ಮ್ಯೂಚುವಲ್ ಫಂಡ್‌ಗಳು ಫ್ಲೆಕ್ಸಿಬಲ್ ಆದ ಹೂಡಿಕೆ ಆಯ್ಕೆಯಾಗಿದೆ. ಯಾಕೆಂದರೆ, ಅಸೆಟ್ ಕ್ಲಾಸ್, ರಿಸ್ಕ್‌ಗಳು, ಹೂಡಿಕೆ ಮೊತ್ತ ಮತ್ತು ದ್ರವ್ಯತೆ ವಿಷಯದಲ್ಲಿ ಇದು ವ್ಯಾಪಕವಾದ ಶ್ರೇಣಿಯನ್ನು ಇವು ಒದಗಿಸುತ್ತವೆ. ಆದರೆ, ಹೊಸಬರಿಗೆ ಮ್ಯೂಚುವಲ್ ಫಂಡ್ ಪೋರ್ಟ್‌ಫೋಲಿಯೋವನ್ನು ಮೊದಲ ಬಾರಿಗೆ ನಿರ್ಮಿಸಿಕೊಳ್ಳುವುದು ಸವಾಲಿನ ಕೆಲಸವಾಗಿರುತ್ತದೆ. ಕೆಲವು ಪ್ರಾಥಮಿಕ ಸಿದ್ಧಾಂತಗಳನ್ನು ಇಟ್ಟುಕೊಂಡು ನೀವು ನಿಮ್ಮ ಮ್ಯೂಚುವಲ್ ಪೋರ್ಟ್‌ಫೋಲಿಯೋವನ್ನು ಸೆಟಪ್ ಮಾಡಬಹುದಾಗಿದೆ.
ನಿಮ್ಮ ಮ್ಯೂಚುವಲ್ ಫಂಡ್ ಪೋರ್ಟ್‌ಫೋಲಿಯೋವನ್ನು ನಿರ್ಮಿಸುವುದಕ್ಕೆ ಸಂಬಂಧಿಸಿದ ಪ್ರತಿ ಹಂತವನ್ನು ಒಳಗೊಂಡ ಮಾರ್ಗದರ್ಶಿ:
- ನಿಮ್ಮ ರಿಸ್ಕ್ ಸಹಿಸಿಕೊಳ್ಳುವ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳಿ: ನಿಮ್ಮ ರಿಸ್ಕ್ ಸಹಿಸಿಕೊಳ್ಳುವ ಸಾಮರ್ಥ್ಯ ಎಂಬುದು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ನೀವು ತೆಗೆದುಕೊಳ್ಳಲು ಸಮ್ಮತಿಸುವ ರಿಸ್ಕ್‌ನ ಮಟ್ಟವಾಗಿರುತ್ತದೆ. ನಿಮ್ಮ ಹೂಡಿಕೆಗಳಿಗೆ ಎಷ್ಟು ರಿಸ್ಕ್ ಅನ್ನು ನೀವು ತೆಗೆದುಕೊಳ್ಳಬಹುದು ಎಂದು ನಿರ್ಧಾರ ಮಾಡಿದ ನಂತರ, ನಿಮಗೆ ಸೂಕ್ತವಾದ ಫಂಡ್‌ಗಳ ವಿಧವನ್ನು ನೀವು ನಿರ್ಧಾರ ಮಾಡಬಹುದು. ಉದಾಹರಣೆಗೆ, ನೀವು ಅಧಿಕ ರಿಸ್ಕ್ ಸಹಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದರೆ, ಈಕ್ವಿಟಿಗಳಲ್ಲಿ ಗರಿಷ್ಠ ನಿಯೋಜನೆಯನ್ನು ಮಾಡಬಹುದು. ಕಡಿಮೆ ರಿಸ್ಕ್ ಸಹಿಸಿಕೊಳ್ಳುವ ಹೂಡಿಕೆದಾರರು ನೀವಾಗಿದ್ದರೆ ಡೆಟ್ ಫಂಡ್‌ಗಳು ಹೆಚ್ಚು ಸೂಕ್ತವಾಗಿರುತ್ತದೆ.
- ಗುರಿಗಳನ್ನು ಗುರುತಿಸುವುದು: ಗುರಿಗಳು ಅತ್ಯಂತ ಪ್ರಮುಖ ಅಂಶವಾಗಿದೆ. ಏಕೆಂದರೆ, ಎಲ್ಲ ಭವಿಷ್ಯದ ನಿರ್ಧಾರಗಳು ಅದಕ್ಕೆ ಆಧಾರವಾಗಿರುತ್ತವೆ. ಗುರಿಗಳ ಮೂಲಕ, ಹೂಡಿಕೆಯ ಮೊತ್ತ ಮತ್ತು ಅವಧಿಯನ್ನು ನೀವು ನಿರ್ಧಾರ ಮಾಡಬಹುದು. ಅಲ್ಲದೆ, ಹೂಡಿಕೆಯ ಹಲವು ಇತರ