ಹೂಡಿಕೆ ಮಾಡಲು ಯಾವುದು ಉತ್ತಮ ಆಯ್ಕೆ: ಇಟಿಎಫ್‌ಗಳು ಅಥವಾ ಇಂಡೆಕ್ಸ್‌ಡ್‌ ಫಂಡ್‌ಗಳು?

Video

ಇಂಡೆಕ್ಸ್ ಮ್ಯೂಚುವಲ್‌ ಫಂಡ್‌ಗಳು ಮತ್ತು ಇಟಿಎಫ್‌ಗಳು ಪ್ಯಾಸಿವ್ ಇನ್ವೆಸ್ಟ್‌ಮೆಂಟ್‌ ವಾಹಕಗಳಾಗಿದ್ದು, ಇವು ಸಂಬಂಧಿಸಿದ ಬೆಂಚ್‌ಮಾರ್ಕ್‌ ಇಂಡೆಕ್ಸ್‌ನಲ್ಲಿ ಹೂಡಿಕೆ ಮಾಡುತ್ತವೆ. ಮ್ಯೂಚುವಲ್‌ ಫಂಡ್‌ ರೀತಿ ಇಂಡೆಕ್ಸ್‌ ಫಂಡ್‌ಗಳು ಮತ್ತು ಷೇರುಗಳ ರೀತಿ ಇಟಿಎಫ್‌ಗಳು ಕಾರ್ಯನಿರ್ವಹಿಸುತ್ತವೆ. ಈ ಪ್ಯಾಸಿವ್ ಹೂಡಿಕೆ ಕಾರ್ಯತಂತ್ರದಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ನಿಮ್ಮ ಹೂಡಿಕೆ ಆದ್ಯತೆಯನ್ನು ಅವಲಂಬಿಸಿರುತ್ತದೆ.

ಇಟಿಎಫ್‌ಗಳು ಇಂಟ್ರಾಡೇಟ ಟ್ರೇಡ್‌ಗಳು, ಲಿಮಿಟ್ ಅಥವಾ ಆರ್ಡರ್‌ಗಳ ಸ್ಟಾಪ್ ಮಾಡುವುದು ಮತ್ತು ಶಾರ್ಟ್‌ ಸೆಲ್ಲಿಂಗ್‌ ಮಾಡುವವರಿಗೆ ಸೂಕ್ತ. ಆದರೆ ಮಾರ್ಕೆಟ್‌ನಲ್ಲಿ ಬೆಲೆ ಏರಿಕೆ ಇಳಿಕೆ ನಿಮಗೆ ಇಷ್ಟವಾದರೆ ಇಂಡೆಕ್ಸ್ ಫಂಡ್‌ಗಳು ನಿಮಗೆ ಸೂಕ್ತವಾಗಿವೆ. ಪದೇ ಪದೇ ವಹಿವಾಟು ನಡೆಸುವುದರಿಂದ ಕಮಿಷನ್ ವೆಚ್ಚ ಹೆಚ್ಚುತ್ತದೆ ಮತ್ತು ಇಟಿಎಫ್‌ಗಳಿಂದ ನಿಮ್ಮ ರಿಟರ್ನ್ ಕೂಡ ಕಡಿಮೆಯಾಗಬಹುದು. ಇಂಡೆಕ್ಸ್ ಫಂಡ್‌ಗೆ ಹೋಲಿಸಿದರೆ ಎಕ್ಸ್‌ಪೆನ್ಸ್‌ ಅನುಪಾತ ಕಡಿಮೆ ಆಗಬಹುದು. ಅದರೆ, ದೀರ್ಘ ಕಾಲೀನ ಗುರಿಗಳಿಗೆ ಗ್ರೋತ್ ಆಯ್ಕೆ ಮತ್ತು ರೆಗ್ಯುಲರ್ ಆದಾಯಕ್ಕೆ ಡಿವಿಡೆಂಡ್ ಆಯ್ಕೆಯಂತಹ ವಿವಿದ ಆಯ್ಕೆಗಳನ್ನು ನಿಮ್ಮ ಹಣಕಾಸು ಅಗತ್ಯಕ್ಕೆ ಸೂಕ್ತವಾಗಿ ಇಂಡೆಕ್ಸ್‌ ಫಂಡ್‌ಗಳು ನೀಡುತ್ತವೆ. ಒಂದು ಇಂಡೆಕ್ಸ್‌ ಫಂಡ್‌ನಲ್ಲಿ ಎಸ್‌ಐಪಿ ಮೂಲಕ ಸಣ್ಣ ಮೊತ್ತವನ್ನು ನೀವು ನಿಯತವಾಗಿ ಹೂಡಿಕೆ ಮಾಡಬಹುದು. ಇಂಡೆಕ್ಸ್ ಫಂಡ್‌ನಲ್ಲಿ ಹೂಡಿಕೆ ಮಾಡಲು ನಿಮಗೆ ಡಿಮ್ಯಾಟ್ ಖಾತೆ ಬೇಕಿರುವುದಿಲ್ಲ. ಆದರೆ ಇಟಿಎಫ್‌ನಲ್ಲಿ ಹೂಡಿಕೆ ಮಾಡಲು ನಿಮಗೆ ಡಿಮ್ಯಾಟ್ ಖಾತೆ ಅಗತ್ಯವಿರುತ್ತದೆ.

ಪ್ಯಾಸಿವ್ ಹೂಡಿಕೆಯ ಮೂಲಕ ಎರಡೂ ವಿಶಾಲವಾದ ಮಾರ್ಕೆಟ್‌ಗೆ ಎಕ್ಸ್‌ಪೋಶರ್ ಅನ್ನು ಒದಗಿಸುತ್ತಿದ್ದು, ಇವುಗಳ ಮಧ್ಯದ ಕಾರ್ಯನಿರ್ವಹಣೆ ವ್ಯತ್ಯಾಸವು ಅನುಕೂಲದ ದೃಷ್ಟಿಯಿಂದ ನಿರ್ಧಾರಕ ಅಂಶವಾಗಿರುತ್ತದೆ. ನೀವು ಮುಂಬೈನಿಂದ ಗೋವಾಗೆ ಪ್ರಯಾಣ ಮಾಡಲು ಬಯಸಿದಾಗ, ನೀವು  ರೈಲು ಅಥವಾ ರಾತ್ರಿ ಬಸ್‌ ಪ್ರಯಾಣವನ್ನು ಆಯ್ಕೆ ಮಾಡಿಕೊಳ್ಳಬಹುದು. ಇವೆರಡೂ ನಿಮ್ಮ ಉದ್ದೇಶವನ್ನು ಪೂರೈಸುತ್ತವೆ. ಆದರೆ ಅನುಕೂಲದ ದೃಷ್ಟಿಯಿಂದ ಯಾವುದನ್ನು ಆಯ್ಕೆ ಮಾಡಬೇಕು ಎಂಬುದು ವೈಯಕ್ತಿಕ ಆಯ್ಕೆಯಾಗಿರುತ್ತದೆ.

436

ಮ್ಯೂಚುವಲ್‌ ಫಂಡ್‌ ಸೂಕ್ತವೇ??