ಸಾಮಾನ್ಯವಾಗಿ, ಜನರು ತಾವೇ ಒಂದು ಸ್ಕೀಮ್ ಅನ್ನು ಆಯ್ಕೆ ಮಾಡಿದಾಗ ಅದರ ಪರ್ಫಾರ್ಮೆನ್ಸ್ ಆಧರಿಸಿ ಮಾಡುತ್ತಾರೆ. ಈ ಹಿಂದಿನ ಪರ್ಫಾರ್ಮೆನ್ಸ್ಗಳು ಹಾಗೆಯೇ ಮುಂದುವರಿಯುವುದಿಲ್ಲ ಎಂಬುದನ್ನು ಅವರು ಪರಿಗಣಿಸುವುದಿಲ್ಲ. ಸ್ಕೀಮ್ಗಳ ಪರಿಶೀಲನೆ ಮಾಡುವಾಗ ಸ್ಕೀಮ್ಗಳ ವಿವಿಧ ಅಂಶಗಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನೋಡಬೇಕು. ಉದಾಹರಣೆಗೆ, ಸ್ಕೀಮ್ನ ಉದ್ದೇಶ, ಹೂಡಿಕೆ ವ್ಯಾಪ್ತಿ, ಫಂಡ್ ಹೊಂದಿರುವ ರಿಸ್ಕ್ ಇತ್ಯಾದಿಯನ್ನು ಪರಿಶೀಲಿಸಬೇಕು. ಇದಕ್ಕೆ ಹೂಡಿಕೆದಾರರು ತಮ್ಮ ಸಮಯ ಮತ್ತು ಶ್ರಮವನ್ನು ವ್ಯಯಿಸಬೇಕಾಗುತ್ತದೆ. ವೈಶಿಷ್ಟ್ಯಗಳು ಮತ್ತು ಅಂಶಗಳನ್ನು ತಿಳಿದುಕೊಳ್ಳಲು ಸೂಕ್ತ ಪರಿಣಿತಿಯನ್ನು ಹಾಗೂ ಹಲವು ಆಯ್ಕೆಗಳಿಂದ ವಿಶ್ಲೇಷಣೆ ಮತ್ತು ಹೋಲಿಕೆ ಮಾಡುವ ಸಾಮರ್ಥ್ಯವನ್ನು ಹೂಡಿಕೆದಾರರು ಹೊಂದಿರಬೇಕು. ಮ್ಯೂಚುವಲ್ ಫಂಡ್ನ ವಿತರಕರು ಅಥವಾ ಹೂಡಿಕೆ ಸಲಹೆಗಾರರು ಇಂತಹ ಕೆಲಸಕ್ಕೆಂದೇ ಅರ್ಹತೆ ಮತ್ತು ತರಬೇತಿಯನ್ನು ಹೊಂದಿರುತ್ತಾರೆ.
ಎರಡನೆಯದಾಗಿ, ಉತ್ತಮ ಸ್ಕೀಮ್ನಲ್ಲಿ ಹೂಡಿಕೆ ಮಾಡುವುದಕ್ಕಿಂತ ಹೆಚ್ಚು ಪ್ರಮುಖವಾದ ಅಂಶವೆಂದರೆ, ಹೂಡಿಕೆದಾರರ ಪ್ರಸ್ತುತ ಸನ್ನಿವೇಶಕ್ಕೆ ಸೂಕ್ತವಾದ ಮತ್ತು ಸರಿಯಾದ ಸ್ಕೀಮ್ನಲ್ಲಿ ಹೂಡಿಕೆ ಮಾಡುವುದಾಗಿದೆ. ಹೂಡಿಕೆದಾರರಿಗೆ ತಮ್ಮ ಸನ್ನಿವೇಶಗಳ ಬಗ್ಗೆ ಚೆನ್ನಾಗಿ ಅರಿವಿರುತ್ತದೆಯಾದರೂ, ಉತ್ತಮ ಸಲಹೆಗಾರರು ಅಥವಾ ವಿತರಕರು ಸರಿಯಾದ ಪ್ರಶ್ನೆಗಳನ್ನು ಕೇಳಿ ಸರಿಯಾದ ಉದ್ದೇಶವನ್ನು ನಿರ್ಧರಿಸಲು ಅರ್ಹರಾಗಿರುತ್ತಾರೆ.
ಪೋರ್ಟ್ಫೋಲಿಯೋವನ್ನು ಒಮ್ಮೆ ರಚಿಸಿದ ನಂತರ, ಸ್ಕೀಮ್ನ ಗುಣಲಕ್ಷಣಗಳು ಮತ್ತು ಪೋರ್ಟ್ಫೋಲಿಯೋವನ್ನು ನಿಯತವಾಗಿ ಮಾನಿಟರ್ ಮಾಡುವುದು ನಿರಂತರ ಪ್ರಕ್ರಿಯೆಯಾಗಿರುತ್ತದೆ. ಈ ಸ್ಕೀಮ್ಗಳನ್ನು ಮರುಪರಿಶೀಲಿಸಲು ಕೂಡ ಸಲಹೆಗಾರ/ವಿತರಕರು ಸಹಾಯ ಮಾಡುತ್ತಾರೆ.