ನೀವು ಸ್ಟಾಕ್ಗಳಲ್ಲಿ ಹೂಡಿಕೆ ಮಾಡಲು ಬಯಸಿದ್ದೀರಿ, ಆದರೆ ನಿಮ್ಮ ಪೋರ್ಟ್ಫೋಲಿಯೋಗೆ ಸೂಕ್ತವಾದ ಸ್ಟಾಕ್ಗಳನ್ನು ಆಯ್ಕೆ ಮಾಡುವ ಸಮಯ ಮತ್ತು ಸಂಶೋಧನೆ ಸಾಮರ್ಥ್ಯ ಇಲ್ಲದಿದ್ದರೆ, ಇಟಿಎಫ್ಗಳು ಉತ್ತಮವಾಗಿವೆ! ವೈಯಕ್ತಿಕ ಸ್ಟಾಕ್ಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ಸುಲಭವಾಗಿ, ಲಿಕ್ವಿಡಿಟಿಯಲ್ಲಿ ರಾಜಿ ಮಾಡಿಕೊಳ್ಳದಂತೆ ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡಲು ಇಟಿಎಫ್ಗಳು ಸಹಾಯ ಮಾಡುತ್ತವೆ. ನೇರ ಸ್ಟಾಕ್ ಹೂಡಿಕೆಗೆ ಹೋಲಿಸಿದರೆ ಉತ್ತಮ ವೈವಿಧ್ಯತೆಯೊಂದಿಗೆ ಕಡಿಮೆ ವೆಚ್ಚವನ್ನೂ ಹೊಂದಿರುತ್ತವೆ.
ಇಟಿಎಫ್ ಅಥವಾ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ ಎಂಬುದು ಒಂದು ವಿಧದ ಮ್ಯೂಚುವಲ್ ಫಂಡ್ ಆಗಿದ್ದು, ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಲಿಸ್ಟ್ ಮಾಡಲಾಗಿರುತ್ತದೆ ಮತ್ತು ಎಕ್ಸ್ಚೇಂಜ್ನಲ್ಲಿ ಲಿಸ್ಟ್ ಮಾಡಲಾಗಿರುವ ಯಾವುದೇ ಇತರ ಸ್ಟಾಕ್ಗಳಂತೆಯೇ ನೈಜ ಸಮಯದಲ್ಲಿ ಟ್ರೇಡ್ ಮಾಡಬಹುದು. ಇಟಿಎಫ್ಗಳು ಒಂದು ವಿಧದ ಮ್ಯೂಚುವಲ್ ಫಂಡ್ ಆಗಿದ್ದು, ಮಾರ್ಕೆಟ್ ಸೂಚ್ಯಂಕಗಳ ಸಂಯೋಜನೆಯನ್ನು ಹೋಲುವ ಸೆಕ್ಯುರಿಟಿಗಳ ಗುಚ್ಛವನ್ನು ಪೋರ್ಟ್ಫೋಲಿಯೋ ಒಳಗೊಂಡಿರುತ್ತದೆ. ಹೀಗಾಗಿ, ಕೆಲವು ಸ್ಟಾಕ್ಗಳನ್ನು ಆಯ್ಕೆ ಮಾಡಲು ನಿಮ್ಮ ಸಮಯ ಮತ್ತು ಶಕ್ತಿಯನ್ನು ವೆಚ್ಚ ಮಾಡುವ ಅಗತ್ಯವೇ ಇಲ್ಲದೇ, ಮಾರ್ಕೆಟ್ ಇಂಡೆಕ್ಸ್ನ ಭಾಗವಾಗಿರುವ ಆಯ್ದ ಸ್ಟಾಕ್ಗಳಲ್ಲಿ ಹೂಡಿಕೆಗೆ ನೀವು ಅವಕಾಶ ಪಡೆಯುತ್ತೀರಿ. ಇಟಿಎಫ್ಗಳು ಕಡಿಮೆ ವೆಚ್ಚದ್ದಾಗಿವೆ. ಹೂಡಿಕೆ ಮಾಡುವ ಸ್ಟಾಕ್ಗಳ ಹೋಲಿಕೆಯಲ್ಲಿ ಮಾತ್ರವಲ್ಲ, ಇತರ ಮ್ಯೂಚುವಲ್ ಫಂಡ್ಗಳ ವಿಭಾಗಕ್ಕೆ ಹೋಲಿಸಿದರೂ ಇಟಿಎಫ್ಗಳ ವೆಚ್ಚ ಕಡಿಮೆಯಾಗಿದೆ. ಯಾಕೆಂದರೆ ಅವುಗಳ ವೆಚ್ಚ ಅನುಪಾತ ಕಡಿಮೆ ಇರುತ್ತದೆ.
ಇಟಿಎಫ್ಗಳು ಬಾಂಡ್ ಮಾರ್ಕೆಟ್ನಲ್ಲೂ ಲಭ್ಯವಿದ್ದು, ಯಾವುದೇ ಡೆಟ್ ಮ್ಯೂಚುವಲ್ ಫಂಡ್ನಂತೆಯೇ ಡೆಟ್ ಅಸೆಟ್ ಕ್ಲಾಸ್ಗೆ ತೆರೆದುಕೊಳ್ಳುವಿಕೆಯನ್ನೂ ಇವು ಹೊಂದಿರುತ್ತವೆ. ನಿಮ್ಮ ಹೂಡಿಕೆ ಅಗತ್ಯಗಳನ್ನು ಆಧರಿಸಿ ಕಂಪನಿ ಬಾಂಡ್ಗಳ ಅಥವಾ ಸ್ಟಾಕ್ಗಳ ವಿಶಾಲ ಬಾಸ್ಕೆಟ್ನಲ್ಲಿ ನೀವು ವೆಚ್ಚ ದಕ್ಷತೆಯಿಂದ ಹೂಡಿಕೆ ಮಾಡಬಹುದು ಮತ್ತು ಸ್ಟಾಕ್ಗಳು ಅಥವಾ ಬಾಂಡ್ಗಳ ರೀತಿಯ ವ್ಯಾಪಾರವನ್ನೂ ಮಾಡಬಹುದು.