ನಮ್ಮ ಹಣವನ್ನು ಡೆಟ್‌ ಫಂಡ್‌ಗಳು ಎಲ್ಲಿ ಹೂಡಿಕೆ ಮಾಡುತ್ತವೆ?

ನಮ್ಮ ಹಣವನ್ನು ಡೆಟ್‌ ಫಂಡ್‌ಗಳು ಎಲ್ಲಿ ಹೂಡಿಕೆ ಮಾಡುತ್ತವೆ? zoom-icon

ಡೆಟ್‌ ಫಂಡ್‌ಗಳು ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಬ್ಯಾಂಕ್‌ಗಳು, ಪಿಎಸ್‌ಯುಗಳು, ಪಿಎಫ್‌ಐಗಳು (ಸಾರ್ವಜನಿಕ ಹಣಕಾಸು ಸಂಸ್ಥೆಗಳು), ಕಾರ್ಪೊರೇಟ್‌ಗಳು ಮತ್ತು ಸರ್ಕಾರವು ವಿತರಿಸಿದ ಬಾಂಡ್‌ಗಳಲ್ಲಿ ಹೂಡಿಕೆ ಮಾಡುತ್ತವೆ. ಈ ಬಾಂಡ್‌ಗಳು ಸಾಮಾನ್ಯವಾಗಿ ಮಧ್ಯಮದಿಂದ ದೀರ್ಘಾವಧಿಯದ್ದಾಗಿರುತ್ತವೆ. ಇಂತಹ ಬಾಂಡ್‌ಗಳಲ್ಲಿ ಮ್ಯೂಚುವಲ್‌ ಫಂಡ್‌ಗಳು ಹೂಡಿಕೆ ಮಾಡಿದಾಗ, ಈ ಬಾಂಡ್‌ಗಳಿಂದ ಸಕಾಲಿಕ ಬಡ್ಡಿಯನ್ನು ಪಡೆಯುತ್ತದೆ. ಇದು ಕಾಲ ಸರಿದಂತೆ ಫಂಡ್‌ನ ಒಟ್ಟು ರಿಟರ್ನ್‌ಗೆ ಕೊಡುಗೆ ನೀಡುತ್ತದೆ.

ಕೆಲವು ಡೆಟ್‌ ಫಂಡ್‌ಗಳು ಮನಿ ಮಾರ್ಕೆಟ್‌ ಸಲಕರಣೆಗಳಾದ ಸರ್ಕಾರಿ ಟಿ ಬಿಲ್‌ಗಳು, ವಾಣಿಜ್ಯಿ ಪೇಪರುಗಳು, ಡೆಪಾಸಿಟ್‌ಗಳ ಪ್ರಮಾಣಪತ್ರಗಳು, ಬ್ಯಾಂಕರ್‌ಗಳ ಸಮ್ಮತಿ, ವಿನಿಮಯ ಬಿಲ್‌ಗಳು ಇತ್ಯಾದಿಗಳಲ್ಲಿ  ಹೂಡಿಕೆ ಮಾಡುತ್ತವೆ. ಇವು ಸಾಧಾರಣವಾಗಿ ಅಲ್ಪಾವಧಿಯದ್ದಾಗಿರುತ್ತವೆ. ಈ ಸಲಕರಣೆಗಳು ಕಾಲಾನಂತರದಲ್ಲಿ ಒಟ್ಟಾರೆ ರಿಟರ್ನ್‌ನ ಫಂಡ್‌ಗೆ ನಿಯತ ಅಂತರದಲ್ಲಿ ಖಚಿತ ಬಡ್ಡಿ ಪಾವತಿಯನ್ನು ನೀಡುವ ಭರವಸೆ ನೀಡುತ್ತವೆ.

ಬಾಂಡ್‌ಗಳು ಮತ್ತು ಮನಿ ಮಾರ್ಕೆಟ್‌ ಸಲಕರಣೆಗಳೆರಡೂ ತಮ್ಮ ಹೂಡಿಕೆದಾರರಿಗೆ ಅಂದರೆ ನಿಮ್ಮ ಮ್ಯೂಚುವಲ್‌ ಫಂಡ್‌ಗೆ ಭವಿಷ್ಯದಲ್ಲಿ ನಿಯತ ಬಡ್ಡಿ ಪಾವತಿಯನ್ನು ಮಾಡುವ ಭರವಸೆ ನೀಡುತ್ತವೆ, ಆದರೆ ಹಣಕಾಸು ವಿಪತ್ತಿನಂತಹ ಕೆಲವು ಸನ್ನಿವೇಶಗಳಲ್ಲಿ ಈ ಬಾಧ್ಯತೆಗಳನ್ನು ಪೂರೈಸುವಲ್ಲಿ ಇವು ವಿಫಲವಾಗಬಹುದು. ಹೀಗಾಗಿ, ಈಕ್ವಿಟಿ ಫಂಡ್‌ಗಳಿಗೆ ಹೋಲಿಸಿದರೆ ಡೆಟ್ ಫಂಡ್‌ಗಳು ಹೆಚ್ಚು ಸುರಕ್ಷಿತ ಎಂದು ಪರಿಗಣಿಸಲಾಗಿದೆ, ಆದರೂ  ಫಂಡ್‌ನ ಒಟ್ಟು ರಿಟರ್ನ್‌ನ ಗಮನಾರ್ಹ ಭಾಗವನ್ನು ಇದು ಹೊಂದಿರುವುದರಿಂದ ಸಮಯಕ್ಕೆ ಸರಿಯಾಗಿ ಪಾವತಿ ಮಾಡಲು ಈ ವಿತರಕರು ವಿಫಲವಾಗಬಹುದು.

442

ಮ್ಯೂಚುವಲ್‌ ಫಂಡ್‌ ಸೂಕ್ತವೇ??