ಈಕ್ವಿಟಿ ಫಂಡ್ಗಳಲ್ಲಿ ವಿಭಿನ್ನ ರೀತಿಯ ರಿಸ್ಕ್ಗಳು

Video

ಈಕ್ವಿಟಿ ಫಂಡ್ಗಳಿಗೆ ಬಾಧಿಸುವಲ್ಲಿ ಮಾರ್ಕೆಟ್ರಿಸ್ಕ್ ಪ್ರಾಥಮಿಕ ರಿಸ್ಕ್ ಆಗಿದೆ. ಇಡೀ ಸ್ಟಾಕ್ ಮಾರ್ಕೆಟ್ಗೆ ಬಾಧಿಸುವ ಮಾರ್ಕೆಟ್ ರಿಸ್ಕ್ಎಂಬುದು ವಿವಿಧ ಕಾರಣಗಳಿಗೆ ಉಂಟಾಗುವ ಸೆಕ್ಯುರಿಟಿಗಳ ಮೌಲ್ಯದ ನಷ್ಟವಾಗಿದೆ. ಹೀಗಾಗಿ ಮಾರ್ಕೆಟ್ ರಿಸ್ಕ್ ಅನ್ನು ಸಿಸ್ಟಮ್ಯಾಟಿಕ್ ರಿಸ್ಕ್ ಎಂದೂ ಕರೆಯಲಾಗುತ್ತದೆ. ಅಂದರೆ ಈ ರಿಸ್ಕ್ ಅನ್ನು ನಾವು ಚದುರಿಸಲಾಗದು.

ಸೂಕ್ಷ್ಮ ಆರ್ಥಿಕ ಟ್ರೆಂಡ್ಗಳು, ಜಾಗತಿಕ ಆರ್ಥಿಕ ವಿಪತ್ತು, ಭೌಗೋಳಿಕ ಉದ್ವಿಗ್ನಗಳು ಅಥವಾ ನಿಯಂತ್ರಕಗಳಲ್ಲಿನ ಬದಲಾವಣೆಗಳಂತಹ ಹಲವು ಅಂಶಗಳನ್ನು ಮಾರ್ಕೆಟ್ ರಿಸ್ಕ್ ಎನ್ನಬಹುದು. ಮಾರ್ಕೆಟ್ರಿಸ್ಕ್ನಿಂದಾಗಿ ಈಕ್ವಿಟಿ ಫಂಡ್ನಲ್ಲಿ ಈಕ್ವಿಟಿ ಬೆಲೆಯ ಮೇಲೆ ಬಹುದೊಡ್ಡ ಪರಿಣಾಮ ಉಂಟಾಗುತ್ತದೆ. ಮಾರ್ಕೆಟ್ ಕುಸಿದಾಗ, ಎಲ್ಲಾ ಷೇರು ಬೆಲೆಯ ಮೇಲೆ ಪರಿಣಾಮ ಉಂಟಾಗುತ್ತದೆ. ಇದರಿಂದ, ಈಕ್ವಿಟಿ ಫಂಡ್ನ ಕಾರ್ಯಕ್ಷಮತೆಗೂ ಕುಸಿತ ಉಂಟಾಗುತ್ತದೆ. ಈ ಮೇಲಿನ ಮಾರ್ಕೆಟ್ರಿಸ್ಕ್ ಮೂಲವನ್ನು ಹೊರತುಪಡಿಸಿ, ಮಾರ್ಕೆಟ್ ರಿಸ್ಕ್ಗೆ ಕೊಡುಗೆದಾರನಾಗಿರುವ ಕರೆನ್ಸಿ ರಿಸ್ಕ್ಗೂ ಈಕ್ವಿಟಿ ಫಂಡ್ಗಳು ಒಳಪಡಬಹುದು. ಹಲವು ದೇಶಗಳಲ್ಲಿ ಕಾರ್ಯನಿರ್ವಹಣೆ ಹೊಂದಿರುವ ಕಂಪನಿಗಳಲ್ಲಿ ಹೂಡಿಕೆ ಮಾಡುವ ಫಂಡ್ಗಳಿಗೆ ಕರೆನ್ಸಿ ರಿಸ್ಕ್ ಸಂಬಂಧಿಸಿರುತ್ತವೆ.

ವಿಭಿನ್ನ ಉದ್ಯಮಗಳು ಅಥವಾ ವಲಯಗಳಲ್ಲಿನ ಕಂಪನಿಗಳಲ್ಲಿ ಈಕ್ವಿಟಿ ಫಂಡ್ಗಳು ಹೂಡಿಕೆ ಮಾಡುವುದರಿಂದ, ಉದ್ಯಮಕ್ಕೆ ನಿರ್ದಿಷ್ಟವಾದ ರಿಸ್ಕ್ಗೆ ಅವು ತೆರೆದುಕೊಂಡಿರುತ್ತವೆ. ಅಂದರೆ, ಉದ್ಯಮದಲ್ಲಿ ಕಂಪನಿಗಳಿಗೆ ವ್ಯತಿರಿಕ್ತವಾಗಿ ಪರಿಣಾಮ ಬೀರುವ ಅನುಕೂಲಕರವಲ್ಲದ ಬೆಳವಣಿಗೆಯ ರಿಸ್ಕ್. ಮ್ಯಾನೇಜ್ಮೆಂಟ್ ಅಥವಾ ಕಂಪನಿ ಪಾಲಿಸಿಯಲ್ಲಿ ಬದಲಾವಣೆಯಂತಹ ಕಂಪನಿಗೆ ಉಂಟಾಗುವ ಅನುಕೂಲಕರವಲ್ಲದ ಬೆಳವಣಿಗೆಯಿಂದಾಗಿ ಈಕ್ವಿಟಿ ಫಂಡ್ಗಳ ಮೇಲೂ ಪರಿಣಾಮ ಕಂಡುಬರಬಹುದು. ಇದನ್ನು ನಾವು ಕಂಪನಿಗೆ ನಿರ್ದಿಷ್ಟವಾದ ರಿಸ್ಕ್ ಎಂದು ಕರೆಯುತ್ತೇವೆ. ಉದ್ಯಮ ಮತ್ತು ಕಂಪನಿಗೆ ಸಂಬಂಧಿಸಿದ ರಿಸ್ಕ್ಅನ್ನು ಸಿಸ್ಟಮ್ಯಾಟಿಕ್ ಅಲ್ಲದ ರಿಸ್ಕ್ ಎಂದೂ ಕರೆಯುತ್ತೇವೆ. ಇದನ್ನು ವೈವಿಧ್ಯತೆಯ ಮೂಲಕ ನಿವಾರಿಸಬಹುದು.

436

ಮ್ಯೂಚುವಲ್‌ ಫಂಡ್‌ ಸೂಕ್ತವೇ??