ಭಾರತದ ಮ್ಯೂಚುವಲ್‌ ಫಂಡ್‌ಗಳು ಕೇವಲ ಭಾರತದಲ್ಲಿ ಹೂಡಿಕೆ ಮಾಡುತ್ತವೆಯೇ?

ಭಾರತದ ಮ್ಯೂಚುವಲ್‌ ಫಂಡ್‌ಗಳು ಕೇವಲ ಭಾರತದಲ್ಲಿ ಹೂಡಿಕೆ ಮಾಡುತ್ತವೆಯೇ?

ಬಹುತೇಕ ಭಾರತೀಯ ಮ್ಯೂಚುವಲ್‌ ಫಂಡ್‌ಗಳು ಭಾರತದಲ್ಲಿ ಮಾತ್ರ ಹೂಡಿಕೆ ಮಾಡುತ್ತವೆಯಾದರೂ, ಕೆಲವು ಸ್ಕೀಮ್‌ಗಳು ವಿದೇಶದ ಸೆಕ್ಯುರಿಟಿಗಳ ಮೇಲೂ ಹೂಡಿಕೆ ಮಾಡುತ್ತವೆ.

ಭಾರತದಲ್ಲಿ ಹೂಡಿಕೆದಾರರಿಗೆ ಯೂನಿಟ್‌ಗಳನ್ನು ನೀಡುವುದಕ್ಕೂ ಮೊದಲು ಷೇರು ಮತ್ತು ವಿನಿಮಯ ಮಂಡಳಿ (ಸೆಬಿ) ಅನುಮತಿಯನ್ನು ಎಲ್ಲ ಮ್ಯೂಚುವಲ್‌ ಫಂಡ್ ಸ್ಕೀಮ್‌ಗಳು ಪಡೆದಿರಬೇಕು. ಸ್ಕೀಮ್‌ನ ಹೂಡಿಕೆ ಉದ್ದೇಶ, ಹೂಡಿಕೆ ಮಾಡಲಾಗುತ್ತಿರುವ ಸೆಕ್ಯುರಿಟಿಗಳ ವಿಧ, ದೇಶಗಳು, ವಲಯ ಮತ್ತು ಪ್ರತಿ ಸೆಕ್ಯುರಿಟಿಗೂ ಇರುವ ರಿಸ್ಕ್‌ಗಳನ್ನು ಸ್ಪಷ್ಟವಾಗಿ ವಿವರಿಸಿರುವ ಸ್ಕೀಮ್ ಮಾಹಿತಿ ದಾಖಲೆ (ಎಸ್‌ಐಡಿ) ಅನ್ನು ಪರಿಶೀಲಿಸಿದ ನಂತರ ಸೆಬಿ ಅನುಮತಿ ನೀಡುತ್ತದೆ.

ಒಂದು ಸ್ಕೀಮ್‌ ವಾಸ್ತವದಲ್ಲಿ ಇಂತಹ ವಿದೇಶಿ ಸೆಕ್ಯುರಿಟಿಗಳಿಗೆ ಎಕ್ಸ್‌ಪೋಶರ್ ಪಡೆಯಲು ಎರಡು ವಿಧಗಳು ಇರುತ್ತವೆ. ವಿದೇಶಿ ಎಕ್ಸ್‌ಚೇಂಜ್‌ಗಳಲ್ಲಿ ಲಿಸ್ಟ್ ಮಾಡಿದ ಅಥವಾ ವಹಿವಾಟು ನಡೆಸಲಾಗುತ್ತಿರುವ ಸೆಕ್ಯುರಿಟಿಗಳನ್ನು ಖರೀದಿ ಮಾಡುವುದು ಅಥವಾ ಸೆಬಿಯಿಂದ ವಿದೇಶದಲ್ಲಿ ಹೂಡಿಕೆಗೆ ಪ್ರತ್ಯೇಕ ಅನುಮತಿಯನ್ನು ಪಡೆದ ನಂತರ ತಮ್ಮ ಪೋರ್ಟ್‌ಫೋಲಿಯೋದಲ್ಲಿ ಇಂತಹ ಸೆಕ್ಯುರಿಟಿಗಳನ್ನು ಹೊಂದಿರುವ ವಿದೇಶದ ಇತರ ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡಬಹುದು. ಯಾವುದೇ ಆದರೂ, ಪೋರ್ಟ್‌ಫೋಲಿಯೋದಲ್ಲಿ ವಿದೇಶದ ಪ್ರಭಾವವನ್ನು ಹೊಂದಿರುತ್ತದೆ.

ವಿದೇಶದ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡಿದ ನಂತರವೂ ಭಾರತದ ಮ್ಯೂಚುವಲ್‌ ಫಂಡ್‌ಗಳು ನಿತ್ಯ ನೆಟ್ ಅಸೆಟ್ ವ್ಯಾಲ್ಯೂಗಳನ್ನು ಒದಗಿಸಬೇಕು. ಪೋರ್ಟ್‌ಫೋಲಿಯೋ ಬಹಿರಂಗಗೊಳಿಸುವಿಕೆ, ಲಿಕ್ವಿಡಿಟಿ ಒದಗಿಸುವಿಕೆ ಇತ್ಯಾದಿಯನ್ನು ಖಚಿತಪಡಿಸಲೇಬೇಕು. ಒಟ್ಟಾರೆಯಾಗಿ ಹೇಳುವುದಾದರೆ, ಸೆಬಿಯ ಎಲ್ಲ ನಿಯಮಗಳಿಗೂ ಅವು ಬದ್ಧವಾಗಿರಬೇಕು.

ಇನ್ನಷ್ಟು ಓದಿ

ಮ್ಯೂಚುವಲ್‌ ಫಂಡ್‌ ಸೂಕ್ತವೇ??