ನಿಮ್ಮ ಕಠಿಣ ಪರಿಶ್ರಮದಿಂದ ಗಳಿಸಿದ ಹಣವನ್ನು ಹೂಡಿಕೆ ಮಾಡಲು ಸರಿಯಾದ ಮ್ಯೂಚುವಲ್ ಫಂಡ್ ಅನ್ನು ಆಯ್ಕೆ ಮಾಡಿಕೊಳ್ಳುವುದಕ್ಕೂ ಮುನ್ನ ನೀವು ಸರಿಯಾಗಿ ವಿಶ್ಲೇಷಿಸಬೇಕು. ಹೂಡಿಕೆದಾರರು ಸ್ಕೀಮ್ ವರ್ಗವನ್ನು ನೋಡುತ್ತಾರೆ ಮತ್ತು ಆ ವರ್ಗದಲ್ಲಿ ಉತ್ತಮವಾಗಿ ಸಾಧನೆ ತೋರುವುದನ್ನು ನೋಡುತ್ತಾರೆ. ಆದರೆ ಈ ಸ್ಕೀಮ್ಗಳ ರಿಸ್ಕ್ ಇಂಡಿಕೇಟರುಗಳನ್ನು ನಿರ್ಲಕ್ಷಿಸುತ್ತಾರೆ. ನೀವು ಆಯ್ಕೆ ಮಾಡುವ ಉದ್ದೇಶಕ್ಕೆ ಸ್ಕೀಮ್ಗಳನ್ನು ಹೋಲಿಕೆ ಮಾಡುವಾಗ ಅವುಗಳ ರಿಸ್ಕ್ ಅನ್ನು ಹೋಲಿಕೆ ಮಾಡಲು ಮರೆಯಬೇಡಿ. ಪ್ರಮಾಣಿತ ವ್ಯತ್ಯಯ, ಬೀಟಾ ಮತ್ತು ಶಾರ್ಪ್ ಅನುಪಾತದಂತಹ ಹಲವು ರಿಸ್ಕ್ ಇಂಡಿಕೇಟರುಗಳು ಇದ್ದು, ಪ್ರತಿ ಸ್ಕೀಮ್ನ ಫ್ಯಾಕ್ಟ್ಶೀಟ್ನಲ್ಲಿ ನೀಡಲಾಗಿರುತ್ತದೆ, ಅತ್ಯಂತ ಪ್ರಾಥಮಿಕ ಸಂಗತಿ ಪ್ರಾಡಕ್ಟ್ ಲೇಬಲ್ ಅನ್ನು ನೋಡಲೇಬೇಕು. ಲೇಬಲ್ನಲ್ಲಿ ತೋರಿಸುವ ರಿಸ್ಕೋಮೀಟರ್ನಲ್ಲಿ ಫಂಡ್ನ ರಿಸ್ಕ್ ಮಟ್ಟವು ಕಾಣುತ್ತದೆ. ಈ ರಿಸ್ಕೋಮೀಟರ್ ಸೆಬಿಗೆ ಕಡ್ಡಾಯ ಅಗತ್ಯವಾಗಿದೆ ಮತ್ತು ಫಂಡ್ನಲ್ಲಿ ಇರುವ ರಿಸ್ಕ್ ಅನ್ನು ಇದು ಪ್ರತಿನಿಧಿಸುತ್ತದೆ. ರಿಸ್ಕ್ನ ಆರು ಹಂತಗಳಾದ ಕಡಿಮೆ, ಕಡಿಮೆಯಿಂದ ಮಧ್ಯಮ, ಮಧ್ಯಮ, ಮಧ್ಯಮದಿಂದ ಅಧಿಕ, ಅಧಿಕ ಮತ್ತು ಅತಿ ಅಧಿಕವನ್ನು ಅವುಗಳ ಪೋರ್ಟ್ಫೋಲಿಯೋದಲ್ಲಿನ ರಿಸ್ಕ್ನ ಮಟ್ಟವನ್ನು ಆಧರಿಸಿ ಮ್ಯೂಚುವಲ್ ಫಂಡ್ಗಳ ವಿವಿಧ ವಿಭಾಗಗಳಿಗೆ ಸಂಪರ್ಕ ಹೊಂದಿವೆ. ಈ ರೀತಿಯ ರಿಸ್ಕ್ ವಿಭಾಗೀಕರಣವನ್ನು ಸೆಬಿ ವ್ಯಾಖ್ಯಾನಿಸಿರುವುದರಿಂದ, ಇದೇ ರಿಸ್ಕ್ ವಿಭಾಗಕ್ಕೆ ಇದೇ ರೀತಿ ಫಂಡ್ಗಳನ್ನು ಎಲ್ಲ ಮ್ಯೂಚುವಲ್ ಫಂಡ್ಗಳು ವರ್ಗೀಕರಿಸಬೇಕಾಗುತ್ತದೆ.
