ಪೋರ್ಟ್‌ಫೋಲಿಯೋ ನಿರ್ವಹಣೆ ಸ್ಕೀಮ್‌ಗಳಿಗಿಂತ ಮ್ಯೂಚುವಲ್‌ ಫಂಡ್‌ಗಳು ಹೇಗೆ ವಿಭಿನ್ನವಾಗಿವೆ?

ಪೋರ್ಟ್‌ಫೋಲಿಯೋ ನಿರ್ವಹಣೆ ಸ್ಕೀಮ್‌ಗಳಿಗಿಂತ ಮ್ಯೂಚುವಲ್‌ ಫಂಡ್‌ಗಳು ಹೇಗೆ ವಿಭಿನ್ನವಾಗಿವೆ? zoom-icon

ಮ್ಯೂಚುವಲ್‌ ಫಂಡ್‌ಗಳು ಮತ್ತು ಪೋರ್ಟ್‌ಫೋಲಿಯೋ ಮ್ಯಾನೇಜ್‌ಮೆಂಟ್‌ ಸೇವೆಗಳು (ಪಿಎಂಎಸ್‌) ಎರಡೂ ಸಂಚಯಿತ ಹೂಡಿಕೆ ವಾಹಕದಲ್ಲಿ ಹೂಡಿಕೆ ಷೇರು ಮತ್ತು ಬಾಂಡ್‌ಗಳ ಮೂಲಕ ಹೂಡಿಕೆ ಮಾಡಲು ಹೂಡಿಕೆದಾರರಿಗೆ ಅನುವು ಮಾಡುತ್ತವೆ. ಇವುಗಳನ್ನು ವೃತ್ತಿಪರ ಫಂಡ್ ಮ್ಯಾನೇಜರುಗಳು ನಿರ್ವಹಿಸುತ್ತಾರೆ. ಆದರೆ ಇವೆರಡೂ ವಿಭಿನ್ನ ಹೂಡಿಕೆ ಆಯ್ಕೆಗಳಾಗಿದ್ದು, ವಿಭಿನ್ನ ಉದ್ದೇಶಗಳನ್ನು ಹೊಂದಿರುತ್ತವೆ ಮತ್ತು ಎರಡು ವಿಭಿನ್ನ ರೀತಿಯ ಹೂಡಿಕೆದಾರರಿಗಾಗಿ ಇವೆ.

ರೂ. 500 ಇದ್ದರೂ ಯಾರಾದರೂ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಆದರೆ ಪಿಎಂಎಸ್‌ ಸ್ಕೀಮ್‌ಗಳಿಗೆ ಕನಿಷ್ಠ ಹೂಡಿಕೆ ಮೊತ್ತ 25 ಲಕ್ಷ ರೂ. ಬೇಕು. ಹೀಗಾಗಿ ಇವು ಎಚ್‌ಎನ್‌ಐ ಗಳಿಗೆ ಉದ್ದೇಶಿಸಿದ ಸಂಪತ್ತು ನಿರ್ವಹಣೆ ಉತ್ಪನ್ನಗಳಾಗಿವೆ. ಮ್ಯೂಚುವಲ್‌ ಫಂಡ್‌ಗಳನ್ನು ಸೆಬಿ ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ. ಆದರೆ ಪಿಎಂಎಸ್‌ ಸ್ಕೀಮ್‌ಗಳಿಗೆ ಕಟ್ಟುನಿಟ್ಟಾದ ನಿಯಮಾವಳಿಗಳಿಲ್ಲ. ಹಾಗೆಯೇ, ಪಿಎಂಎಸ್‌ ಉತ್ಪನ್ನಗಳನ್ನು ಸುಧಾರಿತ ಹೂಡಿಕೆದಾರರಿಗಾಗಿ ರೂಪಿಸಲಾಗಿರುತ್ತದೆ. ಇವರಿಗೆ  ರಿಸ್ಕ್ ಗಳ ಬಗ್ಗೆ ತಿಳಿದಿರುತ್ತದೆ. ಯಾಕೆಂದರೆ, ಮಾರ್ಕೆಟ್‌ನಲ್ಲಿ ಸುಲಭವಾಗಿ ಲಭ್ಯವಿಲ್ಲದ ಸೆಕ್ಯುರಿಟಿಗಳಲ್ಲಿ ಪಿಎಂಎಸ್‌ ಫಂಡ್‌ಗಳು ಹೂಡಿಕೆ ಮಾಡುತ್ತವೆ. ಲಿಕ್ವಿಡ್‌ ಸೆಕ್ಯುರಿಟಿಗಳಲ್ಲಿ ಮ್ಯೂಚುವಲ್‌ ಫಂಡ್‌ ಹೂಡಿಕೆ ಮಾಡುತ್ತವೆ. ಉತ್ತಮ ವೈವಿಧ್ಯತೆ ಪೋರ್ಟ್‌ಫೋಲಿಯೋವನ್ನು ಮ್ಯೂಚುವಲ್ ಫಂಡ್‌ಗಳು ಹೊಂದಿರುವುದರಿಂದ, ಪಿಎಂಎಸ್‌ ಸ್ಕೀಮ್‌ಗಿಂತ ಕಡಿಮೆ ರಿಸ್ಕ್ ಹೊಂದಿರುತ್ತವೆ. ಪಿಎಂಎಸ್ ಫಂಡ್‌ಗಳು ಸಾಮಾನ್ಯವಾಗಿ 20-30 ಸ್ಟಾಕ್‌ಗಳ ಕೇಂದ್ರೀಕೃತ ಪೋರ್ಟ್‌ಫೋಲಿಯೋವನ್ನು ಹೊಂದಿರುತ್ತವೆ. ಹೀಗಾಗಿ, ಫಂಡ್‌ನ ಪರ್ಫಾರ್ಮೆನ್ಸ್‌ ಸಂಪೂರ್ಣವಾಗಿ ಫಂಡ್‌ ಮ್ಯಾನೇಜರ್‌ರ ಸ್ಟಾಕ್‌ ಆಯ್ಕೆ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ.

ಪಿಎಂಎಸ್‌ ಫಂಡ್‌ಗಳು ಅಧಿಕ ಎಂಟ್ರಿ ಮತ್ತು ಎಕ್ಸಿಟ್ಲೋಡ್‌ ಹೊಂದಿರುತ್ತವೆ. ಜೊತೆಗೆ, ಅಧಿಕ ಫಂಡ್‌ ಮ್ಯಾನೇಜ್‌ಮೆಂಟ್‌ ಫೀ ಕೂಡ ಇರುತ್ತದೆ. ಮ್ಯೂಚುವಲ್‌ ಫಂಡ್‌ಗಳು ಎಂಟ್ರಿ ಲೋಡ್ಹೊಂದಿರುವುದಿಲ್ಲ ಮತ್ತು ಇವು ಕಡಿಮೆ ಎಕ್ಸಿಟ್ಲೋಡ್‌ ಹೊಂದಿರುತ್ತವೆ. ರಿಟೇಲ್‌ ಹೂಡಿಕೆದಾರರಿಗೆಮ್ಯೂಚುವಲ್‌ ಫಂಡ್‌ಗಳು ಸೂಕ್ತವಾಗಿವೆ. ಆದರೆ ಪಿಎಂಎಸ್‌ ಫಂಡ್‌ಗಳು ರಿಟೇಲ್‌ ಹೂಡಿಕೆದಾರರಿಗಾಗಿಇಲ್ಲ.

436

ಮ್ಯೂಚುವಲ್‌ ಫಂಡ್‌ ಸೂಕ್ತವೇ??