ಹೌದು! ಸಣ್ಣ ಪ್ರಮಾಣದ ಉಳಿತಾಯ ಅಥವಾ ಸಣ್ಣ ಆರಂಭದ ಹೂಡಿಕೆದಾರರಿಗೂ ಮ್ಯೂಚುವಲ್ ಫಂಡ್ಗಳು ಉತ್ತಮ ಹೂಡಿಕೆ ವಾಹಕಗಳಾಗಿವೆ.
ಉಳಿತಾಯ ಖಾತೆ (ಎಸ್ಬಿ) ಹೊಂದಿರುವ ಬಹುತೇಕ ಪ್ರತಿ ವ್ಯಕ್ತಿಯೂ ಮ್ಯೂಚುವಲ್ ಫಂಡ್ ಸ್ಕೀಮ್ಗಳಲ್ಲಿ ಹೂಡಿಕೆ ಆರಂಭಿಸಬಹುದು. ಪ್ರತಿ ತಿಂಗಳು ₹500 ರಷ್ಟು ಕಡಿಮೆ ಮೊತ್ತದಲ್ಲಿ, ನಿಯತವಾಗಿ ಹೂಡಿಕೆ ಮಾಡುವ ಹವ್ಯಾಸವನ್ನು ಮ್ಯೂಚುವಲ್ ಫಂಡ್ಗಳು ಉತ್ತೇಜಿಸುತ್ತವೆ.
ಮ್ಯೂಚುವಲ್ ಫಂಡ್ಗಳಲ್ಲಿ ಸಣ್ಣ ಹೂಡಿಕೆದಾರರಿಗೆ ಇತರ ಅನುಕೂಲಗಳೆಂದರೆ -
- ಮ್ಯೂಚುವಲ್ ಫಂಡ್ ಸ್ಕೀಮ್ ನಲ್ಲಿ ವಹಿವಾಟು, ಹೂಡಿಕೆ, ಪರಿಶೀಲನೆ, ನಿರ್ವಹಣೆ ಮತ್ತು ರಿಡೀಮ್ ಮಾಡುವುದು ಎಲ್ಲವೂ ಸರಳ ಹಾಗೂ ಸುಲಭ ಪ್ರಕ್ರಿಯೆಯಾಗಿವೆ.
- ಸಂಪೂರ್ಣ ಪಾರದರ್ಶಕತೆ ಪಡೆಯಿರಿ: ಗರಿಷ್ಠ ಪಾರದರ್ಶಕತೆ, ಸ್ಪಷ್ಟ ಬಹಿರಂಗಗೊಳಿಸುವಿಕೆಗಳು ಮತ್ತು ಸಕಾಲಕ್ಕೆ ಖಾತೆಗಳ ವಿವರ... ಸಣ್ಣ ಅಥವಾ ಮೊದಲ ಬಾರಿಯ ಹೂಡಿಕೆದಾರರು ನಿರೀಕ್ಷಿಸುವ ಇವೆಲ್ಲವೂ ಇದೆ.
- ವೃತ್ತಿಪರವಾಗಿ ನಿರ್ವಹಿಸಿರುವುದು: ನೀವು ವೈವಿಧ್ಯಮಯ ಪೋರ್ಟ್ಫೋಲಿಯೋವನ್ನು ನಿರ್ಮಿಸಬಹುದು. ಇದನ್ನು ಫಂಡ್ ಮ್ಯಾನೇಜರ್ಗಳು ವೃತ್ತಿಪರವಾಗಿ ನಿರ್ವಹಿಸುತ್ತಾರೆ. ಅವರು ಸಂಶೋಧನೆಯನ್ನು ಆಧರಿಸಿ ನಿರ್ಧಾರ ಮಾಡುತ್ತಾರೆ.
- ಪ್ರತಿ ಹೂಡಿಕೆದಾರರೂ ಸಮಾನ: ಒಂದು ಮ್ಯೂಚುವಲ್ ಫಂಡ್ನಲ್ಲಿ ₹500 ಹೂಡಿಕೆ ಮಾಡಿದವರಿಗೂ ₹5 ಕೋಟಿ ಹೂಡಿಕೆ ಮಾಡಿದವರಿಗೂ ಸಮಾನ ಹೂಡಿಕೆ ಕಾರ್ಯಕ್ಷಮತೆ ಲಭ್ಯವಾಗುತ್ತದೆ. ಹೀಗಾಗಿ, ಇದು ಸಣ್ಣದಾಗಲೀ, ದೊಡ್ಡದಾಗಲೀ ಎಲ್ಲ ಹೂಡಿಕೆದಾರರ ಹಿತಾಸಕ್ತಿಯನ್ನೂ ಗಮನದಲ್ಲಿಟ್ಟುಕೊಂಡಿರುತ್ತದೆ.
