ಮಾರುಕಟ್ಟೆಯಲ್ಲಿ ಲಭ್ಯವಿರುವುದಕ್ಕಿಂತ ಹೆಚ್ಚಿನ ರಿಟರ್ನ್ಸ್ ನೀಡುವ ಭರವಸೆ ನೀಡುವ ಹಾಗೂ ಅಷ್ಟೇನೂ ರಿಸ್ಕ್ ಇಲ್ಲ ಎಂದು ಹೇಳುವ ಹೂಡಿಕೆ ಯೋಜನೆಗಳಿಗೆ ಹೂಡಿಕೆದಾರರನ್ನು ಆಕರ್ಷಿಸಿದ ಹಲವು ಘಟನೆಗಳಿವೆ. ಇಂತಹ ಅನಿಯಂತ್ರಿತ ಹೂಡಿಕೆ ಸ್ಕೀಮ್ಗಳನ್ನು ಪಾಂಜಿ ಸ್ಕೀಮ್ಗಳು ಎಂದು ಕರೆಯಲಾಗುತ್ತದೆ ಮತ್ತು ಅವು ಭಾರಿ ರಿಸ್ಕ್ ಹೊಂದಿರುತ್ತವೆ. ಅನಿಯಂತ್ರಿತ ಡೆಪಾಸಿಟ್ ಸ್ಕೀಮ್ಗಳು ಎಂದರೆ, ವ್ಯಕ್ತಿಗಳು, ವ್ಯಕ್ತಿಗಳ ಸಮೂಹ ಅಥವಾ ವ್ಯಾಪಾರ ಉದ್ದೇಶಕ್ಕೆ ಕಂಪನಿಯು ತೆಗೆದುಕೊಂಡ ಡೆಪಾಸಿಟ್ ಸ್ಕೀಮ್ಗಳಾಗಿದ್ದು, ಭಾರತದಲ್ಲಿ ಎಲ್ಲ ರೀತಿಯ ಡೆಪಾಸಿಟ್ ಸ್ಕೀಮ್ಗಳ ಮೇಲ್ವಿಚಾರಣೆ ಮಾಡಲು ಇರುವ ಒಂಬತ್ತು ನಿಯಂತ್ರಕ ಪ್ರಾಧಿಕಾರಗಳ ಪೈಕಿ ಯಾವುದರಲ್ಲೂ ನೋಂದಣಿ ಮಾಡಿಕೊಂಡಿರುವುದಿಲ್ಲ. ಈ ಸ್ಕೀಮ್ಗಳು ಸಾಮಾನ್ಯವಾಗಿ ತುಂಬಾ ಹೆಚ್ಚು ರಿಸ್ಕ್ ಹೊಂದಿರುತ್ತವೆ ಅಥವಾ ರಿಸ್ಕ್ ಅನ್ನೇ ಹೊಂದಿರುವುದಿಲ್ಲ.
ಸಾವಿರಾರು ಹೂಡಿಕೆದಾರರು ಇಂತಹ ಹಲವು ಅನಿಯಂತ್ರಿತ ಡೆಪಾಸಿಟ್ ಸ್ಕೀಮ್ಗಳಲ್ಲಿ ತಮ್ಮ ಕಠಿಣ ಪರಿಶ್ರಮದ ಹಣವನ್ನು ಕಳೆದುಕೊಂಡಿದ್ದಾರೆ ಮತ್ತು ಇದರಿಂದಾಗಿ 2019 ರಲ್ಲಿ ಅನಿಯಂತ್ರಿತ ಡೆಪಾಸಿಟ್ ಸ್ಕೀಮ್ಗಳ ನಿಷೇಧ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿತು. ಈ ಕಾಯ್ದೆಯು ನಿಯಂತ್ರಿತ ಠೇವಣಿ ಯೋಜನೆಗಳನ್ನು ಪಟ್ಟಿ ಮಾಡುತ್ತದೆ ಮತ್ತು ಮ್ಯೂಚುಯಲ್ ಫಂಡ್ಗಳು ಮತ್ತು ಪೋರ್ಟ್ಫೋಲಿಯೋ ಮ್ಯಾನೇಜ್ಮೆಂಟ್ ಸೇವೆಗಳಂತಹ (ಪಿಎಂಎಸ್) ಹೂಡಿಕೆ ಆಯ್ಕೆಗಳನ್ನು ಒಳಗೊಂಡಿರುತ್ತದೆ. ಇವುಗಳನ್ನು ಸಾಂಪ್ರದಾಯಿಕವಾಗಿ ಠೇವಣಿ ಯೋಜನೆಗಳೆಂದು ಪರಿಗಣಿಸಲಾಗುವುದಿಲ್ಲ.
