ನಿವೃತ್ತಿ ಹೊಂದಿದವರು ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕೆ?

ನಿವೃತ್ತಿ ಹೊಂದಿದವರು ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕೆ? zoom-icon

ನಿವೃತ್ತರು ಸಾಮಾನ್ಯವಾಗಿ ತಮ್ಮ ಉಳಿತಾಯ ಮತ್ತು ಹೂಡಿಕೆಗಳನ್ನು ಬ್ಯಾಂಕ್‌ಎಫ್‌ಡಿಗಳು, ಪಿಪಿಎಫ್‌ಗಳು, ಚಿನ್ನ, ರಿಯಲ್‌ಎಸ್ಟೇಟ್, ವಿಮೆ, ಪಿಂಚಣಿ ಯೋಜನೆಗಳು ಇತ್ಯಾದಿಯಲ್ಲಿ ಲಾಕ್ ಮಾಡಿರುತ್ತಾರೆ. ಈ ಬಹುತೇಕ ಆಯ್ಕೆಗಳನ್ನು ನಗದು ರೂಪಕ್ಕೆ ತಕ್ಷಣವೇ ಪರಿವರ್ತಿಸುವುದು ಕಷ್ಟಕರ. ವೈದ್ಯಕೀಯ ಅಥವಾ ಇತರ ತುರ್ತು ಪರಿಸ್ಥಿತಿಗಳಲ್ಲಿ ಅನಗತ್ಯ ಒತ್ತಡಕ್ಕೆ ಇದು ಕಾರಣವಾಗಬಹುದು. ಮ್ಯೂಚುವಲ್‌ಫಂಡ್‌ಗಳು ನಿವೃತ್ತರಿಗೆ ತುಂಬಾ ಅಗತ್ಯವಿರುವ ಲಿಕ್ವಿಡಿಟಿ ಅನ್ನು ಅನ್ನು ಒದಗಿಸುತ್ತವೆ. ಮ್ಯೂಚುವಲ್‌ಫಂಡ್‌ಗಳನ್ನು ಹಿಂಪಡೆಯುವುದು ಸುಲಭ ಮತ್ತು ಇವು ಉತ್ತಮ ತೆರಿಗೆ ರಿಟರ್ನ್ಸ್‌ಅನ್ನೂ ಸಹ ಒದಗಿಸುತ್ತವೆ.

ಮ್ಯೂಚುವಲ್‌ಫಂಡ್‌ಗಳ ರಿಟರ್ನ್‌ಗಳಲ್ಲಿ ಅಸ್ಥಿರತೆ ಅಥವಾ ಏರಿಳಿತಗಳು ಇರುತ್ತವೆ ಎಂದು ಬಹುತೇಕ ಹಿರಿಯ ನಾಗರಿಕರು ಭಾವಿಸುತ್ತಾರೆ ಮತ್ತು ಇದೇ ಕಾರಣಕ್ಕೆ ಅವರು ಇದರಿಂದ ದೂರವಿರುತ್ತಾರೆ. ಇವರು ತಮ್ಮ ನಿವೃತ್ತಿಯ ಮೊತ್ತದ ಒಂದಿಷ್ಟು ಭಾಗವನ್ನು ಡೆಟ್ ಮ್ಯೂಚುವಲ್‌ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕು ಮತ್ತು ಸಿಸ್ಟಮ್ಯಾಟಿಕ್ ವಿತ್‌ಡ್ರಾವಲ್‌ ಪ್ಲಾನ್ (ಎಸ್‌ಡಬ್ಲ್ಯೂಪಿ) ಅನ್ನು ಇವರು ಆಯ್ಕೆ ಮಾಡಿಕೊಳ್ಳಬೇಕು. ಇದರಿಂದಾಗಿ ಈ ಹೂಡಿಕೆಯಿಂದ ನಿಯಮಿತ ಮಾಸಿಕ ಆದಾಯವನ್ನು ಗಳಿಸಲು ಸಹಾಯವಾಗುತ್ತದೆ. ಈಕ್ವಿಟಿ ಫಂಡ್‌ಗಳಿಗಿಂತ ಡೆಟ್‌ಫಂಡ್‌ಗಳು ಹೆಚ್ಚು ಸುರಕ್ಷಿತ. ಯಾಕೆಂದರೆ ಇವು ಬ್ಯಾಂಕ್‌ಗಳು, ಕಂಪನಿಗಳು, ಸರ್ಕಾರಿ ಸಂಸ್ಥೆಗಳು ಮತ್ತು ಮನಿ ಮಾರ್ಕೆಟ್‌ಇನ್‌ಸ್ಟ್ರುಮೆಂಟ್‌ಗಳು (ಬ್ಯಾಂಕ್‌ಸಿಡಿಗಳು, ಟಿ ಬಿಲ್‌ಗಳು, ಕಮರ್ಷಿಯಲ್‌ಪೇಪರ್‌ಗಳು) ವಿತರಿಸಿದ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿರುತ್ತವೆ.

ಡೆಟ್‌ಫಂಡ್‌ಗಳಲ್ಲಿ ಎಸ್‌ಡಬ್ಲ್ಯೂಪಿ ಮಾಡುವುದರಿಂದ ಬ್ಯಾಂಕ್‌ಎಫ್‌ಡಿಗೆ ಹೋಲಿಸಿದರೆ ತೆರಿಗೆ ಕಡಿಮೆಯಾಗುತ್ತದೆ. ಎಸ್‌ಡಬ್ಲ್ಯೂಪಿ ಅಡಿಯಲ್ಲಿ ವಿತ್‌ಡ್ರಾವಲ್‌ಗಳ ಹೋಲಿಕೆಯಲ್ಲಿ ಎಫ್‌ಡಿಗಳು/ಪಿಂಚಣಿ ಪ್ಲಾನ್‌ಗಳಿಂದ ಗಳಿಸಿದ ಆದಾಯಕ್ಕೆ ಹೆಚ್ಚು ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ. ನೀವು ಸುಲಭವಾಗಿ ಎಸ್‌ಡಬ್ಲ್ಯೂಪಿ ಅನ್ನು ನಿಲ್ಲಿಸಬಹುದು ಅಥವಾ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಯಾವುದೇ ಸಮಯದಲ್ಲಿ ಹಿಂಪಡೆಯುವ ಮೊತ್ತವನ್ನು ಬದಲಿಸಬಹುದು. ಆದರೆ ಇದು ಪಿಂಚಣಿ ಯೋಜನೆಗಳಲ್ಲಿ ಸಾಧ್ಯವಿರುವುದಿಲ್ಲ. ಹೀಗಾಗಿ, ತಮ್ಮ ಹಣಕಾಸು ಯೋಜನೆಗಳಲ್ಲಿ ಮ್ಯೂಚುವಲ್‌ ಫಂಡ್‌ಗಳನ್ನು ಸೇರಿಸಿಕೊಳ್ಳಬೇಕು.

440

ಮ್ಯೂಚುವಲ್‌ ಫಂಡ್‌ ಸೂಕ್ತವೇ??