ರಿಸ್ಕ್ (ಅಪಾಯ) ನಿರ್ವಹಿಸಲು ಮ್ಯೂಚುವಲ್‌ ಫಂಡ್‌ಗಳು ಹೇಗೆ ಸಹಾಯ ಮಾಡುತ್ತವೆ?

ರಿಸ್ಕ್ (ಅಪಾಯ) ನಿರ್ವಹಿಸಲು ಮ್ಯೂಚುವಲ್‌ ಫಂಡ್‌ಗಳು ಹೇಗೆ ಸಹಾಯ ಮಾಡುತ್ತವೆ? zoom-icon

ರಿಸ್ಕ್‌ಗಳು ಹಲವು ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ, ನೀವು ಒಂದು ಕಂಪನಿಯ ಷೇರನ್ನು ಹೊಂದಿದ್ದರೆ, ಇದರಲ್ಲಿ ಬೆಲೆಯ ರಿಸ್ಕ್ ಇರುತ್ತದೆ ಅಥವಾ ಮಾರ್ಕೆಟ್‌ ರಿಸ್ಕ್ ಇರುತ್ತದೆ ಅಥವಾ ಕಂಪನಿಗೆ  ಸಂಬಂಧಿಸಿದ ರಿಸ್ಕ್ಇರುತ್ತದೆ. ಆ ಕಂಪನಿಯ ಷೇರುಮಾತ್ರ ಇಳಿಯಬಹುದು ಅಥವಾ ಯಾವುದೇ ಒಂದು ಅಥವಾ ಮೇಲಿನ ಹಲವು ಕಾರಣದಿಂದ ಬೆಲೆ ಕುಸಿಯಬಹುದು.

ಆದರೆ, ಮ್ಯೂಚುವಲ್‌ ಫಂಡ್‌ನಲ್ಲಿ, ಒಂದು ಪೋರ್ಟ್‌ಫೋಲಿಯೋದಲ್ಲಿ ಹಲವು ಸೆಕ್ಯುರಿಟಿಗಳಿರುತ್ತವೆ. ಹೀಗಾಗಿ ಇದು “ವೈವಿಧ್ಯತೆ” ಯನ್ನು ಒದಗಿಸುತ್ತದೆ. ಅಷ್ಟಕ್ಕೂ, ಮ್ಯೂಚುವಲ್‌ ಫಂಡ್‌ ಹೂಡಿಕೆಯಲ್ಲಿ ವೈವಿಧ್ಯತೆಯೇ ಅತಿ ದೊಡ್ಡ ಲಾಭವಾಗಿದೆ. ಒಂದು ಅಥವಾ ಕೆಲವು ಸೆಕ್ಯುರಿಟಿಗಳ ಬೆಲೆ ಇಳಿಕೆಯಾದರೆ ಪೋರ್ಟ್‌ಫೋಲಿಯೋ ಪರ್ಫಾರ್ಮೆನ್ಸ್‌ಗೆ ಪ್ರಮುಖವಾಗಿ ಬಾಧೆಯಾಗುವುದಿಲ್ಲ.

ಇನ್ನೊಂದು ಪ್ರಮುಖ ರಿಸ್ಕ್‌ ಅನ್ನು ಗಮನದಲ್ಲಿರಿಸಿಕೊಳ್ಳುವುದೆಂದರೆ, ಲಿಕ್ವಿಡಿಟಿ ರಿಸ್ಕ್‌. ಲಿಕ್ವಿಡಿಟಿ ಎಂದರೇನು? ಒಂದು ಸ್ವತ್ತನ್ನು ನಗದು ರೂಪಕ್ಕೆ ಪರಿವರ್ತಿಸುವುದು ಎಷ್ಟು ಸುಲಭ ಎಂಬ ಅಂಶವಾಗಿದೆ. ಒಬ್ಬ ಹೂಡಿಕೆದಾರ  ಒಂದು ಹೂಡಿಕೆ ಮಾಡಿದ್ದು, ಇದರಲ್ಲಿ 10 ವರ್ಷಗಳ ಲಾಕ್ಇನ್‌ ಅವಧಿ ಇರುತ್ತದೆ. ಆಕೆಗೆ ಹಣ 3 ನೇ ವರ್ಷಕ್ಕೆ ಅಗತ್ಯವಿರುತ್ತದೆ. ಇದು ಲಿಕ್ವಿಡಿಟಿ (ದ್ರವ್ಯತೆಯ) ಸಮಸ್ಯೆಯನ್ನು ಉಂಟುಮಾಡುತ್ತದೆ. ಈ ಸಮಯದಲ್ಲಿ ಆಕೆಗೆ ನಗದು ಪಡೆಯುವುದು ಪ್ರಮುಖವಾಗುತ್ತದೆ. ರಿಟರ್ನ್ಸ್‌ (ಗಳಿಕೆ) ಪಡೆಯುವುದಲ್ಲ. ಮ್ಯೂಚುವಲ್‌ ಫಂಡ್‌ಗಳು ನಿಯಮಾವಳಿ ಮತ್ತು ರಚನೆಯ ಮೂಲಕ ಅಪಾರವಾದ ಲಿಕ್ವಿಡಿಟಿಯನ್ನು ಒದಗಿಸುತ್ತವೆ. ಹೂಡಿಕೆದಾರರಿಗೆ ಹೂಡಿಕೆ ಮತ್ತು ರಿಡೆಂಪ್ಷನ್‌ನ ಅನುಕೂಲವನ್ನು ಒದಗಿಸುವಂತೆ ಪೋರ್ಟ್‌ಫೋಲಿಯೋಗಳನ್ನು ವಿನ್ಯಾಸ ಮಾಡಲಾಗಿದೆ.

436
480

ಮ್ಯೂಚುವಲ್‌ ಫಂಡ್‌ ಸೂಕ್ತವೇ??