ಯಾವ ಫಂಡ್ ನನಗೆ ಸೂಕ್ತವಾಗಿದೆ ಎಂದು ನಾನು ಹೇಗೆ ತಿಳಿಯುವುದು?

ಯಾವ ಫಂಡ್ ನನಗೆ ಸೂಕ್ತವಾಗಿದೆ ಎಂದು ನಾನು ಹೇಗೆ ತಿಳಿಯುವುದು?

ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆದಾರರು ಹೂಡಿಕೆ ಮಾಡಲು ನಿರ್ಧರಿಸಿದರೆ, ಫಿಕ್ಸೆಡ್‌ ಇನ್‌ಕಮ್‌, ಈಕ್ವಿಟಿ ಅಥವಾ ಬ್ಯಾಲೆನ್ಸ್‌ಡ್‌ ಫಂಡ್‌ನಲ್ಲಿ ಹೂಡಿಕೆಮಾಡಬೇಕೋ ಮತ್ತು ಯಾವ  ಸ್ವತ್ತು ನಿರ್ವಹಣೆ ಕಂಪನಿಯಲ್ಲಿ (ಎಎಂಸಿ)  ಹೂಡಿಕೆ ಮಾಡಬೇಕು ಎಂಬುದನ್ನು ನಿರ್ಧರಿಸಬೇಕು.

ಮೊದಲಿಗೆ, ಮ್ಯೂಚುಯಲ್ ಫಂಡ್ ವಿತರಕರು/ಹೂಡಿಕೆ ಸಲಹೆಗಾರರೊಂದಿಗೆ ನಿಮ್ಮ ಉದ್ದೇಶ ಏನೆಂದು ಮುಕ್ತವಾಗಿ ಚರ್ಚಿಸಿ, ನೀವು ಯಾವಾಗ ಆರಾಮವಾಗಿರುವಿರಿ ಮತ್ತು ನಿಮ್ಮ ಅಪಾಯದ ಪ್ರಮಾಣ ಏನು.

ಯಾವ ಫಂಡ್ನಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನುಈ ಮಾಹಿತಿಯನ್ನು ಆಧರಿಸಿ ನಿರ್ಧರಿಸಿ. 

  1. ನೀವು ದೀರ್ಘಕಾಲದ ಉದ್ದೇಶವನ್ನು ಹೊಂದಿದ್ದರೆ, ಉದಾಹರಣೆಗೆ ನಿವೃತ್ತಿ ಯೋಜನೆಯಂತಹ ಉದ್ದೇಶ ಹೊಂದಿದ್ದು, ಈಕ್ವಿಟಿ ಅಥವಾ ಬ್ಯಾಲೆನ್ಸ್‌ಡ್‌ ಫಂಡ್‌ ಸೂಕ್ತ.
  2. ನೀವು ತುಂಬಾ ಅಲ್ಪಾವಧಿ ಉದ್ದೇಶ ಹೊಂದಿದ್ದರೆ, ಅಂದರೆ ಕೆಲವು ತಿಂಗಳುಗಳವರೆಗೆ ಹಣವನ್ನು ಇಡಬೇಕು ಎಂದಾಗಿದ್ದರೆ, ಲಿಕ್ವಿಡ್ ಫಂಡ್ ಸೂಕ್ತ.
  3. ನಿಯತ ಆದಾಯವನ್ನು ಗಳಿಸುವ ಉದ್ದೇಶವಿದ್ದರೆ, ಆಗ ಮಾಸಿಕ ಆದಾಯ ಯೋಜನೆ ಅಥವಾ ಇನ್‌ಕಮ್‌ ಫಂಡ್ ಅನ್ನು ಶಿಫಾರಸು ಮಾಡಲಾಗುತ್ತದೆ.

ಹೂಡಿಕೆ ಮಾಡಲು ಫಂಡ್‌ನ ವಿಧವನ್ನು ನಿರ್ಧರಿಸಿದ ನಂತರ, ಒಂದು ಎಎಂಸಿ ಇಂದ ನಿರ್ದಿಷ್ಟ ಸ್ಕೀಮ್‌ ಬಗ್ಗೆ ನಿರ್ಧಾರವನ್ನು ಮಾಡಲಾಗುತ್ತದೆ. ಎಎಂಸಿ ಟ್ರ್ಯಾಕ್‌ ರೆಕಾರ್ಡ್, ಸ್ಕೀಮ್‌ನ ಸೂಕ್ತತೆ, ಪೋರ್ಟ್‌ಫೋಲಿಯೋ ವಿವರ ಇತ್ಯಾದಿಯನ್ನು ವಿಶ್ಲೇಷಣೆ ಮಾಡಿದ ನಂತರ ಸಾಮಾನ್ಯವಾಗಿ ಈ ನಿರ್ಧಾರಗಳನ್ನು ಮಾಡಲಾಗುತ್ತದೆ.

ಸ್ಕೀಮ್ ಫ್ಯಾಕ್ಟ್ ಶೀಟ್ ಮತ್ತು  ಪ್ರಮುಖ ಮಾಹಿತಿ ಮೆಮೊರಾಂಡಮ್‌ ಎರಡು ಪ್ರಮುಖ ದಾಖಲೆಯಾಗಿದ್ದು, ಇದನ್ನು ಪ್ರತಿ ಹೂಡಿಕೆದಾರರೂ ಹೂಡಿಕೆಗೂ ಮೊದಲು ನೋಡಬೇಕು. ವಿವರವಾದ ಮಾಹಿತಿ ಅಗತ್ಯವಿದ್ದರೆ, ಸ್ಕೀಮ್ಮಾಹಿತಿ ದಾಖಲೆಯನ್ನು ನೋಡಬೇಕು. ಈ ಎಲ್ಲವೂ ಪ್ರತಿ ಮ್ಯೂಚುವಲ್‌ ಫಂಡ್‌  ವೆಬ್‌ಸೈಟ್‌ನಲ್ಲಿ ಸುಲಭವಾಗಿ ಲಭ್ಯವಿರುತ್ತದೆ.

434

ಮ್ಯೂಚುವಲ್‌ ಫಂಡ್‌ ಸೂಕ್ತವೇ??