ಮ್ಯೂಚುವಲ್ ಫಂಡ್‌ನಲ್ಲಿ ಟೋಟಲ್ ರಿಟರ್ನ್ ಇಂಡೆಕ್ಸ್‌ (ಟಿ.ಆರ್.ಐ) ಎಂದರೇನು?

ಮ್ಯೂಚುವಲ್ ಫಂಡ್‌ನಲ್ಲಿ ಒಟ್ಟು ಟೋಟಲ್ ರಿಟರ್ನ್ ಇಂಡೆಕ್ಸ್‌ (ಟಿ.ಆರ್.ಐ) ಎಂದರೇನು? zoom-icon

ಈಕ್ವಿಟಿ ಇಂಡೆಕ್ಸ್‌ಗಳನ್ನು ಮೌಲ್ಯೀಕರಿಸುವಲ್ಲಿ ಟೋಟಲ್ ರಿಟರ್ನ್ ಇಂಡೆಕ್ಸ್, (ಟಿ.ಆರ್.ಐ), ಮಹತ್ವದ ಪಾತ್ರ ವಹಿಸುತ್ತದೆ. 

ಇಂಡೆಕ್ಸ್‌ನ ಟೋಟಲ್ ರಿಟರ್ನ್ ವೇರಿಯಂಟ್‌ ಬಂಡವಾಳ ಗಳಿಕೆಯ ಜೊತೆಗೆ ಆ ಇಂಡಕ್ಸ್‌ನಲ್ಲಿರುವ ಎಲ್ಲ ಘಟಕಗಳಗುಚ್ಛದಿಂದ ಉತ್ಪಾದನೆಯಾದ ಎಲ್ಲ ಡಿವಿಡೆಂಡ್‌ಗಳು/ ಬಡ್ಡಿ ಪಾವತಿಯನ್ನೂ ಗಣನೆಗೆ ತೆಗೆದುಕೊಳ್ಳುತ್ತದೆ. ಹೀಗಾಗಿ, ಒಂದು ಮ್ಯೂಚುವಲ್ ಫಂಡ್‌ ಸ್ಕೀಮ್‌ಗಳನ್ನು ಹೋಲಿಕೆ ಮಾಡಲು TRI ಹೆಚ್ಚು ಸೂಕ್ತವಾದ ವಿಧಾನವಾಗಿದೆ.

TRI ಪ್ರಮುಖ ಲಕ್ಷಣಗಳು:

ಸೆಬಿ ಮ್ಯಾಂಡೇಟ್: 2018 ರಲ್ಲಿ ಮ್ಯೂಚುವಲ್ ಫಂಡ್‌ನ ಕಾರ್ಯಕ್ಷಮತೆಯನ್ನು ಮೌಲೀಕರಿಸಲು TRI ಬಳಕೆಯನ್ನು ಸೆಬಿ ಕಡ್ಡಾಯಗೊಳಿಸಿದೆ. ಈಗ, ಕೇವಲ ಬಂಡವಾಳ ಹೆಚ್ಚಳವನ್ನು ಮಾತ್ರ ಪರಿಗಣಿಸುವ ಪ್ರೈಸ್ ರಿಟರ್ನ್ ಇಂಡೆಕ್ಸ್ (ಹಿಂದಿನ ವಿಧಾನ) ಬದಲಿಗೆ ಟೋಟಲ್ ರಿಟರ್ನ್ ಇಂಡೆಕ್ಸ್ ಆಧರಿಸಿ ತನ್ನ ಕಾರ್ಯಕ್ಷಮತೆಯನ್ನು ಮ್ಯೂಚುವಲ್ ಫಂಡ್‌ಗಳು ಬಹಿರಂಗಗೊಳಿಸಬೇಕು. ಇದರಿಂದ ಹೂಡಿಕೆದಾರರ ವಿಶ್ವಾಸ ಹೆಚ್ಚುವುದಲ್ಲದೇ, ಉದ್ಯಮದ ಮಾನದಂಡಗಳನ್ನು ಎತ್ತಿಹಿಡಿಯುತ್ತದೆ.
ಡಿವಿಡೆಂಡ್‌ಗಳನ್ನು ಒಳಗೊಳ್ಳುತ್ತದೆ: ಈ ಆದಾಯದಲ್ಲಿ ಬೆಂಚ್‌ಮಾರ್ಕ್‌ ಇಂಡೆಕ್ಸ್‌ನಲ್ಲಿನ ಷೇರು ಡಿವಿಡೆಂಡ್‌ಗಳು, ಬಾಂಡ್‌ಗಳ ಬಡ್ಡಿ ಮತ್ತು ಇತರ ಆದಾಯ ಮೂಲಗಳನ್ನೂ ಸೇರಿಸಲಾಗುತ್ತದೆ. 
ಮರುಹೂಡಿಕೆ: ಡಿವಿಡೆಂಡ್‌ಗಳಂತಹ ಉತ್ಪಾದನೆಯಾದ ಆದಾಯವನ್ನು ಸೂಚ್ಯಂಕಕ್ಕೆ ಮರು ಹೂಡಿಕೆ ಮಾಡಲಾಗುತ್ತದೆ ಎಂದು ಟಿ.ಆರ್.ಐ ಭಾವಿಸುತ್ತದೆ. 
ಹೂಡಿಕೆದಾರರ ಪಾರದರ್ಶಕತೆ: ಫಂಡ್‌ನ ಕಾರ್ಯಕ್ಷಮತೆಯ ವಾಸ್ತವ ಮತ್ತು ಪಾರದರ್ಶಕ ದೃಷ್ಟಿಕೋನವನ್ನು ಇದು ಒದಗಿಸುತ್ತದೆ. ಸ್ಕೀಮ್‌ನ ಬೆಳವಣಿಗೆ ಮತ್ತು ಕಾರ್ಯಕ್ಷಮತೆಯನ್ನು ಕಾಲದ ಆಧಾರದಲ್ಲಿ ವಿಶ್ಲೇಷಿಸಲು ಮಾರ್ಗದರ್ಶಿ ಉಲ್ಲೇಖವಾಗಿ ಇದು ಕೆಲಸ ಮಾಡುತ್ತದೆ.
ದೀರ್ಘಕಾಲೀನ ಗುರಿಗಳು: ದೀರ್ಘಕಾಲದಲ್ಲಿ ಹಣವನ್ನು ಮೌಲೀಕರಿಸುವಲ್ಲಿ ಟಿ.ಆರ್.ಐ ಸೂಕ್ತವಾಗಿದೆ.

ಹಕ್ಕು ನಿರಾಕರಣೆ

ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.
 

285

ಮ್ಯೂಚುವಲ್‌ ಫಂಡ್‌ ಸೂಕ್ತವೇ??