ಫಂಡ್ನ ರಿಸ್ಕ್ ಅಂಶಕ್ಕೆ ಮೇಲ್ನೋಟವನ್ನು ಒದಗಿಸುವ ರಿಸ್ಕೋಮೀಟರ್ ಹೊರತುಪಡಿಸಿ, ಫ್ಯಾಕ್ಟ್ಶೀಟ್ನಲ್ಲಿ ಒದಗಿಸಿದ ಇನ್ನೂ ನಿರ್ದಿಷ್ಟ ರಿಸ್ಕ್ ಸೂಚಕಗಳನ್ನೂ ನಾವು ನೋಡಬಹುದು. ಫಂಡ್ನ ರಿಟರ್ನ್ನ ಶ್ರೇಣಿಯನ್ನು ಪ್ರಮಾಣಿತ ವ್ಯತ್ಯಯ ಕ್ರಮಗಳು ಅಳೆಯುತ್ತವೆ. ಅಧಿಕ ರಿಟರ್ನ್ ಪ್ರಮಾಣಿತ ವ್ಯತ್ಯಯವನ್ನು ಹೊಂದಿರುವ ಸ್ಕೀಮ್ ತನ್ನ ಪರ್ಫಾರ್ಮೆನ್ಸ್ ಶ್ರೇಣಿ ವ್ಯಾಪಕವಾಗಿದೆ ಎಂದು ತೋರಿಸುತ್ತದೆ. ಇದರಿಂದಾಗಿ ಅಸ್ಥಿರತೆಯೂ ಹೆಚ್ಚಿರುತ್ತದೆ.
ಮಾರ್ಕೆಟ್ಗೆ ಸಂಬಂಧಿಸಿದಂತೆ ಫಂಡ್ನ ಸ್ಥಿತ್ಯಂತರವನ್ನು ಬೀಟಾ ಅಳೆಯುತ್ತದೆ. ಬೀಟಾ >1 ಎಂದರೆ ಮಾರುಕಟ್ಟೆಗಿಂತ ಸ್ಕೀಮ್ ಹೆಚ್ಚು ಸ್ಥಿತ್ಯಂತರ ಹೊಂದಿದೆ ಮತ್ತು ಬೀಟಾ <1 ಎಂದರೆ ಮಾರ್ಕೆಟ್ಗಿಂತ ಕಡಿಮೆ ಸ್ಥಿತ್ಯಂತರ ಹೊಂದಿದೆ ಎಂದು ಅರ್ಥ. 1 ರ ಬೀಟಾ ಎಂಬುದು ಮಾರ್ಕೆಟ್ ಸ್ಥಿತ್ಯಂತರಕ್ಕೆ ಪೂರಕವಾಗಿ ಸ್ಕೀಮ್ ಸಾಗುತ್ತದೆ ಎಂಬುದನ್ನು ಸೂಚಿಸುತ್ತದೆ.
ಶಾರ್ಪ್ ರೇಶಿಯೋ ಎಂಬುದು ತೆಗೆದುಕೊಂಡ ರಿಸ್ಕ್ನ ಪ್ರತಿ ಯುನಿಟ್ಗೆ ಫಂಡ್ ಒದಗಿಸುವ ಹೆಚ್ಚುವರಿ ರಿಟರ್ನ್ ಅನ್ನು ಅಳೆಯುತ್ತದೆ. ರಿಸ್ಕ್ ಹೊಂದಿಸಿದ ರಿಟರ್ನ್ಗೆ ಇದು ಉತ್ತಮ ಸೂಚಕವಾಗಿದೆ.
ಮುಂದಿನ ಬಾರಿ, ಯಾವ ಸ್ಕೀಮ್ನಲ್ಲಿ ಹೂಡಿಕೆ ಮಾಡಬೇಕು ಎಂದು ಸಂಶೋಧನೆ ಮಾಡುವಾಗ ಈ ಮೇಲಿನ ರಿಸ್ಕ್ ಮಾನದಂಡಗಳನ್ನು ಆಧರಿಸಿ ಮೌಲೀಕರಿಸಲು ಮರೆಯಬೇಡಿ.