ಮೊದಲಿಗೆ, ನಿಮ್ಮ ಹೂಡಿಕೆ ಅಗತ್ಯಕ್ಕೆ ತಕ್ಕಂತೆ ನೀವು ಸರಿಯಾದ ಸ್ಕೀಮ್ ಆಯ್ಕೆ ಮಾಡಿಕೊಳ್ಳುವುದು ಮುಖ್ಯ. ಇದನ್ನು ನಾವು ಹೀಗೆ ಅರ್ಥ ಮಾಡಿಕೊಳ್ಳೋಣ.
ನೀವು ಎಲ್ಲಿಗಾದರೂ ಪ್ರಯಾಣ ಮಾಡಲು ನಿರ್ಧರಿಸಿದರೆ, ಯಾವ ರೀತಿ ತೆರಳಬೇಕು ಎಂದು ಬಯಸುತ್ತೀರಿ? ನೀವು ನಡೆದೇ ಹೋಗುತ್ತೀರೋ, ಅಟೋ ರಿಕ್ಷಾದಲ್ಲಿ ಹೋಗುತ್ತೀರೋ, ವಿಮಾನ ಅಥವಾ ರೈಲಿನಲ್ಲಿ ಪ್ರಯಾಣಿಸುತ್ತೀರೋ ಎಂಬುದನ್ನು ನೀವು ಹೋಗುತ್ತಿರುವ ಸ್ಥಳ, ನಿಮ್ಮ ಬಜೆಟ್ ಮತ್ತು ಪ್ರಯಾಣದ ಸಮಯವನ್ನು ಅವಲಂಬಿಸಿ ನಿರ್ಧರಿಸಲಾಗುತ್ತದೆ.
ಹಣಕಾಸಿನ ಗುರಿಗಳಿಗೆ ಯೋಜನೆ ರೂಪಿಸುವುದು ಕೂಡ ಇದೇ ಸಿದ್ಧಾಂತಗಳನ್ನು ಅನುಸರಿಸುತ್ತದೆ.
ವಿಭಿನ್ನ ಪ್ರಯಾಣ ಅಗತ್ಯಗಳಿಗೆ ವಿಭಿನ್ನ ಪ್ರಯಾಣ ವಿಧಾನಗಳನ್ನು ಬಳಸಲಾಗುತ್ತದೆ. ಹಾಗೆಯೇ ವಿಭಿನ್ನ ಸ್ಕೀಮ್ಗಳನ್ನು (ಅಥವಾ ಸ್ಕೀಮ್ಗಳ ಸಂಯೋಜನೆ) ವಿಭಿನ್ನ ಅಗತ್ಯಗಳಿಗೆ ಬಳಸಲಾಗುತ್ತದೆ.
ಅತ್ಯಂತ ಅಲ್ಪಕಾಲದ ಅಗತ್ಯಕ್ಕೆ ನಾವು ಲಿಕ್ವಿಡ್ ಫಂಡ್ಗಳನ್ನು ಬಳಸಬಹುದು. ಮಧ್ಯಮಾವಧಿಗೆ ಇನ್ಕಮ್ ಫಂಡ್ಗಳು ಮತ್ತು ದೀರ್ಘಾವಧಿ ಅಗತ್ಯಕ್ಕೆ ಈಕ್ವಿಟಿ ಫಂಡ್ಗಳನ್ನು (ಅಥವಾ ವಿಭಿನ್ನ ಫಂಡ್ಗಳ ಸಂಯೋಜನೆ) ಬಳಕೆ ಮಾಡಬಹುದು. ವಿಭಿನ್ನ ಹೂಡಿಕೆದಾರರು ತಮ್ಮ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ ಅನುಗುಣವಾಗಿ ಒಂದೇ ಅಸೆಟ್ ಕ್ಯಾಟಗರಿಯ ವಿಭಿನ್ನ ಸ್ಕೀಮ್ಗಳಲ್ಲಿ ಹೂಡಿಕೆ ಮಾಡಬಹುದು.
ನೆನಪಿಡಿ, ಪ್ರತಿ ಹೂಡಿಕೆದಾರರ ಅಗತ್ಯಕ್ಕೂ ಮ್ಯೂಚುವಲ್ ಫಂಡ್ಗಳಲ್ಲಿ ಪರಿಹಾರ ಲಭ್ಯವಿವೆ. ಆದರೆ, ಯಾವ ಪರಿಹಾರ ಸೂಕ್ತ ಎಂದು ಕಂಡುಕೊಳ್ಳುವುದು ಅತ್ಯಂತ ಮುಖ್ಯವಾಗಿರುತ್ತದೆ.