ನಿಮ್ಮ ಪ್ರಸ್ತುತ ವಯಸ್ಸು ಮತ್ತು ಹಣಕಾಸು ಸ್ಥಿತಿ ಯಾವುದೇ ಆಗಿದ್ದರೂ, ನೀವು ನಾಳೆಯ ಪರಿಸ್ಥಿತಿ ಹೇಗಿರುತ್ತದೆ ಎಂಬುದು ನಿಮಗೆ ತಿಳಿದಿರುವುದಿಲ್ಲ. ನಾಳೆಯ ಪರಿಸ್ಥಿತಿ ಹೇಗಿರುತ್ತದೆ ಎಂದು ನಿಮಗೆ ಖಚಿತವಿಲ್ಲದಿದ್ದರೆ, ನೀವು ಮಾಡಿದ ಉಳಿತಾಯವು ನಿವೃತ್ತಿಯ ನಂತರ ನಿಮ್ಮ ಕೊನೆ ಉಸಿರು ಇರುವವರೆಗೂ ಉಳಿಯುತ್ತದೆ ಎಂದು ಖಚಿತವಾಗಿ ಹೇಳಬಲ್ಲಿರಾ?
ಜೀವನ ನಿರ್ವಹಣೆ ವೆಚ್ಚ ಮತ್ತು ವೈದ್ಯಕೀಯ ವೆಚ್ಚಗಳೆರಡೂ ಹೆಚ್ಚುತ್ತಲೇ ಇರುತ್ತವೆ ಮತ್ತು ನಿಮ್ಮ ನಿವೃತ್ತಿ ಅವಧಿಯು ಒಂದು ದಶಕವೋ ಅಥವಾ ಮೂರು ದಶಕವೋ ಎಂಬುದು ನಿಮಗೆ ತಿಳಿದಿರುವುದಿಲ್ಲ. ಯಾವುದೇ ಹಣಕಾಸು ಯೋಜನೆ ದಕ್ಷವಾಗಿ ಕೆಲಸ ಮಾಡಬೇಕು ಎಂದಾದರೆ, ಕಾಲಾವಧಿಯನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಆದರೆ ಈ ಪ್ರಕರಣದಲ್ಲಿ ಕಾಲಾವಧಿಯ ಖಚಿತತೆ ಇರುವುದಿಲ್ಲ. ಹೀಗಾಗಿ ನಿಮ್ಮ ನಿವೃತ್ತಿ ನಿಧಿಯ ಸರ್ಪ್ಲಸ್ ಅನ್ನು ರೂಪಿಸುವುದು ಉತ್ತಮ ವಿಧಾನವಾಗಿದೆ. ಆದರೆ, ಹಣಕಾಸು ಗುರಿಗಳನ್ನು ಪೂರೈಸುವುದೇ ಮೊದಲ ಆದ್ಯತೆಯಾಗಿದ್ದಾಗ ಹೆಚ್ಚುವರಿ ಹಣವನ್ನು ಉಳಿಸುವುದು ಹೇಗೆ? ದೀರ್ಘಕಾಲದಲ್ಲಿ ಹಣದುಬ್ಬರವನ್ನು ನಿವಾರಿಸವ ಮತ್ತು ಸಂಪತ್ತನ್ನು ಸೃಷ್ಟಿಸುವ ಸಾಧ್ಯತೆ ಇರುವ ಮ್ಯೂಚುವಲ್ ಫಂಡ್ನಂತಹವುಗಳಲ್ಲಿ ನಿಮ್ಮ ಉಳಿತಾಯವನ್ನು ಹೂಡಿಕೆ ಮಾಡುವ ಮೂಲಕ ನೀವು ನಿಮ್ಮ ನಿವೃತ್ತ ಜೀವನವನ್ನು ಉತ್ತಮವಾಗಿ ಕಳೆಯಬಹುದು.
ಹೆಚ್ಚುವರಿ ನಿವೃತ್ತಿ ನಿಧಿಯು ತುರ್ತು ಪರಿಸ್ಥಿತಿಯೇ ಇರಲಿ ಅಥವಾ ಅನಿರೀಕ್ಷಿತ ಘಟನೆಯೇ ಇರಲಿ ಅನಿರೀಕ್ಷಿತ ಸನ್ನಿವೇಶದಿಂದ ನಿಮ್ಮನ್ನು ರಕ್ಷಿಸುತ್ತದೆ. ಹಾಗೆಯೇ, ನಿಮ್ಮ ಮಕ್ಕಳು ಅಥವಾ ಮೊಮ್ಮಕ್ಕಳಿಗೆ ಆಗಾಗ್ಗೆ ಗಿಫ್ಟ್ ನೀಡುವ ಮೂಲಕ ನಿಮ್ಮ ಪ್ರೀತಿಯನ್ನು ಪ್ರದರ್ಶಿಸಬಹುದು, ಕುಟುಂಬ ಮತ್ತು ಸ್ನೇಹಿತರನ್ನು ಭೇಟಿ ಮಾಡಲು ಆಗಾಗ್ಗೆ ಪ್ರಯಾಣಿಸಬಹುದು ಮತ್ತು ಆನಂದದಿಂದ ಜೀವಿಸಬಹುದು. ನಿವೃತ್ತಿಯನ್ನು ನೀವು ಆನಂದದಿಂದ ಕಳೆಯಬೇಕು ಎಂದಾದರೆ ಉಳಿತಾಯವೊಂದೇ ಎಂದಿಗೂ ಸಾಲುವುದಿಲ್ಲ!