ನಮ್ಮೆಲ್ಲರಿಗೂ ಜೀವನದಲ್ಲಿ ವಿಭಿನ್ನ ಗುರಿಗಳಿರುತ್ತವೆ. ಕೆಲವು ಬಾರಿ ಅವು ತಕ್ಷಣವೇ ಎದುರಾಗುತ್ತವೆ. ಕೆಲವು ಬಾರಿ, ಸ್ವಲ್ಪ ಸಮಯದ ನಂತರ ಅವು ಎದುರಾಗುತ್ತವೆ. ಉದಾಹರಣೆಗೆ, ವ್ಯಕ್ತಿಯೊಬ್ಬ ಕೆಲಸ ಮಾಡಲು ಆರಂಭಿಸಿದಾಗ, ಪ್ರತಿ ತಿಂಗಳ ವೆಚ್ಚವನ್ನು ಸರಿದೂಗಿಸುವುದು ಹಾಗೂ ತಕ್ಷಣ ಅಗತ್ಯವಿರುವ ಖರೀದಿಗಳನ್ನು ಹೊರತುಪಡಿಸಿ ಅವರ ಮನಸಿನಲ್ಲಿ ಬೇರೆ ಏನನ್ನೂ ಹೆಚ್ಚಾಗಿ ಹೊಂದಿರುವುದಿಲ್ಲ. ಆದರೆ, ನಿಧಾನವಾಗಿ ಗುರಿಗಳು ಶುರುವಾಗುತ್ತವೆ. ಬೈಕ್ ಅಥವಾ ಕಾರು ಬೇಕಾಗುತ್ತದೆ, ವಾರಾಂತ್ಯದ ತಿರುಗಾಟ, ಅಂತಾರಾಷ್ಟ್ರೀಯ ಪ್ರವಾಸಗಳು, ವಿವಾಹ ಹಾಗೂ ಇತ್ಯಾದಿ ಶುರುವಾಗುತ್ತದೆ.
ನಮ್ಮ ಎಲ್ಲ ಹಣಕಾಸು ಗುರಿಗಳನ್ನೂ ಯೋಜಿಸಲು ಸಹಾಯ ಮಾಡುವುದಕ್ಕೆ ಮತ್ತು ನಾವು ಜೀವನದಲ್ಲಿ ಮುಂದೆ ಸಾಗಿದಂತೆ ಎದುರಾಗುವ ಹೊಸ ಗುರಿಗಳಿಗೆ ಸಿದ್ಧವಾಗುವುದಕ್ಕಾಗಿ ನಮಗೆ ಒಂದು ಪರಿಹಾರವಿದೆ:
ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ (ಎಸ್ಐಪಿ)
ಎಸ್ಐಪಿ ಮೂಲಕ ಸಣ್ಣ ಮೊತ್ತವನ್ನು ನೀವು ಪ್ರತಿ ತಿಂಗಳು ಹೂಡಿಕೆ ಮಾಡಬಹುದು. ಅಷ್ಟೇ ಅಲ್ಲ, ನೀವು ಗುರಿ ಆಧರಿತ ಹೂಡಿಕೆಗಳನ್ನೂ ಆರಂಭಿಸಬಹುದು. ಅಂದರೆ, ಪ್ರತಿ ಗುರಿಗೂ ಎಸ್ಐಪಿ ಆರಂಭ ಮಾಡಬೇಕು. ಈ ಮೂಲಕ, ನಿವೃತ್ತಿ, ವಿವಾಹ ಮತ್ತು ಕಾರು ಅಥವಾ ಮನೆ ಖರೀದಿಯಂತಹ ವಿಭಿನ್ನ ಗುರಿಗಳಿಗೆ ಮ್ಯೂಚುವಲ್ ಫಂಡ್ಗಳಲ್ಲಿ ಸಂಚಯದ ಶಕ್ತಿಯನ್ನು ನೀವು ಬಳಸಬಹುದು. ಈ ಸನ್ನಿವೇಶದಲ್ಲಿ, ಗಳಿಕೆಗಳು ಭವಿಷ್ಯದಲ್ಲಿ ಹೆಚ್ಚು ಗಳಿಕೆಗಳನ್ನು ಮಾಡುತ್ತವೆ. ಇದರಿಂದ ಹೂಡಿಕೆದಾರ ಸ್ವೀಕರಿಸುವ ಒಟ್ಟು ಆದಾಯದಲ್ಲಿ ಸಂಚಯವನ್ನು ಉಂಟುಮಾಡುತ್ತದೆ. ಇಲ್ಲಿ ಸಂಚಯದ ಶಕ್ತಿಯ ಬಗ್ಗೆ ಇನ್ನಷ್ಟನ್ನು ನೀವು ಓದಬಹುದು.