- ದ್ರವ್ಯತೆ: ರಿಯಲ್ ಎಸ್ಟೇಟ್ನಂತಹ ಹೂಡಿಕೆ ಆಯ್ಕೆಗಳಿಗಿಂತ ಭಿನ್ನವಾಗಿ, ಅಗತ್ಯವಿದ್ದಾಗ ರಿಡೀಮ್ ಮಾಡಿಕೊಳ್ಳುವುದು ಮ್ಯೂಚುವಲ್ ಫಂಡ್ ಹೂಡಿಕೆಗಳಲ್ಲಿ ತುಂಬಾ ಸುಲಭವಾಗಿದೆ. ನೇರವಾಗಿ ಫಂಡ್ ಹೌಸ್ ಜೊತೆಗೆ ಎಂಎಫ್ಗಳನ್ನು ರಿಡೀಮ್ ಮಾಡಬಹುದು ಅಥವಾ ಸೆಕೆಂಡರಿ ಮಾರ್ಕೆಟ್ನಲ್ಲಿ ಮಾರಾಟ ಮಾಡಬಹುದು.
ಪ್ರತಿ ಹೂಡಿಕೆಯಲ್ಲೂ ರಿಸ್ಕ್ ಇರುತ್ತದೆ. ಮ್ಯೂಚುವಲ್ ಫಂಡ್ಗಳಲ್ಲೂ ಟ್ರೇಡಿಂಗ್ ವಾಲ್ಯೂಮ್ಗಳು, ಲಿಕ್ವಿಡಿಟಿ ರಿಸ್ಕ್ ಇತ್ಯಾದಿ ಹೂಡಿಕೆ ಅಪಾಯಗಳಿರುತ್ತವೆ. ಆದರೆ, ಅವು ಸಣ್ಣ ಹೂಡಿಕೆದಾರರಿಗೆ ವಿವಿಧ ರೀತಿಯ ಪ್ರಯೋಜನಗಳನ್ನೂ ಒದಗಿಸುತ್ತವೆ.
ನಿಮ್ಮ ಆರಂಭಿಕ ಮೊತ್ತ ಎಷ್ಟು ಸಣ್ಣದಾಗಿದ್ದರೂ ಅಥವಾ ನಿಮ್ಮ ಉದ್ದೇಶ ಯಾವುದೇ ಇದ್ದರೂ, ಮ್ಯೂಚುವಲ್ ಫಂಡ್ ನಿಮಗೆ ಸರಿಯಾಗಿದೆ.
ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.
*ಕನಿಷ್ಠ ಹೂಡಿಕೆ ಮೊತ್ತ: ಹಲವು ಮ್ಯೂಚುವಲ್ ಫಂಡ್ಗಳು ಕನಿಷ್ಠ ರೂ. 500 ಎಸ್ಐಪಿ ಹೂಡಿಕೆಯನ್ನು ಅನುಮತಿಸುತ್ತವೆ. ಆದರೆ, ಕೆಲವು ಸ್ಕೀಮ್ಗಳಿಗೆ ಹೂಡಿಕೆ ಅರ್ಜಿ ಸಲ್ಲಿಸುವಾಗ ಹೆಚ್ಚಿನ ಮೊತ್ತ ಬೇಕಾಗುತ್ತವೆ.
^ಲಾಕ್ ಇನ್ ಅವಧಿ: ಮ್ಯೂಚುವಲ್ ಫಂಡ್ಗಳು ಲಾಕ್ ಇನ್ ಅವಧಿಯನ್ನು ಹೊಂದಿರಬಹುದು. ಲಾಕ್ ಇನ್ ಅವಧಿ ಮುಗಿದ ನಂತರ ಮಾತ್ರವೇ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ರಿಡೀಮ್ ಮಾಡಬಹುದಾಗಿರುತ್ತದೆ.