ನಾವು ಬಹುತೇಕರು ನಮ್ಮ ಹೂಡಿಕೆಯನ್ನು ನಾವೇ ನಿರ್ವಹಿಸಬಲ್ಲೆವು ಎಂಬ ಯೋಚನೆ ಮಾಡಿರುತ್ತೇವೆ. ವೃತ್ತಿಪರ ಫಂಡ್ ಮ್ಯಾನೇಜ್‌ಮೆಂಟ್ ಕಂಪನಿಯಲ್ಲಿ, ಶಿಕ್ಷಣ , ಅನುಭವ ಮತ್ತು ಕೌಶಲ್ಯಗಳ ಆಧಾರದಲ್ಲಿ ವಿವಿಧ ಕೆಲಸಗಳಿಗೆ ವಿವಿಧ ಜನರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿರುತ್ತದೆ.
ಹೂಡಿಕೆದಾರರಾಗಿ ನೀವೇ ನಿಮ್ಮ ಹಣಕಾಸನ್ನು ನಿರ್ವಹಿಸಬಹುದು ಅಥವಾ ವೃತ್ತಿಪರ ಸಂಸ್ಥೆಯನ್ನು ನೇಮಿಸಿಕೊಳ್ಳಬಹುದು. ನೀವು ವೃತ್ತಿಪರ ಸಂಸ್ಥೆಯನ್ನು ಯಾವಾಗ ನೇಮಿಸಿಕೊಳ್ಳಬೇಕು ಎಂದರೆ:
- ನಿಮಗೆ ಕೆಲಸವನ್ನು ಉತ್ತಮವಾಗಿ ಮಾಡುವುದು ತಿಳಿದಿಲ್ಲದಿದ್ದಾಗ ಮತ್ತು ಸಾಕಷ್ಟು ಸಮಯ ಅಥವಾ ಬದ್ಧತೆ ಇಲ್ಲದಿದ್ದಾಗ ನೀವು ವೃತ್ತಿಪರ ಸಂಸ್ಥೆಯನ್ನು ನೇಮಿಸಿಕೊಳ್ಳಬಹುದು.
- ನಮ್ಮಲ್ಲಿ ಬಹುತೇಕರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಯಾರನ್ನಾದರೂ ನೇಮಿಸಿಕೊಳ್ಳುತ್ತೇವೆ ಅಥವಾ ನಮ್ಮ ಮನೆ ನಿರ್ಮಿಸುವಾಗ ನಾವು ವಾಸ್ತುಶಿಲ್ಪಿಯ ಸಹಾಯ ಪಡೆಯುತ್ತೇವೆ. ನಮಗೆ ಡ್ರೈವಿಂಗ್ ಗೊತ್ತಿದ್ದರೂ ಡ್ರೈವರ್‌ರನ್ನು ನೇಮಿಸಿಕೊಂಡ ಹಾಗೆ.
- ನೀವೇ ಮಾಡುವುದಕ್ಕಿಂತ ಕೆಲಸವನ್ನು ಔಟ್‌ಸೋರ್ಸ್ ಮಾಡುವುದರಿಂದ ಹೆಚ್ಚು ಹಣವನ್ನು ಗಳಿಸುವ ಸಾಧ್ಯತೆ ಹೆಚ್ಚಿನದಾಗಿರುತ್ತದೆ. ರೈಲಲ್ಲಿ ಪ್ರಯಾಣಿಸುವುದಕ್ಕಿಂತ ನಿಮ್ಮದೇ ಕಾರಿನಲ್ಲಿ ಪ್ರಯಾಣಿಸುವುದು ಅತ್ಯಂತ ವೆಚ್ಚದಾಯಕವಾಗಿರುತ್ತದೆ.
- ನಿಮ್ಮ ಇಷ್ಟದ / ಆಯ್ಕೆಯ ಚಟುವಟಿಕೆಗಳಲ್ಲಿ ಈ ವೇಳೆ ಸಮಯವನ್ನು ನೀವು ತೊಡಗಿಸಬಹುದು.
ವೃತ್ತಿಪರ ಫಂಡ್ ನಿರ್ವಹಣೆಯು ಮ್ಯೂಚುವಲ್ ಫಂಡ್ಸ್‌ನ ಉತ್ತಮ ಅನುಕೂಲಗಳ ಪೈಕಿ ಒಂದಾಗಿದೆ. ಎಡಭಾಗದಲ್ಲಿರುವ ಇನ್ಫೋಗ್ರಾಫಿಕ್‌ಗಳು ಎಲ್ಲ ಇತರೆ ಮಾಹಿತಿಯನ್ನು ಹೊಂದಿರುತ್ತವೆ. ಈ ಅನುಕೂಲಗಳನ್ನು ನೋಡಿದರೆ, ಯಾವುದೇ ಇತರ ಹೂಡಿಕೆ ವಿಧಾನಗಳನ್ನು ಜನರು ಹುಡುಕುವ ಅಗತ್ಯವೇ ಇರುವುದಿಲ್ಲ.
434