ಯುಲಿಪ್ ಎಂಬುದು ಯೂನಿಟ್ ಲಿಂಕ್ಡ್ ಇನ್ಶುರೆನ್ಸ್ ಪ್ಲಾನ್ ಆಗಿರುತ್ತದೆ. ಇದು ಜೀವ ವಿಮೆ ಪಾಲಿಸಿ ಆಗಿದ್ದು, ಒಂದು ಹೂಡಿಕೆ ಕಾಂಪೊನೆಂಟ್ ಕೂಡ ಇರುತ್ತದೆ. ಇದನ್ನು ವಿವಿಧ ಹಣಕಾಸು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಪಾಲಿಸಿ ಮೌಲ್ಯವನ್ನು ಹೂಡಿಕೆ ಅಂಶದಿಂದ ಗಳಿಸಿದ ರಿಟರ್ನ್ಸ್ನಿರ್ಧರಿಸುತ್ತದೆ. ಆದರೆ, ಪಾಲಿಸಿದಾರರು ಮರಣವನ್ನಪ್ಪಿದಾಗ ಮಾರ್ಕೆಟ್ಗೆ ಅನುಗುಣವಾಗಿ ಸಮ್ಅಶ್ಯೂರ್ಡ್ವರ್ತಿಸುವುದಿಲ್ಲ. ಕನಿಷ್ಠ ಸಮ್ಅಶ್ಯೂರ್ಡ್ಗೆ ಈ ವೇಳೆ ಯಾವುದೇ ತೊಂದರೆಯಾಗುವುದಿಲ್ಲ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಯುಲಿಪ್ಎಂಬುದು ಹೈಬ್ರಿಡ್ ಪ್ರಾಡಕ್ಟ್. ಇದರಲ್ಲಿ ಹೂಡಿಕೆ ಮತ್ತು ವಿಮೆ ಎರಡೂ ಇರುತ್ತವೆ.
ಯುಲಿಪ್ನಲ್ಲಿನ ಹೂಡಿಕೆ ಅಂಶವು ಮ್ಯೂಚುವಲ್ ಫಂಡ್ನಂತೆಯೇ ಇರುತ್ತದೆ.
1. ಎರಡೂ ಹೂಡಿಕೆಗಳನ್ನು ನಿರ್ವಹಿಸಲಾಗುತ್ತದೆ.
2. ಎರಡನ್ನೂ ವೃತ್ತಿಪರರ ತಂಡ ನಿರ್ವಹಿಸುತ್ತದೆ ಮತ್ತು ಸೂಚಿಸಿದ ಉದ್ದೇಶಕ್ಕೆ ಅನುಗುಣವಾಗಿ ಹಣವನ್ನು ಹೂಡಿಕೆ ಮಾಡಲಾಗುತ್ತದೆ.
3. ಖರೀದಿ ಮಾಡಿದಾಗ ಹೂಡಿಕೆದಾರರಿಗೆ ಯೂನಿಟ್ಗಳನ್ನು ನಿಯೋಜಿಸಲಾಗುತ್ತದೆ ಮತ್ತು ಕಾಲಕಾಲಕ್ಕೆ ಎನ್ಎವಿ ಯನ್ನೂ ಯೂನಿಟ್ ಮೇಲೆ ಘೋಷಿಸಲಾಗುತ್ತದೆ.
ಯುಲಿಪ್ ವಿಮೆ ಪಾಲಿಸಿಯಾಗಿರುವುದರಿಂದ, ನಿಯತವಾಗಿ ಪ್ರೀಮಿಯಂ ಪಾವತಿ ಮಾಡುವುದರಲ್ಲಿ ವಿಫಲವಾದರೆ ರಿಸ್ಕ್ ಕವರ್ ಸ್ಥಗಿತಗೊಳ್ಳುವ ಸಾಧ್ಯತೆ ಇರುತ್ತದೆ.
ಮ್ಯೂಚುವಲ್ ಫಂಡ್ಗಳಲ್ಲಿ ಎಲ್ಲ ವೆಚ್ಚಗಳನ್ನೂ ಎನ್ಎವಿ ಲೆಕ್ಕಾಚಾರಕ್ಕೂ ಮುನ್ನ ವಿಧಿಸಲಾಗುತ್ತದೆ. ಯುಲಿಪ್ನಲ್ಲಿ ಕೆಲವು ವೆಚ್ಚಗಳನ್ನು ಮ್ಯೂಚುವಲ್ ಫಂಡ್ಗಳ ರೀತಿಯಲ್ಲೂ, ಕೆಲವನ್ನು ಹೂಡಿಕೆದಾರರ ಖಾತೆಯಿಂದ ಕೆಲವು ಯೂನಿಟ್ಗಳನ್ನು ಕಡಿತಗೊಳಿಸಿಕೊಳ್ಳುವ ಮೂಲಕವೂ ಮಾಡಲಾಗುತ್ತದೆ.
ಒಂದು ಯುಲಿಪ್ ಉತ್ಪನ್ನದಲ್ಲಿ ಒಂದಕ್ಕಿಂತ ಹೆಚ್ಚು ಫಂಡ್ ಆಯ್ಕೆಗಳಿರುತ್ತವೆ ಮತ್ತು ಈ ಫಂಡ್ಗಳಲ್ಲಿ ಯಾವುದಕ್ಕಾದರೂ ಬದಲಾವಣೆ ಮಾಡಲು ಹೂಡಿಕೆದಾರರಿಗೆ ಮುಕ್ತ ಅವಕಾಶ ಇರುತ್ತದೆ. ಆದರೆ, ಒಂದು ವರ್ಷದಲ್ಲಿ ಉಚಿತವಾಗಿ ಬದಲಾವಣೆ ಮಾಡುವ ಸಂಖ್ಯೆಯನ್ನು ಕೆಲವು ಸ್ಕೀಮ್ಗಳು ನಿಗದಿಗೊಳಿಸಿರುತ್ತವೆ. ಮ್ಯೂಚುವಲ್ ಫಂಡ್ ವಿಚಾರದಲ್ಲಿ ಒಂದು ಫಂಡ್ನಿಂದ ಇನ್ನೊಂದು ಫಂಡ್ಗೆ ಬದಲಾವಣೆಯನ್ನು ಎಷ್ಟು ಬಾರಿಯಾದರೂ ಮಾಡಬಹುದು. ಆದರೆ ಪ್ರಸ್ತುತ ಸ್ಕೀಮ್ ಅನ್ನು ಆಧರಿಸಿ ಎಕ್ಸಿಟ್ ಲೋಡ್ ವಿಧಿಸುವ ಸಾಧ್ಯತೆ ಇರುತ್ತದೆ.