ಹೌದು, ನಿಮ್ಮ ಜೀವನದ ಗುರಿಗಳಿಗೆ ಪ್ಲಾನ್ ಮಾಡಲು ಮ್ಯೂಚುವಲ್ ಫಂಡ್ಗಳು ಸಹಾಯಕ!
· ರಜಪೂತ್, 15-20 ವರ್ಷಗಳ ನಂತರ ನಿವೃತ್ತಿಯಾದ ಮೇಲೆ ಗುಡ್ಡ ಪ್ರದೇಶದಲ್ಲಿ ಒಂದು ಫಾರ್ಮ್ಹೌಸ್ ಅನ್ನು ಖರೀದಿಸಿ ನಗರದಿಂದ ದೂರದಲ್ಲಿ ವಾಸಿಸುವ ಯೋಜನೆ ಹಾಕಿದ್ದಾರೆ.
· ಶ್ರೀಮತಿ ಪಟೇಲ್ಗೆ ಯಾವುದೇ ನಿವೃತ್ತಿ ಲಾಭಗಳು ಸಿಗಲಿಲ್ಲ. ಅವರ ಬಳಿ ಸೇವಿಂಗ್ಸ್ ಇದ್ದರೂ, ಅವರ ದೈನಂದಿನ ವೆಚ್ಚವನ್ನು ನಿಭಾಯಿಸಲು ನಿಯತ ಆದಾಯ ನೀಡುವ ಹೂಡಿಕೆಯೊಂದು ಅವರಿಗೆ ಬೇಕಾಗಿದೆ.
· ಅವರ ವಹಿವಾಟಿನಿಂದ ಗಳಿಸಿದ ಹೆಚ್ಚುವರಿ ಹಣ ಇದೆ ಮತ್ತು ಅವರು ಅದನ್ನು ಹಾಗೆಯೇ ಬ್ಯಾಂಕ್ ಖಾತೆಯಲ್ಲಿ ಬಿಟ್ಟಿದ್ದಾರೆ. ಅವರು ಸ್ವಲ್ಪ ದಿನಗಳ ನಂತರ ಪೂರೈಐಕೆದಾರರು ಮತ್ತು ಸಿಬ್ಬಂದಿಗೆ ಪಾವತಿಮಾಡಬೇಕು.
ಈ ಮೇಲಿನದು ನಿಜವಾದ ಜೀವನದ ಸನ್ನಿವೇಶಗಳು. ಈ ಹೂಡಿಕೆದಾರರಿಗೆ ಯಾವುದೇ ಆಯ್ಕೆಗಳು ಲಭ್ಯವಿವೆಯೇ?
ಹೌದು! ಮ್ಯೂಚುವಲ್ ಫಂಡ್ಗಳು!
ವಿಭಿನ್ನ ಹೂಡಿಕೆ ಉದ್ದೇಶಗಳಿಗೆ ವಿಭಿನ್ನ ರೀತಿಯ ಸ್ಕೀಮ್ಗಳನ್ನು ಮ್ಯೂಚುವಲ್ ಫಂಡ್ಗಳು ಒದಗಿಸುತ್ತವೆ. ಉದಾಹರಣೆಗೆ
- ನಿವೃತ್ತಿಗೆ ಸಂಚಿತ ನಿಧಿಯನ್ನು ರೂಪಿಸುವಂತಹ ದೀರ್ಘಕಾಲದ ಗುರಿಗಳಿಗೆ ನೀವು ಈಕ್ವಿಟಿ ಮತ್ತು ಬ್ಯಾಲೆನ್ಸ್ಡ್ ಫಂಡ್ಗಳನ್ನು
- ಪರಿಗಣಿಸಬಹುದು. ಕಡಿಮೆ ರಿಸ್ಕ್ನ ಆದಾಯಕ್ಕಾಗಿ ನೀವು ಬಾಂಡ್ ಫಂಡ್ ಅನ್ನು ಪರಿಗಣಿಸಬಹುದು.
- ಎಲ್ಲಿ ಹೂಡಿಕೆ ಮಾಡಬೇಕು ಎಂದು ನಿರ್ಧರಿಸುವವರೆಗೆ ಹಣವನ್ನು ಇಡಲು ನೀವು ಲಿಕ್ವಿಡ್ ಫಂಡ್ ಅನ್ನು ಪರಿಗಣಿಸಬಹುದು.
ತಮ್ಮ ಗುರಿಗಳ ಬಗ್ಗೆ ಸ್ಪಷ್ಟವಿದ್ದಾಗ ಹೂಡಿಕೆಯನ್ನು ಯೋಜಿಸಲು ಹೂಡಿಕೆದಾರರಿಗೆ ವಿಭಿನ್ನ ರೀತಿಯ ಹೂಡಿಕೆ ಅವಕಾಶವನ್ನು ಮ್ಯೂಚುವಲ್ ಫಂಡ್ಗಳು ಒದಗಿಸುತ್ತವೆ.