ಅತಿ ಕಡಿಮೆ ರಿಸ್ಕ್ ಹೊಂದಿದ್ದು, ತುಂಬಾ ಆಕರ್ಷಕವಾಗಿ ನಿಮಗೆ ಯಾವುದೇ ಹೂಡಿಕೆ ಆಯ್ಕೆ ಕಂಡುಬಂದರೆ, ರಿಸ್ಕ್ ಮತ್ತು ರಿಟರ್ನ್ ಎರಡೂ ಒಂದಕ್ಕೊಂದು ಬೆಸೆದುಕೊಂಡೇ ಇರುತ್ತವೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಈ ಜಗತ್ತಿನಲ್ಲಿ ಯಾವುದೂ ಉಚಿತವಾಗಿ ಸಿಗುವುದಿಲ್ಲ. ಕಡಿಮೆ ರಿಟರ್ನ್ ಒದಗಿಸುವ ಹೂಡಿಕೆ ಆಯ್ಕೆಗೆ ಹೋಲಿಸಿದರೆ, ಅಧಿಕ ರಿಟರ್ನ್ ಎಂದಿಗೂ ಅಧಿಕ ರಿಸ್ಕ್ ಅನ್ನೂ ಹೊಂದಿರುತ್ತದೆ. ರಿಸ್ಕ್ ಮತ್ತು ರಿಟರ್ನ್ ಮಧ್ಯೆ ಇರುವ ಸಂಬಂಧವನ್ನು ಅರ್ಥ ಮಾಡಿಕೊಳ್ಳದ ಸಣ್ಣ ಹೂಡಿಕೆದಾರರಿಗೆ ಮೋಸ ಮಾಡುವ ಉದ್ದೇಶವನ್ನು ಅನಿಯಂತ್ರಿತ ಡೆಪಾಸಿಟ್ ಸ್ಕೀಮ್ಗಳು ಹೊಂದಿರುತ್ತವೆ. ಸ್ಕೀಮ್ಗಳಲ್ಲಿ ಇರುವ ರಿಸ್ಕ್ ಬಗ್ಗೆ ಹೇಳದೇ ಆಕರ್ಷಕ ರಿಟರ್ನ್ಗಳನ್ನು ಮಾತ್ರ ಹೇಳುವ ಮೂಲಕ ಹೂಡಿಕೆದಾರರನ್ನು ಈ ಮೋಸದ ಸ್ಕೀಮ್ಗಳು ಆಕರ್ಷಿಸುತ್ತವೆ.
