ವಿಭಿನ್ನ ರೀತಿಯ ಈಕ್ವಿಟಿ ಫಂಡ್‌ಗಳು ಲಭ್ಯವಿವೆಯೇ?

ವಿಭಿನ್ನ ರೀತಿಯ ಈಕ್ವಿಟಿ ಫಂಡ್‌ಗಳು ಲಭ್ಯವಿವೆಯೇ? zoom-icon

ಹೂಡಿಕೆದಾರರ ವಿವಿಧ ಅಗತ್ಯಗಳನ್ನು ಪೂರೈಸುವ ವಿವಿಧ ಈಕ್ವಿಟಿ ಫಂಡ್‌ಗಳಿವೆ. ಎಲ್ಲದರ ವಿಶಾಲ ಉದ್ದೇಶವೇನೆಂದರೆ ದೀರ್ಘಕಾಲದಲ್ಲಿ ಗಳಿಕೆಯನ್ನು ಸೃಜಿಸುವುದೇ ಆಗಿರುತ್ತದೆ.

ಇದನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು, ಒಲಿಂಪಿಕ್ಸ್‌ ಗೇಮ್ಸ್‌ಗೆ ನಾವು ಕಳುಹಿಸುವ ತಂಡವನ್ನು ನೋಡೋಣ. ಇದರಲ್ಲಿ ಹಲವು ಆಟಗಾರರಿರುತ್ತಾರೆ ಮತ್ತು ವಿವಿಧ ಕ್ರೀಡೆಗಳಿಗೂ ಇದರಲ್ಲಿ ತಂಡಗಳಿರುತ್ತವೆ. ಒಲಿಂಪಿಕ್‌ ಗೇಮ್ಸ್‌ನಲ್ಲಿ ಅತ್ಯಂತ ಪ್ರಮುಖ ಇವೆಂಟ್‌ಗಳೆಂದರೆ “ಟ್ರ್ಯಾಕ್‌ ಮತ್ತು ಫೀಲ್ಡ್‌” ಇವೆಂಟ್‌ ಆಗಿರುತ್ತದೆ. ಈ ಇವೆಂಟ್‌ಗಳಿಗೂ ನಾವು ಗುಂಪುಗಳನ್ನು ಕಳುಹಿಸುತ್ತೇವೆ. ಇದರಲ್ಲಿ 100 ಮೀಟರ್‌ ಓಟದಿಂದ ದೀರ್ಘದೂರದ ಓಟದವರೆಗೂ ಕೆಲವು ರೇಸ್‌ಗಳಿರುತ್ತವೆ. ಮ್ಯಾರಥಾನ್‌ ಕೂಡ ಇರುತ್ತದೆ. ಆದರೆ, ಇಡೀ ತಂಡವೇ ಒಲಿಂಪಿಕ್ಸ್‌ ಗೇಮ್ಸ್‌ನಲ್ಲಿ ಸ್ಫರ್ಧಿಸುವುದಕ್ಕೆಂದು ತೆರಳಿದರೂ ವಿಭಿನ್ನ ಸಾಮರ್ಥ್ಯವನ್ನು ಹೊಂದಿರುವ ವಿಭಿನ್ನ ಆಟಗಾರರು ಇರುತ್ತಾರೆ.

ಮ್ಯೂಚುವಲ್‌ ಫಂಡ್‌ಗಳ ವಿಚಾರದಲ್ಲೂ ಹೀಗೆಯೇ ನಡೆಯುತ್ತದೆ. ಇಡೀ ಒಲಿಂಪಿಕ್ಸ್‌ ತಂಡಕ್ಕೆ  ಎಲ್ಲ ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳು  ಸಮಾನವಾದರೆ, ಈಕ್ವಿಟಿ ಫಂಡ್‌ಗಳು ಅದರೊಳಗಿನ ಗುಂಪುಗಳಿಗೆ ಸಮಾನವಾಗಿದೆ. ಈ ಗುಂಪು ವಿವಿಧ ಟ್ರ್ಯಾಕ್‌ ಮತ್ತು ಫೀಲ್ಡ್‌  ಇವೆಂಟ್‌ಗಳಲ್ಲಿ ಭಾಗವಹಿಸುತ್ತವೆ. ನಾವು ಈಗ ನೋಡಿದಂತೆ, ಟ್ರ್ಯಾಕ್‌ ಮತ್ತು ಫೀಲ್ಡ್‌ ಇವೆಂಟ್‌ನಲ್ಲಿ ಹಲವು ಉಪ ವಿಭಾಗಗಳಿರುತ್ತವೆ. ಇದೇ ರೀತಿ, ಈಕ್ವಿಟಿ ಫಂಡ್‌ಗಳಲ್ಲೂ ಹಲವು ಸ್ಕೀಮ್‌ಗಳಿವೆ.

435

ಮ್ಯೂಚುವಲ್‌ ಫಂಡ್‌ ಸೂಕ್ತವೇ??