ಸಾಮಾನ್ಯ ವೆಚ್ಚಗಳು ಮತ್ತು ವಿವಿಧ ಹಣಕಾಸು ಗುರಿಗಳ ವೆಚ್ಚವು ಕಾಲಾನಂತರದಲ್ಲಿ ಹೆಚ್ಚುತ್ತದೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಹಣದುಬ್ಬರವು ವರ್ಷಕ್ಕೆ ಶೇ. 6 ರಲ್ಲಿದ್ದರೆ, ಅಂದಾಜು 12 ವರ್ಷಗಳಲ್ಲಿ ಗುರಿಯನ್ನು ತಲುಪುವ ವೆಚ್ಚವು ದುಪ್ಪಟ್ಟಾಗುತ್ತದೆ. ಆದರೆ, ಹಣದುಬ್ಬರವು ಶೇ. 7 ರಲ್ಲಿದ್ದರೆ, ಸಾಮಾನ್ಯವಾಗಿ ಹತ್ತು ವರ್ಷಕ್ಕೆ ದುಪ್ಪಟ್ಟಾಗುತ್ತದೆ.
ಈಗ ಹಣದುಬ್ಬರವು ಶೇ. 7 ರಲ್ಲಿದ್ದಾಗ, ನೀವು ಅಸಲು ಮೊತ್ತದ ಸಂಪೂರ್ಣ ಸುರಕ್ಷತೆಯನ್ನು ಬಯಸುತ್ತೀರಿ. ಆ ಹಣದುಬ್ಬರಕ್ಕೆ ಅತ್ಯಂತ ಹತ್ತಿರದ ರಿಟರ್ನ್ಸ್ ನೀಡುವ ಕಡೆಗಳಲ್ಲಿ ನೀವು ಹೂಡಿಕೆ ಮಾಡಬಹುದು. ನಿಮ್ಮ ಹೂಡಿಕೆಯ ಮೇಲೆ ತೆರಿಗೆಗಳು ಮತ್ತು ತೆರಿಗೆ ನಂತರದ ನಿಮ್ಮ ಹೂಡಿಕೆಯ ಮೇಲೆ ರಿಟರ್ನ್ಸ್ಗಳು ಹಣದುಬ್ಬರಕ್ಕಿಂತ ಕಡಿಮೆ ಇರುತ್ತದೆ.
ನಾವು ಕೆಲವು ಸರಳ ಅಂಕಿಸಂಖ್ಯೆಗಳನ್ನು ನೋಡೋಣ:
ಹಣದುಬ್ಬರವು ಶೇ. 7 ರದ್ದು. ನೀವು ರೂ. 100 ರಲ್ಲಿ ಏನನ್ನಾದರೂ ಈ ವರ್ಷ ಖರೀದಿ ಮಾಡುತ್ತೀರಿ ಎಂದಿಟ್ಟುಕೊಳ್ಳಿ, ನಿಮಗೆ ಇದೇ ಸಾಮಗ್ರಿಯನ್ನು ಖರೀದಿ ಮಾಡಲು ಮುಂದಿನ ವರ್ಷ 107 ರೂ. ಬೇಕಾಗುತ್ತದೆ. ಇದೇ ಸಾಮಗ್ರಿಯನ್ನು ಮತ್ತೊಂದು ವರ್ಷದ ನಂತರ ಖರೀದಿ ಮಾಡಲು ರರೂ. 114.49 ಬೇಕಾಗುತ್ತದೆ. ಅಂದಹಾಗೆ ಈ ಎರಡೂ ವರ್ಷಗಳಲ್ಲಿ ಹಣದುಬ್ಬರ ಒಂದೇ ರೀತಿ ಇದ್ದಾಗ ಈ ಲೆಕ್ಕಾಚಾರ ಅನ್ವಯವಾಗುತ್ತದೆ.
ಇದೇ ಸಮಯದಲ್ಲಿ ನಿಮಗೆ ಶೇ.6 ರಷ್ಟು ವಾರ್ಷಿಕ ರಿಟರ್ನ್ಸ್ ನೀಡುವ ಸುರಕ್ಷಿತ ವಿಧಾನದಲ್ಲಿ ಹೂಡಿಕೆ ಮಾಡಿದ್ದೀರಿ ಎಂದಿಟ್ಟುಕೊಳ್ಳಿ. ನಿಮ್ಮ 100 ರೂ.
ಇನ್ನಷ್ಟು ಓದಿ