ಈ ಮೇಲಿನ ಪ್ರಶ್ನೆಗೆ ಯಾವುದು ಸರಿಯಾದ ಉತ್ತರವಾಗಬಹುದು ಎಂದು ಅರ್ಥ ಮಾಡಿಕೊಳ್ಳೋಣ.
ಹೂಡಿಕೆದಾರರೊಂದಿಗೆ ಹಲವು ಬಾರಿ ನಾವು ಸಂವಾದ ನಡೆಸಿದಾಗ ನಾವು ಕಂಡುಕೊಂಡ ಸಂಗತಿಯೆಂದರೆ, ಹೂಡಿಕೆದಾರರು ತಾವು ಹೂಡಿಕೆ ಮಾಡುವ ಅವಧಿಗೆ ಅತ್ಯುತ್ತಮ ರಿಟರ್ನ್ಸ್ ನೀಡುವ ಸ್ಕೀಮ್ ಅನ್ನು ಕಂಡುಕೊಳ್ಳುವುದೇ ಪ್ರಮುಖ ಅಂಶವಾಗಿರುತ್ತದೆ.
ವಾಸ್ತವದಲ್ಲಿ, ಎಷ್ಟು ಕಾಲದವರೆಗೆ ಅವರು ಹೂಡಿಕೆ ಮಾಡಿರಬೇಕು ಎಂದು ಊಹಿಸುವುದೇ ಹೂಡಿಕೆದಾರರಿಗೇ ಕಷ್ಟದ ಸಂಗತಿಯಾಗಿರುತ್ತದೆ. ಅದರ ನಂತರ, ಮಾರ್ಕೆಟ್‌ಹೇಗೆ ವರ್ತಿಸುತ್ತದೆ ಎಂದು ಊಹಿಸುವುದೂ ಅಸಾಧ್ಯ. ಅಷ್ಟೇ ಅಲ್ಲ, ಯಾವ ಸ್ಕೀಮ್ ಮತ್ತು ಯಾವ ಮ್ಯಾನೇಜರ್ ಈ ಅವಧಿಯಲ್ಲಿ ಹೆಚ್ಚು ರಿಟರ್ನ್ಸ್‌ಕೊಡುತ್ತಾರೆ ಎಂದು ಊಹಿಸುವುದು ಕೂಡ ಸುಲಭವಲ್ಲ.
ಒಂದು ಸನ್ನಿವೇಶದಲ್ಲಿ ಸೂಕ್ತ ಎನಿಸಿರುವುದು ಇನ್ನೊಂದು ಪರಿಸ್ಥಿತಿಯಲ್ಲಿ ಉತ್ತಮವಾಗಿಲ್ಲದೇ ಇರಬಹುದು. ಉದಾಹರಣೆಗೆ, ನಿಮ್ಮದೇ ಚಳಿಗಾಲದ ಉಡುಪುಗಳು ನಿಮಗೆ ಬೇಸಿಗೆ ಕಾಲದಲ್ಲಿ ಸೂಕ್ತವಾಗದೇ ಇರಬಹುದು. ಇದೇ ರೀತಿ, ಒಂದು ಬಾಳೆಹಣ್ಣು ಮಗುವಿಗೆ ಉತ್ತಮವಾಗಿದ್ದರೆ, ಅದೇ ಬಾಳೆಹಣ್ಣು ಅವರ ಡಯಾಬೆಟಿಕ್ ತಂದೆಗೆ ಸೂಕ್ತವಲ್ಲ.
ಇದೇ ರೀತಿ ಭವಿಷ್ಯವನ್ನು ಸರಿಯಾಗಿ ಊಹಿಸಲು ಬಹಳಷ್ಟು ಪರಿಣಿತರಿಗೇ ಸಾಧ್ಯವಾಗದ ಹಲವಾರು ಉದಾಹರಣೆಗಳಿವೆ. ಇದೇ ಕಾರಣಕ್ಕೆ, ಈ ಹಿಂದಿನ ಪರ್ಫಾರ್ಮೆನ್ಸ್ ಚೆನ್ನಾಗಿದೆ ಎಂದ ಮಾತ್ರಕ್ಕೆ ಮೋಡಿಗೆ ಒಳಗಾಗಬಾರದು. ತಮ್ಮ ಸನ್ನಿವೇಶಕ್ಕೆ ಮತ್ತು ಭವಿಷ್ಯದ ಅಗತ್ಯಕ್ಕೆ ಸೂಕ್ತವಾದ ವಿಶಿಷ್ಟ ಸ್ಕೀಮ್‌ಅನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.