ಅನಿಯಂತ್ರಿತ ಹೂಡಿಕೆಗಳ ಅತಿದೊಡ್ಡ ರಿಸ್ಕ್ ಎಂದರೆ, ರಿಟರ್ನ್ಗೆ ಗ್ಯಾರಂಟಿ ಇರುವುದಿಲ್ಲ ಮತ್ತು ಸ್ಕೀಮ್ ಅಡಿಯಲ್ಲಿ ಮಾಡಬೇಕಾದ ಪಾವತಿಗಳನ್ನು ಸ್ಕೀಮ್ನ ಪ್ರೊಮೋಟರ್ಗಳು ಮಾಡದೇ ಇರುವ ಸಾಧ್ಯತೆ ಹೆಚ್ಚಿರುತ್ತದೆ. ಯಾವುದೇ ಒಂಬತ್ತು ಲಿಸ್ಟೆಡ್ ನಿಯಂತ್ರಕ ಪ್ರಾಧಿಕಾರಗಳ ಅಡಿಯಲ್ಲಿ ಸ್ಕೀಮ್ ನೋಂದಣಿ ಮಾಡದ್ದರಿಂದ, ಸ್ಕೀಮ್ ಮೋಸದ್ದಾಗಿದ್ದರೆ ನಿಮ್ಮ ಹಣ ವಸೂಲಾತಿಗಾಗಿ ನೀವು ನಿಯಂತ್ರಕ ಪ್ರಾಧಿಕಾರಗಳನ್ನು ಸಂಪರ್ಕಿಸಲು ಸಾಧ್ಯವಾಗುವುದಿಲ್ಲ.
ಅನಿಯಂತ್ರಿತ ಡೆಪಾಸಿಟ್ ಸ್ಕೀಮ್ಗಳ ಕಾಯ್ದೆ 2019 ಅಡಿಯಲ್ಲಿ ಇಂಥ ಡೆಪಾಸಿಟ್ಗಳನ್ನು ತೆಗೆದುಕೊಳ್ಳುವುದು, ಡೆಪಾಸಿಟರ್ಗಳಿಗೆ ನೀಡಿದ ಭರವಸೆಯ ಪ್ರಕಾರ ಪೇಮೆಂಟ್ಗಳಲ್ಲಿ ಮೋಸದಿಂದ ಡೀಫಾಲ್ಟ್ ಆಗುವುದು ಅಥವಾ ಇಂತಹ ಸ್ಕೀಮ್ಗಳ ಪ್ರಚಾರವು ಅಕ್ರಮವಾಗಿದೆ. ಇಂತಹ ಅಪರಾಧಗಳು ಶಿಕ್ಷಾರ್ಹವಾಗಿವೆ. ಬೇರೆ ಕಡೆ ನೀವು ಪಡೆಯುವುದಕ್ಕಿಂತ ಹೆಚ್ಚು ರಿಟರ್ನ್ ಭರವಸೆ ನೀಡುವ ಹೂಡಿಕೆ ಸ್ಕೀಮ್ಗಳ ಬಗ್ಗೆ ಮುಂದಿನ ಬಾರಿ ನಿಮ್ಮ ಗಮನಕ್ಕೆ ಬಂದರೆ, ಇದು ತುಂಬಾ ರಿಸ್ಕಿ ಅನಿಸದಿದ್ದರೆ, ಸ್ವಲ್ಪ ಸಮಯದಲ್ಲೇ ದುಪ್ಪಟ್ಟು ಹಣ ನೀಡುವ ಭರವಸೆ ನೀಡಿದರೆ ಅಥವಾ ಯಾವ ಶ್ರಮವೂ ಇಲ್ಲದೇ ನಿಮ್ಮನ್ನು ಮಿಲಿಯನೇರ್ ಮಾಡುವ ಭರವಸೆ ನೀಡಿದರೆ, ಸ್ಕೀಮ್ ಅನ್ನು ಯಾರು ನಡೆಸುತ್ತಿದ್ದಾರೆ ಎಂದು ಪರಿಶೀಲಿಸಿ. ಇಲ್ಲಿನ ಚಿತ್ರದಲ್ಲಿ ಲಿಸ್ಟೆಡ್ ನಿಯಂತ್ರಕ ಮಂಡಳಿಯಲ್ಲಿ ಯಾವುದರಲ್ಲಾದರೂ ಸ್ಕೀಮ್ ನೋಂದಣಿಯಾಗಿದೆಯೇ ಎಂದು ನೋಡಿ ಮತ್ತು ಈ ಸ್ಕೀಮ್ ಬಗ್ಗೆ ಇರುವ ಸುದ್ದಿಗಳನ್ನು ಹುಡುಕಿ.