ಯಾರು ಹೆಚ್ಚು ಪ್ರೊಟೀನ್‌ಗಳು ಅಥವಾ ಕಾರ್ಬೊಹೈಡ್ರೇಟ್‌ಗಳು ಅಥವಾ ವಿಟಮಿನ್ಗಳನ್ನು ಸೇವಿಸಬೇಕು ಎಂದು ಯಾರಾದರೂ ನಿಮ್ಮನ್ನು ಕೇಳಿದರೆ ನಿಮ್ಮ ಉತ್ತರ ಏನಿರುತ್ತದೆ?
ಎಲ್ಲರೂ!
ಎಲ್ಲರಿಗೂ ಎಲ್ಲ ರೀತಿಯ ಪ್ರೊಟೀನ್‌ಗಳೂ ಅಗತ್ಯವಿರುತ್ತವೆ. ಆದರೆ ಪೌಷ್ಠಿಕಾಂಶದ ಪ್ರಮಾಣವು ವಯಸ್ಸು ಮತ್ತು ದೈಹಿಕ ಅಗತ್ಯವನ್ನು ಆಧರಿಸಿ ಪ್ರತಿವ್ಯಕ್ತಿಗೂ ಬದಲಾಗುತ್ತದೆ. ಉದಾಹರಣೆಗೆ, ವಯಸ್ಕರಿಗಿಂತ ಬೆಳೆಯುತ್ತಿರುವ ಮಕ್ಕಳಿಗೆ ಹೆಚ್ಚಿನ ಪ್ರೊಟೀನ್ ಮತ್ತು ಕಾರ್ಬೋಹೈಡ್ರೇಟ್ ಬೇಕಾಗುತ್ತದೆ. ಅವರಿಗೆ ಹೆಚ್ಚಿನ ಶಕ್ತಿ ಇರುವ ಕಾರ್ಬೊಹೈಡ್ರೇಟ್ಅನ್ನೂ ಸಾಕಷ್ಟು ಪ್ರಮಾಣದಲ್ಲಿ ಪೂರೈಸಬೇಕಾಗುತ್ತದೆ. ಇದೇ ವಿಧಾನವು ನಿಮ್ಮ ಹೂಡಿಕೆ ಪೋರ್ಟ್‌ಫೋಲಿಯೋಗೆ ಕೂಡ ಅನ್ವಯಿಸುತ್ತದೆ.
ಪ್ರತಿ ವ್ಯಕ್ತಿಯೂ ತನ್ನಹೂಡಿಕೆ ಪೋರ್ಟ್‌ಫೋಲಿಯೋದಲ್ಲಿ ಈಕ್ವಿಟಿ, ಡೆಟ್ ಫಂಡ್‌ಗಳು, ಚಿನ್ನ, ರಿಯಲ್ ಎಸ್ಟೇಟ್ ಮತ್ತು ಇತರ ಸ್ವತ್ತುಗಳಲ್ಲಿ ಹೂಡಿಕೆ ಮಾಡಬೇಕು. ಆದರೆ ಪ್ರತಿಸ್ವತ್ತಿನ ಅನುಪಾತವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಹೀಗಾಗಿ, ಪ್ರತಿಯೊಬ್ಬರೂ ಡೆಟ್ಫಂಡ್‌ಗಳಂತಹ ಖಚಿತ ಆದಾಯದ ಸ್ವತ್ತುಗಳಿಗೆ ಸ್ವಲ್ಪ ಮಟ್ಟಿನ ಎಕ್ಸ್‌ಪೋಶರ್ ಹೊಂದಿರಬೇಕು. 30 ವಯಸ್ಸಿನ ಯುವಕರಿಗಿಂತ ಹಿರಿಯನಾಗರಿಕರು ತಮ್ಮ ಪೋರ್ಟ್‌ಫೋಲಿಯೋದಲ್ಲಿ ಡೆಟ್ ಫಂಡ್‌ಗಳಿಗೆ ಹೆಚ್ಚು ಹಣವನ್ನು ಹಾಕಬೇಕಾಗುತ್ತದೆ. ಯುವಕರಲ್ಲಿ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲದ ಸಂರಕ್ಷಣಾತ್ಮಕ ಹೂಡಿಕೆದಾರರು, ಅಸ್ಥಿರ ಈಕ್ವಿಟಿಯಲ್ಲಿ ಹೂಡಿಕೆ ಮಾಡಲು ಅನುಕೂಲಕರವಾಗಿರುವವರಿಗಿಂತ ಹೆಚ್ಚಿನಮೊತ್ತವನ್ನುಡೆಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಸಾಮಾನ್ಯ ನಿಯಮವೇನೆಂದರೆ, ಡೆಟ್ ಫಂಡ್‌ಗಳಂತಹ ಫಿಕ್ಸೆಡ್ ಇನ್‌ಕಮ್ ಅಸೆಟ್‌ಗಳಲ್ಲಿ ನಿಮ್ಮ ವಯಸ್ಸಿಗೆ ಸಮಾನವಾದ ಅನುಪಾತವನ್ನು ತೊಡಗಿಸುವುದನ್ನು ಶಿಫಾರಸು ಮಾಡಲಾಗುತ್ತದೆ. ಹೊಸ ಮ್ಯೂಚುವಲ್ ಫಂಡ್ ಹೂಡಿಕೆದಾರರು ಕೂಡ ಡೆಟ್ ಫಂಡ್‌ಗಳಿಂದ ಆರಂಭ ಮಾಡಬಹುದು.