ಓವರ್‌ನೈಟ್‌ ಫಂಡ್‌ಗಳು ಎಷ್ಟು ಸುರಕ್ಷಿತ?

ಓವರ್‌ನೈಟ್‌ ಫಂಡ್‌ಗಳು ಎಷ್ಟು ಸುರಕ್ಷಿತ?

ನಷ್ಟವಾಗುವ ಯಾವುದೇ ರಿಸ್ಕ್ ಇಲ್ಲದ ಮ್ಯೂಚುವಲ್‌ ಫಂಡ್‌ ಅನ್ನು ನೀವು ಎದುರು ನೋಡುತ್ತಿದ್ದರೆ, ಆ ರೀತಿಯ ಯಾವುದೇ ಮ್ಯೂಚುವಲ್‌ ಫಂಡ್‌ ಇರುವುದಿಲ್ಲ! ಎಲ್ಲ ಮ್ಯೂಚುವಲ್‌ ಫಂಡ್‌ಗಳು ಒಂದಲ್ಲ ಒಂದು ರಿಸ್ಕ್ ಅಂಶಗಳನ್ನು ಒಳಗೊಂಡಿರುತ್ತವೆ. ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳು ಮಾರ್ಕೆಟ್‌ ರಿಸ್ಕ್‌ಗೆ ಒಳಪಟ್ಟಿದ್ದರೆ ಡೆಟ್ ಫಂಡ್‌ಗಳು ಬಡ್ಡಿ ದರ ರಿಸ್ಕ್ ಮತ್ತು ಡೀಫಾಲ್ಟ್‌ ರಿಸ್ಕ್‌ಗೆ ಒಳಪಟ್ಟಿರುತ್ತದೆ. ಡೆಟ್ ಫಂಡ್‌ಗಳಲ್ಲಿ ಪೋರ್ಟ್‌ಫೋಲಿಯೋದ ಸರಾಸರಿ ಪಕ್ವತೆ ಆಧಾರದಲ್ಲಿ ರಿಸ್ಕ್‌ನ ಪ್ರಮಾಣವು ವಿಭಿನ್ನವಾಗಿರುತ್ತದೆ. ಡೆಟ್ ಫಂಡ್‌ನ ಪೋರ್ಟ್‌ಫೋಲಿಯೋ ಪಕ್ವತೆ ಹೆಚ್ಚಿದ್ದಷ್ಟೂ ಬಡ್ಡಿ ದರ ರಿಸ್ಕ್ ಮತ್ತು ಡೀಫಾಲ್ಟ್ ರಿಸ್ಕ್ ಹೆಚ್ಚಿರುತ್ತದೆ.

ಓವರ್‌ನೈಟ್ ಫಂಡ್‌ಗಳು ಮರುದಿನ ಪಕ್ವವಾಗುವ ಡೆಟ್ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುವ ಒಂದು ವಿಧದ ಡೆಟ್ ಫಂಡ್ ಆಗಿವೆ. ಹೀಗಾಗಿ ಎಲ್ಲ ಡೆಟ್ ಫಂಡ್‌ಗಳಲ್ಲಿ ಅತ್ಯಂತ ಕಡಿಮೆ ಪಕ್ವತೆಯನ್ನು ಈ ಫಂಡ್‌ಗಳು ಹೊಂದಿರುತ್ತವೆ. ಈ ಮೂಲಕ, ಅವು ಅತಿ ಕಡಿಮೆ ಬಡ್ಡಿ ದರ ರಿಸ್ಕ್ ಮತ್ತು ಡೀಫಾಲ್ಟ್‌ ರಿಸ್ಕ್ ಹೊಂದಿರುತ್ತವೆ. ಓವರ್‌ನೈಟ್‌ ಫಂಡ್‌ಗಳಿಗೆ ಯಾವುದೇ ರಿಸ್ಕ್ ಇಲ್ಲ ಎಂದು ನಾವು ಊಹಿಸಲಾಗದು. ಆದರೆ ಇದು ಎಲ್ಲ ಫಂಡ್‌ಗಳನ್ನೂ ಒಟ್ಟಾಗಿಸಿದರೆ ಅತ್ಯಂತ ಕಡಿಮೆ ರಿಸ್ಕ್ ಹೊಂದಿರುತ್ತದೆ ಎಂದು ಊಹಿಸಬಹುದು. ಹೀಗಾಗಿ, ರಿಟರ್ನ್ಸ್‌ನ ಹೆಚ್ಚು ನಿರೀಕ್ಷೆ ಇಲ್ಲದೇ ಬಂಡವಾಳವನ್ನು ಸುರಕ್ಷಿತವಾಗಿಸುವ ಏಕೈಕ ಉದ್ದೇಶದಿಂದ ಕಡಿಮೆ ರಿಸ್ಕ್ ತೆಗೆದುಕೊಂಡು ಅತ್ಯಂತ ಕಡಿಮೆ ಅವಧಿಯಲ್ಲಿ ದೊಡ್ಡ ಪ್ರಮಾಣದ ನಗದನ್ನು ಇಡಲು ಸೂಕ್ತ ಎಂದು ಪರಿಗಣಿಸಲಾಗಿದೆ.

ಓವರ್‌ನೈಟ್ ಫಂಡ್‌ಗಳು ಕೇವಲ ಹೆಚ್ಚು ಹಣ ಇರುವ ದೊಡ್ಡ ಸಂಸ್ಥೆಗಳಿಗೆ ಸೂಕ್ತವಾದದ್ದಷ್ಟೇ ಅಲ್ಲ. ಅಲ್ಪಾವಧಿಗೆ ತಮ್ಮ ಹಣವನ್ನು ಹೂಡಿಕೆ ಮಾಡಲು ಬಯಸುವ ಸಣ್ಣ ಹೂಡಿಕೆದಾರರಿಗೂ ಸೂಕ್ತವಾಗಿದೆ.

436

ಮ್ಯೂಚುವಲ್‌ ಫಂಡ್‌ ಸೂಕ್ತವೇ??