ನೀವು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದ ನಂತರ, ವಹಿವಾಟಿನ ದಿನಾಂಕ, ಹೂಡಿಕೆ ಮಾಡಿದ ಮೊತ್ತ ಮತ್ತು ಯೂನಿಟ್‌ಗಳನ್ನು ಯಾವ ದರದಲ್ಲಿ ಖರೀದಿ ಮಾಡಲಾಗಿದೆ ಮತ್ತು ಎಷ್ಟು ಯೂನಿಟ್‌ಗಳನ್ನು ನಿಮಗೆ ನಿಯೋಜಿಸಲಾಗಿದೆ ಎಂಬುದರ ವಿವರಗಳನ್ನು ಒಳಗೊಂಡ ಅಕೌಂಟ್ ಸ್ಟೇಟ್‌ಮೆಂಟ್ ಅನ್ನು ನಿಮಗೆ ಒದಗಿಸಲಾಗುತ್ತದೆ.
ಒಂದೇ ಖಾತೆಯಲ್ಲಿ ನೀವು ಹಲವು ವಹಿವಾಟುಗಳನ್ನು ಮಾಡಬಹುದು. ಈ ಸ್ಟೇಟ್‌ಮೆಂಟ್ ಅಪ್‌ಡೇಟ್ ಆಗುತ್ತಲೇ ಇರುತ್ತದೆ. ಒಂದು ಸಾಮಾನ್ಯ ಅಕೌಂಟ್ ಸ್ಟೇಟ್‌ಮೆಂಟ್ ಕೊನೆಯ ಕೆಲವು (ಸಾಮಾನ್ಯವಾಗಿ 10) ವಹಿವಾಟುಗಳನ್ನು ಹೊಂದಿರುತ್ತದೆ. ಅದರಲ್ಲಿ ಖರೀದಿ ಅಥವಾ ರಿಡೆಂಪ್ಷನ್‌ಗಳು, ಡಿವಿಡೆಂಡ್‌ಇದ್ದರೆ ಅದರ ವಿವರಗಳು ಅಥವಾ ಹಣಕಾಸೇತರ ವಹಿವಾಟುಗಳೂ ನಮೂದಾಗಿರುತ್ತದೆ. ಅಕೌಂಟ್ ಸ್ಟೇಟ್‌ಮೆಂಟ್‌ನಲ್ಲಿ ನಿಮ್ಮ ಇತ್ತೀಚಿನ ಯೂನಿಟ್ ಬ್ಯಾಲೆನ್ಸ್, ಇತ್ತೀಚಿನ ದಿನಾಂಕದ ಎನ್‌ಎವಿ ಮತ್ತು ನಿಮ್ಮ ಹೂಡಿಕೆಯ ಪ್ರಸ್ತುತ ಮೌಲ್ಯವೂ ಇರುತ್ತದೆ.
ನೀವು ಒಂದು ಸ್ಟೇಟ್‌ಮೆಂಟ್ ಕಳೆದುಕೊಂಡರೆ, ಯಾವುದೇ ಸಮಸ್ಯೆ ಇಲ್ಲದೇ ಇನ್ನೊಂದು ಸ್ಟೇಟ್‌ಮೆಂಟ್ ಅನ್ನು ಪಡೆದುಕೊಳ್ಳಬಹುದು. ಅಕೌಂಟ್ ಸ್ಟೇಟ್‌ಮೆಂಟ್ ಕಳೆದುಕೊಂಡರೆ ನೀವು ಮುಂದಿನ ವಹಿವಾಟು ನಡೆಸಲು ತೊಂದರೆ ಇಲ್ಲ. ಖಾತೆಯಿಂದ ನೀವು ಹಣ ತೆಗೆದುಕೊಳ್ಳಲೂ ಅಕೌಂಟ್ ಸ್ಟೇಟ್‌ಮೆಂಟ್ ಕಳೆದುಕೊಳ್ಳುವುದು ಸಮಸ್ಯೆಯಾಗುವುದಿಲ್ಲ.