ಡಿವಿಡೆಂಡ್‌ನಿಂದ ಗ್ರೋತ್ ಆಯ್ಕೆಗೆ ಬದಲಾವಣೆ ಮಾಡುವ ಹೂಡಿಕೆದಾರರು ಯಾವುದನ್ನು ಪರಿಗಣಿಸಬೇಕು?

ಡಿವಿಡೆಂಡ್‌ನಿಂದ ಗ್ರೋತ್ ಆಯ್ಕೆಗೆ ಬದಲಾವಣೆ ಮಾಡುವ ಹೂಡಿಕೆದಾರರು ಯಾವುದನ್ನು ಪರಿಗಣಿಸಬೇಕು? zoom-icon

ಫ್ಲೈ ಇಂಡಿಯಾ ಏರ್‌ಲೈನ್ಸ್‌ನಲ್ಲಿ ನೀವು ಬೆಳಗ್ಗೆ 8 ಗಂಟೆಗೆ ಬೆಂಗಳೂರಿನಿಂದ ಚೆನ್ನೈಗೆ ವಿಮಾನ ಪ್ರಯಾಣಕ್ಕೆ ಬುಕ್ ಮಾಡಿದ್ದೀರಿ ಎಂದು ಊಹಿಸಿಕೊಳ್ಳಿ. ತಪ್ಪಾದ ಫ್ಲೈಟ್‌ ಬುಕ್‌ ಮಾಡಿದ್ದೀರಿ ಎಂದು ನಿಮಗೆ ಅರಿವಾಗುತ್ತದೆ ಮತ್ತು ನೀವು ವೇಳಾಪಟ್ಟಿಯನ್ನು ಬದಲಿಸಬೇಕಾಗಿದೆ. ಯಾವ ರೀತಿಯ ಶುಲ್ಕವನ್ನು ಫ್ಲೈ ಇಂಡಿಯಾ ನಿಮಗೆ ವಿಧಿಸಬಹುದು? ಅದೇ ಏರ್‌ಲೈನ್‌, ಪ್ರಯಾಣ ದಿನಾಂಕವೂ ಒಂದೇ, ಪ್ರಯಾಣದ ಸ್ಥಳವೂ ಒಂದೇ ಮತ್ತು ಪ್ರಯಾಣಿಕರಲ್ಲಿ ಬದಲಾವಣೆ ಇಲ್ಲದಿದ್ದರೂ ನೀವು ಮನಸ್ಸು ಬದಲಿಸಿದ್ದಾಗ ದಂಡ ತೆರಬೇಕಾಗುತ್ತದೆ.

ಮ್ಯೂಚುವಲ್‌ ಫಂಡ್‌ ಹೂಡಿಕೆ ವಿಚಾರದಲ್ಲಿ, ಒಂದೇ ಸ್ಕೀಮ್‌ನಲ್ಲಿ ಒಂದು ಆಯ್ಕೆಯಿಂದ ಇನ್ನೊಂದು ಆಯ್ಕೆಗೆ ಬದಲಾವಣೆ ಮಾಡುವಾಗ ಅದನ್ನು ಮಾರಾಟ (ರಿಡೆಂಪ್ಷನ್‌) ಎಂದು ಕರೆಯಲಾಗುತ್ತದೆ. ಹೀಗಾಗಿ, ಬದಲಾವಣೆ ಮಾಡಿದಾಗ ನೀವು ಎಷ್ಟು ಕಾಲ ಹೂಡಿಕೆ ಮಾಡಿದ್ದೀರಿ ಎಂಬುದನ್ನು ಆಧರಿಸಿ ಎಕ್ಸಿಟ್ ಲೋಡ್‌ ವಿಧಿಸಲಾಗುತ್ತದೆ ಮತ್ತು ಕ್ಯಾಪಿಟಲ್ ಗೇನ್ಸ್ ತೆರಿಗೆಯನ್ನೂ ವಿಧಿಸಲಾಗುತ್ತದೆ.

ಒಂದೇ ಸ್ಕೀಮ್‌ನಲ್ಲಿನ ಎರಡು ಆಯ್ಕೆಗಳು ವಿಭಿನ್ನ ಎನ್‌ಎವಿಗಳನ್ನು ಹೊಂದಿರುತ್ತವೆ ಮತ್ತು ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತಿರುತ್ತವೆ.

  • ಗ್ರೋತ್‌ ಆಯ್ಕೆಯಲ್ಲಿ ನೀವು ಮಾಡಿದ ಲಾಭವನ್ನು ಪುನಃ ಹೂಡಿಕೆ ಮಾಡಿ, ಸಂಚಯದ ಅನುಕೂಲದಿಂದ ಲಾಭ ಪಡೆಯಲು ಅನುವು ಮಾಡುತ್ತದೆ ಮತ್ತು ಇದು ದೀರ್ಘಕಾಲದ ಸಂಪತ್ತು ರಚನೆಗೆ ಹೆಚ್ಚು ಸೂಕ್ತವಾಗಿದೆ.
  • ಹೂಡಿಕೆದಾರರು ಫಂಡ್‌ನಲ್ಲಿ ಮಾಡಿದ ಲಾಭವನ್ನು ಡಿವಿಡೆಂಡ್‌ ಆಯ್ಕೆಯು ಹಂಚಿಕೊಳ್ಳುತ್ತದೆ. ತಮ್ಮ ಮ್ಯೂಚುವಲ್ ಫಂಡ್ ಹೂಡಿಕೆಯಿಂದ ನಿಯತ ಆದಾಯವನ್ನು ಬಯಸುವವರಿಗೆ ಮಾತ್ರ ಈ ಆಯ್ಕೆ ಸೂಕ್ತವಾಗಿದೆ.

ನೀವು ಡಿವಿಡೆಂಡ್‌ನಿಂದ ಗ್ರೋತ್‌ಗೆ ಅಥವಾ ಗ್ರೋತ್‌ನಿಂದ ಡಿವಿಡೆಂಡ್‌ಗೆ ಬದಲಾಗಲು ಬಯಸಿದರೆ, ಎಕ್ಸಿಟ್ ಲೋಡ್ ಅಥವಾ ಕ್ಯಾಪಿಟಲ್ ಗೇನ್ಸ್‌ ತೆರಿಗೆ ಅನ್ವಯಿಸುತ್ತದೆಯೇ ಎಂದು ನೋಡಿ.

436

ಮ್ಯೂಚುವಲ್‌ ಫಂಡ್‌ ಸೂಕ್ತವೇ??