ನೀವು ದೂರದ ದೇಶಕ್ಕೆ ಪ್ರಯಾಣಿಸಬೇಕಿದೆ ಮತ್ತು ವಿಮಾನವೊಂದೇ ಪ್ರಯಾಣದ ಆಯ್ಕೆಯಾಗಿದೆ ಎಂದು ಊಹಿಸಿಕೊಳ್ಳಿ.
ವಿಮಾನದಲ್ಲಿ ಹಾರಾಟ ನಡೆಸಲು ಇರುವ ವಿವಿಧ ಕಂಟ್ರೋಲ್ಗಳನ್ನು ಯಾವ ಸನ್ನಿವೇಶದಲ್ಲಿ ತಿಳಿದುಕೊಂಡಿರಬೇಕು? ಅಥವಾ ವಿಭಿನ್ನ ಕಂಟ್ರೋಲ್ ಟವರುಗಳಿಂದ ಪೈಲಟ್ಗಳು ವಿವಿಧ ಸಂಕೇತಗಳನ್ನು ಸ್ವೀಕರಿಸುತ್ತಾರೆಯೇ? ಅಥವಾ ರೇಡಿಯೋ ಸಿಸ್ಟಮ್ ಅನ್ನು ನಿರ್ವಹಿಸುವುದು ಹೇಗೆ?
ಇದನ್ನೆಲ್ಲ ನೀವು ಪೈಲಟ್ ಅಥವಾ ಸಹ ಪೈಲಟ್ ಆಗಿದ್ದರೆ ಮಾತ್ರ ತಿಳಿದುಕೊಂಡಿರಬೇಕು. ನೀವು ಕೇವಲ ಪ್ರಯಾಣಿಕರಾಗಿದ್ದರೆ, ನಿಮ್ಮ ಅಗತ್ಯವನ್ನು ವಿಮಾನದಲ್ಲಿ ಒದಗಿಸಲಾಗುತ್ತದೆಯೇ ಮತ್ತು ಇದಕ್ಕೆ ನಿಮಗೆ ಏನು ಬೇಕಿದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು.
ಹೂಡಿಕೆ ವಿಚಾರದಲ್ಲಿ, ನಿಮ್ಮ ಹೂಡಿಕೆಗಳನ್ನು ನೀವೇ ನಿರ್ವಹಿಸುತ್ತಿರುವಾಗ ಸ್ಟಾಕ್, ಬಾಂಡ್ ಮತ್ತು ಮನಿ ಮಾರ್ಕೆಟ್ಗಳನ್ನು ತಿಳಿದುಕೊಳ್ಳಬೇಕು. ಆದಾಗ್ಯೂ, ನಿಮ್ಮ ಹಣಕಾಸು ಗುರಿಗಳನ್ನು ಪೂರೈಸುವ ಉದ್ದೇಶಕ್ಕೆ ಮ್ಯೂಚುವಲ್ ಫಂಡ್ಗಳನ್ನು ಬಳಸಲು ನೀವು ನಿರ್ಧರಿಸಿದರೆ, ಹೇಗೆ ಸ್ಟಾಕ್ಗಳು, ಬಾಂಡ್ ಮತ್ತು ಹಣ ಮಾರ್ಕೆಟ್ಗಳು ಹೇಗೆ ಕೆಲಸ ಮಾಡುತ್ತವೆ ಎಂದು ತಿಳಿಯುವ ಅಗತ್ಯವಿಲ್ಲ. ಯಾವ ಮ್ಯೂಚುವಲ್ ಫಂಡ್ಗಳು ಯಾವ ಉದ್ದೇಶವನ್ನು ಪೂರೈಸುತ್ತವೆ ಎಂದಷ್ಟೇ ತಿಳಿದುಕೊಂಡರೆ ಸಾಕು.
ಮ್ಯೂಚುವಲ್ ಫಂಡ್ಗಳನ್ನು ಬಳಸಿ ಮತ್ತು ವಾಹನದ ವಿವಿಧ ಕಂಟ್ರೋಲ್ಗಳನ್ನು ನಿರ್ವಹಿಸಲು ಪರಿಣಿತ ಫಂಡ್ ಮ್ಯಾನೇಜ್ಮೆಂಟ್ಗೆ ಅವಕಾಶ ನೀಡಿ. ನಿಮ್ಮ ಪ್ರಯಾಣವನ್ನು ಆಧರಿಸಿದ ವಾಹನವನ್ನು ಆಯ್ಕೆ ಮಾಡಿಕೊಂಡು, ಆರಾಮವಾಗಿರಿ.