ಉದಾಹರಣೆಗೆ, ಈ ಕೆಳಗಿನಂತೆ ತಮ್ಮ ಗುರಿ ಆಧರಿತ ಹೂಡಿಕೆಯನ್ನು ಆರಂಭಿಸಬಹುದು:
ಟಾರ್ಗೆಟ್ ಮೊತ್ತ | ಹೂಡಿಕೆಯ ಅವಧಿ | ಮ್ಯೂಚುವಲ್ ಫಂಡ್ ಸ್ಕೀಮ್ | ನಿರೀಕ್ಷಿತ ರಿಟರ್ನ್ಸ್* | ಹೂಡಿಕೆ ಮೊತ್ತ |
---|---|---|---|---|
ರೂ. 1 ಲಕ್ಷ | 2-3 ವರ್ಷಗಳು | ಡೆಟ್ ಫಂಡ್ | 6-8% | ಪ್ರತಿ ತಿಂಗಳು ರೂ. 2,500 |
ರೂ. 4 ಲಕ್ಷ | 5 ವರ್ಷಗಳು | ಬ್ಯಾಲೆನ್ಸ್ಡ್ ಫಂಡ್ | 10% | ಪ್ರತಿ ತಿಂಗಳು ರೂ. 5,000 |
ರೂ. 25 ಲಕ್ಷ | 10 ವರ್ಷಗಳು | ಈಕ್ವಿಟಿ ಫಂಡ್ | 12% | ಪ್ರತಿ ತಿಂಗಳು ರೂ. 10,000 |
ರೂ. 10 ಲಕ್ಷ | 15 ವರ್ಷಗಳು | ಈಕ್ವಿಟಿ ಫಂಡ್ | 12% | ಪ್ರತಿ ತಿಂಗಳು ರೂ. 2,000 |
ರೂ. 30 ಲಕ್ಷ | 20 ವರ್ಷಗಳು | ಈಕ್ವಿಟಿ ಫಂಡ್ | 12% | ಪ್ರತಿ ತಿಂಗಳು ರೂ. 3,000 |
ರೂ. 1.5 ಕೋಟಿ | 20 ವರ್ಷಗಳು | ಡೆಟ್ ಫಂಡ್ | 8% | ಪ್ರತಿ ತಿಂಗಳು ರೂ. 30 ಲಕ್ಷ (ಒಟ್ಟಾರೆ) |
ಮ್ಯೂಚವಲ್ ಫಂಡ್ ವಿಭಾಗಕ್ಕೆ ಊಹಿಸಿದ ರಿಟರ್ನ್ಗಳು
ಟಿಪ್ಪಣಿ: ಸಚಿತ್ರ ಉದ್ದೇಶಕ್ಕೆ ಮಾತ್ರ; ವಾಸ್ತವಿಕ ಅಂಕಿ ಅಂಶಗಳು ಮಾರ್ಕೆಟ್ ರಿಸ್ಕ್ ಆಧರಿಸಿ ಬದಲಾಗಬಹುದು
ಹಲವು ವರ್ಷಗಳಿಂದಲೂ, ನಿಮ್ಮ ಪ್ರತಿ ಗುರಿಗಳಿಗೂ ದೀರ್ಘಕಾಲೀನ ಎಸ್ಐಪಿ ಹೂಡಿಕೆ ಮೊತ್ತಗಳನ್ನು ನೀವು ಬದಲಿಸಬಹುದು. ಉದಾಹರಣೆಗೆ, ವಾಹನವನ್ನು ಖರೀದಿ ಮಾಡುವ ನಿಮ್ಮ ಕನಸನ್ನು ನೀವು ಸಾಧಿಸಿದಾಗ, ತಲಾ ರೂ. 2,000 ದ ಇತರ ಗುರಿಗಳಿಗೆ ನೀವು ಎಸ್ಐಪಿ ಮೊತ್ತವನ್ನು ಏರಿಕೆ ಮಾಡಬಹುದು. ಹೀಗೆ ಮಾಡುವ ಮೂಲಕ, ಆರಂಭದಲ್ಲಿ ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಸಂಪತ್ತನ್ನು ನೀವು ಕ್ರೋಢೀಕರಿಸಬಹುದಾಗಿದೆ.
ನಿವೃತ್ತಿಯ ನಂತರ, ರಿಸ್ಕ್ಗೆ ನೀವು ತೆರೆದುಕೊಳ್ಳುವಿಕೆಯನ್ನು ಕಡಿಮೆ ಮಾಡಲು, ಕಡಿಮೆ ರಿಸ್ಕ್ ಇನ್ಸ್ಟ್ರುಮೆಂಟ್ಗಳಲ್ಲಿ ಹೂಡಿಕೆ ಮಾಡುವಂತಹ ಕಡಿಮೆ ರಿಸ್ಕ್ ಫಂಡ್ಗೆ ನಿಮ್ಮ ಹೂಡಿಕೆಗಳನ್ನು ನೀವು ಸಾಗಿಸಬೇಕಾಗಬಹುದು. ಅಷ್ಟಕ್ಕೂ, ಸಿಸ್ಟಮ್ಯಾಟಿಕ್ ವಿತ್ಡ್ರಾವಲ್ ಪ್ಲಾನ್ ಮೂಲಕ ಆದಾಯದ ದ್ವಿತೀಯ ಮೂಲವನ್ನು ಗಳಿಸಲು ಕೂಡಾ ಈ ಹೂಡಿಕೆಗಳು ನಿಮಗೆ ಸಹಾಯ ಮಾಡಬಹುದು.
ಈ ಮೂಲಕ, ಎಸ್ಐಪಿಗಳ ಮೂಲಕ ನಿಮ್ಮ ಗುರಿಗಳನ್ನು ಅವಲಂಬಿಸಿ ಸೂಕ್ತ ಅವಧಿಗೆ ವಿಭಿನ್ನ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವುದರಿಂದ, ಬೇರೆ ಬೇರೆ ಸಮಯದಲ್ಲಿ ನಿಮ್ಮ ಜೀವನದಲ್ಲಿನ ನಿಮ್ಮ ಎಲ್ಲ ಕನಸುಗಳನ್ನು ಮತ್ತು ಗುರಿಗಳನ್ನು ಸಾಧಿಸಲು ಸಹಾಯವಾಗಬಹುದು.
*ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.