ನೀಡುತ್ತದೆಯೇ?
ಕ್ಯಾಲ್‌ಕ್ಯುಲೇಟರ್ ನಿಮಗೆ ನಿಖರ ಲೆಕ್ಕಾಚಾರಗಳನ್ನು ಒದಗಿಸುತ್ತದೆ. ಆದರೆ, ಇದು ಹೂಡಿಕೆಯ ನಿಖರ ರಿಟರ್ನ್ ಆಗಿರುವುದಿಲ್ಲ. ಯಾಕೆಂದರೆ, ಮ್ಯೂಚುವಲ್ ಫಂಡ್‌ಗಳು ಮಾರುಕಟ್ಟೆ ರಿಸ್ಕ್‌ಗಳಿಗೆ ಒಳಪಟ್ಟಿರುತ್ತವೆ ಮತ್ತು ರಿಟರ್ನ್ಸ್ ಅನ್ನು ಊಹಿಸಲಾಗದು.
ಪ್ರ3. ಮ್ಯೂಚುವಲ್ ಫಂಡ್ಸ್ ಸಹಿ ಹೈ ಏಕ ಗಂಟಿನ ಹೂಡಿಕೆ ಕ್ಯಾಲ್‌ಕ್ಯುಲೇಟರ್‌ನಲ್ಲಿ ಬಳಸಿದ ಸೂತ್ರ ಯಾವುದು?
ಈ ಕ್ಯಾಲ್‌ಕ್ಯುಲೇಟರ್ ಬಳಸಿದ ಸೂತ್ರವು A = P (1 + r/n) ^ nt.
ಪ್ರ4. ಏಕ ಗಂಟಿನ ಹೂಡಿಕೆಯನ್ನು ಯಾವಾಗ ನಾನು ಬಳಸಬೇಕು?
ಮಾರುಕಟ್ಟೆ ಕುಸಿದಾಗ ಏಕ ಗಂಟಿನ ಹೂಡಿಕೆಯನ್ನು ಮಾಡಬಹುದು. ಬೆಲೆ ಇಳಿದಾಗ, ಹೆಚ್ಚು ಯುನಿಟ್‌ಗಳನ್ನು ನೀವು ಖರೀದಿ ಮಾಡಬಹುದು. ದೀರ್ಘಕಾಲದಲ್ಲಿ ಇದರ ಮೌಲ್ಯ ಏರಿಕೆಯಾಗಿ, ನಿಮಗೆ ಉತ್ತಮ ರಿಟರ್ನ್ಸ್ ಅನ್ನು ನೀಡಬಹುದು.