ಮಾಲ್ಡೀವ್ಸ್‌ಗೆ ರಜಾ ದಿನಗಳನ್ನು ಕಳೆಯಲು ಹೋಗುತ್ತಿದ್ದೀರಿ. ಆದರೆ ನಿಮಗೆ ಆ ಸ್ಥಳ ಬಗ್ಗೆ ಹೆಚ್ಚಿನ ತಿಳಿವಳಿಕೆ ಇಲ್ಲ ಎಂದು ಊಹಿಸಿಕೊಳ್ಳಿ. ನಿಮ್ಮ ಟ್ರಿಪ್ ಅನ್ನು ನೀವು ಹೇಗೆ ಪ್ಲಾನ್ ಮಾಡುತ್ತೀರಿ? ನೀವು ಟ್ರಾವೆಲ್ ಏಜೆಂಟ್‌ಗೆ ಕರೆ ಮಾಡಿ ನಿಮ್ಮ ಟ್ರಿಪ್ ಬುಕ್ ಮಾಡುತ್ತೀರಿ ಅಥವಾ ಉಳಿಯಲು ಸ್ಥಳ, ಭೇಟಿ ಮಾಡುವ ಸ್ಥಳ, ಸಾರಿಗೆಯ ವಿಧ ಇತ್ಯಾದಿಯನ್ನು ಹುಡುಕುತ್ತಾ ಗಂಟೆಗಳಷ್ಟು ಸಮಯವನ್ನು ವೆಚ್ಚ ಮಾಡುತ್ತೀರಿ ಮತ್ತು ಕೊನೆಗೆ ನಿಮ್ಮ ಪ್ರಯಾಣದ ವಿವರವನ್ನು ಸಿದ್ಧಪಡಿಸಿ ಬುಕಿಂಗ್ ಮಾಡುತ್ತೀರಿ. ಇವೆರಡರ ಮಧ್ಯದ ವ್ಯತ್ಯಾಸವೆಂದರೆ, ನೀವು ಒಂದರಲ್ಲಿ ಸಹಾಯ ಪಡೆಯುವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಮತ್ತು ಇನ್ನೊಬ್ಬರ ಮೂಲಕ ಮಾಡುವುದರ ಬದಲಿಗೆ ನೀವೇ ಮಾಡುತ್ತೀರಿ.
ಡೈರೆಕ್ಟ್ ಮತ್ತು ರೆಗ್ಯುಲರ್ ಪ್ಲಾನ್ ಕೂಡ ಇದೇ ರೀತಿಯಲ್ಲಿ ಕೆಲಸ ಮಾಡುತ್ತವೆ. ಡಿಸ್ಟ್ರಿಬ್ಯೂಟರ್ ಮೂಲಕ ನೀವು ಹೂಡಿಕೆ ಮಾಡಿದಾಗ, ನಿಮ್ಮ ಹಣವನ್ನು ರೆಗ್ಯುಲರ್ ಪ್ಲಾನ್‌ನಲ್ಲಿ ಹೂಡಿಕೆ ಮಾಡುತ್ತೀರಿ. ಫಂಡ್‌ನಲ್ಲಿ ನೀವು ನೇರವಾಗಿ ಹೂಡಿಕೆ ಮಾಡಿದಾಗ, ಸ್ಕೀಮ್‌ನ ಡೈರೆಕ್ಟ್ ಪ್ಲಾನ್‌ನಲ್ಲಿ ನಿಮ್ಮ ಹಣ ಹೂಡಿಕೆ ಮಾಡಲಾಗಿರುತ್ತದೆ. ಎರಡೂ ಪ್ಲಾನ್‌ಗಳು ಒಂದೇ ಸ್ಕೀಮ್ ಮತ್ತು ಪೋರ್ಟ್‌ಫೋಲಿಯೋಗೆ ಆಕ್ಸೆಸ್ ನೀಡುತ್ತವೆಯಾದರೂ, ಅವುಗಳ ಎನ್‌ಎವಿ ಮತ್ತು ಎಕ್ಸ್‌ಪೆನ್ಸ್ ರೇಶಿಯೋದಲ್ಲಿ ವ್ಯತ್ಯಾಸವಿರುತ್ತದೆ. ರೆಗ್ಯುಲರ್ ಪ್ಲಾನ್‌ನಲ್ಲಿ ವಿತರಕರಿಗೆ ಕಮಿಷನ್ ಪಾವತಿ ಮಾಡಬೇಕಿರುವುದರಿಂದ ಡೈರೆಕ್ಟ್ ಪ್ಲಾನ್‌ಗಳಿಗಿಂತ ರೆಗ್ಯುಲರ್ ಪ್ಲಾನ್‌ಗಳ ಎಕ್ಸ್‌ಪೆನ್ಸ್ ರೇಶೀಯೋ ಹೆಚ್ಚಿರುತ್ತದೆ. ಇದೇ ಸ್ಕೀಮ್‌ನ ಡೈರೆಕ್ಟ್ ಪ್ಲಾನ್ಗೆ ಹೋಲಿಸಿದರೆ ರೆಗ್ಯುಲರ್ ಪ್ಲಾನ್ನ ಎನ್‌ಎವಿ ಸ್ವಲ್ಪ ಕಡಿಮೆ ಇರುತ್ತದೆ.
ಹೂಡಿಕೆದಾರರು ತಾವೇ ಸಂಶೋಧನೆ ಮಾಡುತ್ತಿದ್ದರೆ ಮತ್ತು ತಮ್ಮ ಹೂಡಿಕೆಯನ್ನು ತಾವೇ ನಿರ್ವಹಿಸುತ್ತಿದ್ದರೆ, ಡೈರೆಕ್ಟ್ ಪ್ಲಾನ್ ಪಡೆದುಕೊಳ್ಳಬಹುದು. ಇಲ್ಲವಾದರೆ, ರೆಗ್ಯುಲರ್ ಪ್ಲಾನ್ ಹೆಚ್ಚು ಸೂಕ್ತವಾಗುತ್ತದೆ.