ಯಾವುದು ಉತ್ತಮ ಆಯ್ಕೆ: ಗ್ರೋತ್ ಅಥವಾ ಡಿವಿಡೆಂಡ್ ಪೇಔಟ್‌?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಯಾವ ಕಾರನ್ನು ನಾನು ಖರೀದಿ ಮಾಡಬೇಕು? ಎಸ್‌ಯುವಿ ಸೂಕ್ತವೋ ಅಥವಾ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಸೂಕ್ತವೋ ಎಂದು ಯಾರಾದರೂ ಕೇಳಿದರೆ ನಿಮ್ಮ ಸಲಹೆ ಯಾವುದಾಗಿರುತ್ತದೆ? ಈ ಕಾರು ಖರೀದಿಸಲು ನಿಮ್ಮ ಮುಖ್ಯ ಕಾರಣ ಯಾವುದು ಎಂದು ನೀವು ಬಹುಶಃ ಕೇಳಬಹುದು? ಕುಟುಂಬದ ಜೊತೆಗೆ ದೂರ ಪ್ರಯಾಣ ಮಾಡಲು ನಿಮಗೆ ಕಾರು ಬೇಕಿದೆಯೇ ಅಥವಾ ದಿನನಿತ್ಯ ನಗರದ ರಸ್ತೆಗಳಲ್ಲಿ ನೀವೊಬ್ಬರೇ ಆರಾಮವಾಗಿ ಪ್ರಯಾಣ ಮಾಡಲು ನಿಮಗೆ ಕಾರು ಬೇಕಿದೆಯೇ? ಹೇಗೆ ನಿಮ್ಮ ಅಗತ್ಯವನ್ನು ಆಧರಿಸಿ ನಿಮ್ಮ ಕಾರಿನ ಅಯ್ಕೆ ಇರುತ್ತದೆಯೋ, ಹಾಗೆಯೇ ಮ್ಯೂಚುವಲ್‌ ಫಂಡ್‌ ಹೂಡಿಕೆಗಳಲ್ಲಿ ಗ್ರೋತ್ ಅಥವಾ ಡಿವಿಡೆಂಡ್‌ ಆಯ್ಕೆಯನ್ನು ಮಾಡುವುದು ಕೂಡ ಯಾಕೆ ನೀವು ಹೂಡಿಕೆ ಮಾಡುತ್ತಿದ್ದೀರಿ ಎಂಬುದೂ ಅವಲಂಬಿಸಿರುತ್ತದೆ.

ನೀವು ದೀರ್ಘಕಾಲೀನ ಹೂಡಿಕೆದಾರರಾಗಿದ್ದರೆ, ನಿಮಗೆ ದೀರ್ಘಕಾಲಕ್ಕೆ ಎಸ್‌ಯುವಿ ಅಗತ್ಯವಿದೆ. ನಿಮ್ಮ ಆಯ್ಕೆಯ ಫಂಡ್‌ನ ಗ್ರೋತ್ ಆಯ್ಕೆಯಲ್ಲಿ ಹೂಡಿಕೆ ಮಾಡಿ. ಫಂಡ್‌ನ ಗಳಿಕೆಯು ಕಾಲಾನಂತರದಲ್ಲಿ ಸಂಚಯವಾಗಿ ಮತ್ತು ಕ್ರೋಢೀಕೃತವಾಗಿ ಎನ್‌ಎವಿ ಹೆಚ್ಚಳವಾದಾಗ ನಿಮಗೆ ಹೆಚ್ಚು ರಿಟರ್ನ್ಸ್‌ ನೀಡುತ್ತದೆ. ಆದರೆ, ಮ್ಯೂಚುವಲ್‌ ಫಂಡ್‌ಗಳಿಂದ ಸ್ವಲ್ಪ ಮಟ್ಟಿನ ರಿಟರ್ನ್ಸ್‌ ಅನ್ನು ನಿಮ್ಮ ಮೂಲ ಆದಾಯದ ಜೊತೆಗೆ ಪಡೆಯಲು ಬಯಸಿದರೆ ಡಿವಿಡೆಂಡ್ ಪೇಔಟ್‌ ಅನ್ನು ಆಯ್ಕೆ ಮಾಡಿಕೊಳ್ಳಿ. ಹೂಡಿಕೆದಾರರಿಗೆ ಡಿವಿಡೆಂಡ್‌ಗಳು ತೆರಿಗೆ ಮುಕ್ತವಾಗಿರುತ್ತವೆ. ಎರಡು ಆಯ್ಕೆಗಳ ಮಧ್ಯೆ ಒಂದನ್ನು ಆಯ್ಕೆ ಮಾಡುವಾಗ ತೆರಿಗೆ ಬಾಧ್ಯತೆಗಳನ್ನು ನೋಡಿ ಮತ್ತು ನಿಮಗೆ ಯಾವ ಆಯ್ಕೆ ಸೂಕ್ತ ಎಂದು ನಿಮ್ಮ ಹಣಕಾಸು ಅಗತ್ಯವನ್ನು ಆಧರಿಸಿ ಆಯ್ಕೆ ಮಾಡಿ.

436
ನಾನು ಹೂಡಿಕೆ ಮಾಡಲು ಸಿದ್ಧ