(ಅಪಾಯ ಮತ್ತು ಲಾಭ) ನಡುವಿನ ಸಹ-ಸಂಬಂಧವೇನು?

(ಅಪಾಯ ಮತ್ತು ಲಾಭ) ನಡುವಿನ ಸಹ-ಸಂಬಂಧವೇನು?

ಮ್ಯೂಚುವಲ್ ಫಂಡ್‌ಗಳ ವಿಚಾರದಲ್ಲಿ ಸಾಮಾನ್ಯವಾಗಿ ರಿಸ್ಕ್ ಹೆಚ್ಚಿದ್ದಷ್ಟೂ ರಿಟರ್ನ್‌ಹೆಚ್ಚಿರುತ್ತದೆ ಎಂಬ ಮಾತನ್ನು ಕೇಳಿರುತ್ತೇವೆ. ಇದರಲ್ಲಿ ವಾಸ್ತವಾಂಶ ಇದೆಯೇ?

ಬಂಡವಾಳ ನಷ್ಟ ಅಥವಾ ಹೂಡಿಕೆಯ ಮೌಲ್ಯದಲ್ಲಿ ಬದಲಾವಣೆ ಮತ್ತು ವ್ಯತ್ಯಾಸ ಎಂದು ರಿಸ್ಕ್‌ಅನ್ನು ಪರಿಗಣಿಸಿದರೆ, ಆಗ ಈಕ್ವಿಟಿಯಂತಹ ಸ್ವತ್ತು ವಿಭಾಗಗಳು ಅತ್ಯಂತ ರಿಸ್ಕ್ ನದ್ದಾಗಿರುತ್ತವೆ ಮತ್ತು ಉಳಿತಾಯ ಬ್ಯಾಂಕ್‌ಖಾತೆಯಲ್ಲಿನ ಹಣ ಅಥವಾ ಸರ್ಕಾರಿ ಬಾಂಡ್‌ನಲ್ಲಿನ ಹಣವು ಖಂಡಿತವಾಗಿಯೂ ಕಡಿಮೆ ರಿಸ್ಕ್ ನದ್ದಾಗಿರುತ್ತದೆ.

ಮ್ಯೂಚುವಲ್‌ಫಂಡ್‌ಜಗತ್ತಿನಲ್ಲಿ, ಲಿಕ್ವಿಡ್ ಫಂಡ್‌ ಅತ್ಯಂತ ಕಡಿಮೆ ರಿಸ್ಕ್‌ ಹಾಗೂ ಈಕ್ವಿಟಿ ಫಂಡ್ ಅತ್ಯಂತ ರಿಸ್ಕ್ ನದ್ದಾಗಿರುತ್ತದೆ.

ಹೀಗಾಗಿ, ಈಕ್ವಿಟಿಯಲ್ಲಿ ಹೂಡಿಕೆ ಮಾಡುವ ಏಕೈಕ ಕಾರಣವೆಂದರೆ ಅಧಿಕ ರಿವಾರ್ಡ್‌ನಿರೀಕ್ಷೆಯಾಗಿರುತ್ತದೆ. ಆದರೆ, ಎಚ್ಚರಿಕೆಯಿಂದ ಅಧ್ಯಯನ ನಡೆಸುವುದು ಮತ್ತು ಸಹನೆಯನ್ನು ಅಳವಡಿಸಿಕೊಳ್ಳುವುದು ಹಾಗೂ ದೀರ್ಘಕಾಲದ ಉದ್ದೇಶವನ್ನು ಇಟ್ಟುಕೊಂಡು ಹೂಡಿಕೆ ಮಾಡಿದರೆ ಅಧಿಕ ರಿಟರ್ನ್ಸ್‌ಸಿಗುತ್ತದೆ. ಅಷ್ಟಕ್ಕೂ, ವೈವಿಧ್ಯತೆ ಮತ್ತು ದೀರ್ಘಕಾಲೀನ ಉದ್ದೇಶವನ್ನು ಅಳವಡಿಸಿಕೊಂಡರೆ ಮಾತ್ರ ಈಕ್ವಿಟಿಯಲ್ಲಿನ ರಿಸ್ಕ್‌ಅನ್ನು ನಿವಾರಿಸಬಹುದು.

ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳ ಪ್ರತಿ ವಿಭಾಗವೂ ವಿಭಿನ್ನ ರೀತಿಯ ರಿಸ್ಕ್ ಗಳಾದ ಕ್ರೆಡಿಟ್ ರಿಸ್ಕ್, ಬಡ್ಡಿ ದರ ರಿಸ್ಕ್, ಲಿಕ್ವಿಡಿಟಿ ರಿಸ್ಕ್, ಮಾರ್ಕೆಟ್/ಬೆಲೆ ರಿಸ್ಕ್, ವಹಿವಾಟು ರಿಸ್ಕ್‌, ಈವೆಂಟ್‌ರಿಸ್ಕ್, ನಿಯಂತ್ರಕ ರಿಸ್ಕ್ ಇತ್ಯಾದಿಯನ್ನು ಹೊಂದಿರುತ್ತದೆ.  ನಿಮ್ಮ ಮ್ಯೂಚುಯಲ್ ಫಂಡ್ ವಿತರಕರು / ಹೂಡಿಕೆ ಸಲಹೆಗಾರರು ಮತ್ತು ಫಂಡ್ ಮ್ಯಾನೇಜರ್‌ನಂತಹ ಹಣಕಾಸು ತಜ್ಞರ ಜ್ಞಾನವು ವೈವಿಧ್ಯೀಕರಣದ ಜೊತೆಗೆ ಅವುಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ.

439

ಮ್ಯೂಚುವಲ್‌ ಫಂಡ್‌ ಸೂಕ್ತವೇ??