ಭಾರತದಲ್ಲಿ ಮ್ಯೂಚುವಲ್‌ ಫಂಡ್‌ ಸಮ್ಮತಿಯು ಹೇಗೆ ವೈವಿಧ್ಯಮಯವಾಗಿದೆ?

ಭಾರತದಲ್ಲಿ ಮ್ಯೂಚುವಲ್‌ ಫಂಡ್‌ ಸಮ್ಮತಿಯು ಹೇಗೆ ವೈವಿಧ್ಯಮಯವಾಗಿದೆ? zoom-icon

1964 ರಲ್ಲಿ ಪರಿಚಯವಾದ ನಂತರ ಮ್ಯೂಚುವಲ್‌ ಫಂಡ್ಸ್‌ ನಿರ್ವಹಣೆ ಸ್ವತ್ತು 17.37 ಲಕ್ಷ ಕೋಟಿ ರೂ. (2017 ಜನವರಿ 31 ರಂತೆ) ಗೆ ಏರಿಕೆಯಾಗಿದೆ.

ಸಶಕ್ತ ಮತ್ತು ಸುಸ್ಥಿರ ಭಾರತೀಯ ಆರ್ಥಿಕತೆ, ಉತ್ತಮ ನಿಯಮಾವಳಿ, ಗೌರವಯುತ ಭಾರತ ಮತ್ತು ವಿದೇಶಿ ಅಸೆಟ್ ಮ್ಯಾನೇಜರ್‌ಗಳ ಪ್ರವೇಶ ಮತ್ತು ಭಾರತೀಯ ಹೂಡಿಕೆದಾರರು ಆದ್ಯತೆಯ ಸ್ವತ್ತು ವರ್ಗವನ್ನಾಗಿ ಮ್ಯೂಚುವಲ್‌ ಫಂಡ್ ಅನ್ನು ಸಮ್ಮತಿಸಿದ್ದರಿಂದಾಗಿ ಈ ಆಕರ್ಷಕ ಪ್ರಗತಿ ಕಂಡುಬಂದಿದೆ.

ಪ್ರತಿ ವೈಯಕ್ತಿಕ ರಿಟೇಲ್ ಹೂಡಿಕೆದಾರರ  ಖಾತೆಯು ಸರಾಸರಿ ರೂ. 68,086 ಹೂಡಿಕೆಯನ್ನು ಹೊಂದಿದೆ ಎಂಬುದನ್ನು ಆಸಕ್ತಿಕರ ಸಂಗತಿಯಾಗಿದೆ. ಭಾರತದ ಮಧ್ಯಮ ವರ್ಗವು ಈ ಸ್ವತ್ತು ವರ್ಗವನ್ನು ಒಪ್ಪಿಕೊಂಡಿರುವುದನ್ನು ಇದು ಸೂಚಿಸುತ್ತದೆ.

ಭಾರತವು ಇಂದು 42 ಸ್ವತ್ತು ಮ್ಯಾನೇಜ್‌ಮೆಂಟ್ ಕಂಪನಿಗಳನ್ನು (ಎಎಂಸಿ) ಹೊಂದಿದ್ದು, ಮ್ಯೂಚುವಲ್‌ ಫಂಡ್‌ಗಳ ಬಗ್ಗೆ ಸಂದೇಶಗಳನ್ನು ಹರಡಲು ಮತ್ತು ಪ್ರಗತಿಯತ್ತ ಸಾಗುತ್ತಿರವ ದೇಶಕ್ಕೆ ಹಣಕಾಸು ಯೋಜನೆಯನ್ನು ರೂಪಿಸುವ ಸಂದೇಶ ಸಾರಲು ನೆರವಾಗಿದೆ.

ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್‌ಗಳ ಮೂಲಕ ಪ್ರತಿ ತಿಂಗಳು ಸುಮಾರು 4000 ಕೋಟಿ ರೂ. ಹೂಡಿಕೆ ಮಾಡಲಾಗುತ್ತಿರುವುದು ಕೂಡ ಭಾರತದಲ್ಲಿ ಮ್ಯೂಚುವಲ್‌ ಫಂಡ್‌ಗಳು ಗಳಿಸಿದ ವಿಶ್ವಾಸ ಮತ್ತು ಜನಪ್ರಿಯತೆಯ ಸೂಚಕವಾಗಿದೆ.

ಭಾರತದಲ್ಲಿ ಪ್ರಮುಖ 15 ನಗರಗಳು ಒಟ್ಟು 83% ಮ್ಯೂಚುವಲ್‌ ಫಂಡ್ ಅಸೆಟ್‌ಗಳನ್ನು ಹೊಂದಿದೆ. ಭಾರತದ ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿ ಮ್ಯೂಚುವಲ್‌ ಫಂಡ್‌ಗಳ ಬಗ್ಗೆ ಜಾಗೃತಿ ಮತ್ತು ಸಮ್ಮತಿಯನ್ನು ಹೆಚ್ಚಿಸಲು ಉದ್ಯಮವು ಗಂಭೀರ ಪ್ರಯತ್ನಗಳನ್ನು ನಡೆಸಿದೆ.

(ಎಲ್ಲ ಡೇಟಾವನ್ನು ಭಾರತೀಯ ಮ್ಯೂಚುವಲ್‌ ಫಂಡ್ಸ್‌ ಸಂಘಟನೆಯಿಂದ ಒದಗಿಸಲಾಗಿದೆ).

436

ಮ್ಯೂಚುವಲ್‌ ಫಂಡ್‌ ಸೂಕ್ತವೇ??