ಕೆಲವರು ನಿಯತ ಆದಾಯಕ್ಕೆ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ ಮತ್ತು ಅವರು ಡಿವಿಡೆಂಡ್ ಪಡೆಯುವ ಆಯ್ಕೆಯನ್ನು ಸಾಮಾನ್ಯವಾಗಿ ನೋಡುತ್ತಿರುತ್ತಾರೆ. ಹೀಗಾಗಿ ಹಲವು ಸ್ಕೀಮ್‌ಗಳು, ಅದರಲ್ಲೂ ವಿಶೇಷವಾಗಿ ಡೆಟ್‌ಆಧರಿತ ಸ್ಕೀಮ್‌ಗಳು ಮಾಸಿಕ ಅಥವಾ ತ್ರೈಮಾಸಿಕ ಡಿವಿಡೆಂಡ್ ಆಯ್ಕೆಗಳನ್ನು ಹೊಂದಿರುತ್ತವೆ. ಸ್ಕೀಮ್ ಮಾಡಿದ ಲಾಭ ಅಥವಾ ಗಳಿಕೆಯನ್ನು ಡಿವಿಡೆಂಡ್‌ಗಳ ರೂಪದಲ್ಲಿ ವಿತರಿಸಲಾಗುತ್ತದೆ ಮತ್ತು ಇದು ಪ್ರತಿ ತಿಂಗಳು ಖಚಿತ ಮೊತ್ತವನ್ನು ನೀಡುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಫಂಡ್‌ಹೌಸ್‌ಗಳು ಸ್ಥಿರ ಡಿವಿಡೆಂಡ್‌ಗಳನ್ನು ಕೊಡುವ ಭರವಸೆಯನ್ನು ನೀಡುತ್ತವೆಯಾದರೂ, ಮಾರ್ಕೆಟ್‌ಚಲನೆ ಮತ್ತು ಫಂಡ್‌ಕಾರ್ಯಕ್ಷಮತೆಯನ್ನು ಆಧರಿಸಿ ಹೆಚ್ಚುವರಿ ಮೊತ್ತವನ್ನು ವಿತರಿಸಲಾಗುತ್ತದೆ.
ಮಾಸಿಕ ಆದಾಯವನ್ನು ಪಡೆಯಲು ಇನ್ನೂ ಒಂದು ವಿಧಾನವೆಂದರೆ ಸಿಸ್ಟಮ್ಯಾಟಿಕ್ ವಿತ್‌ಡ್ರಾವಲ್‌ಪ್ಲಾನ್‌ಅನ್ನು (ಎಸ್‌ಡಬ್ಲ್ಯೂಪಿ) ಬಳಸುವುದು. ಇಲ್ಲಿ, ಸ್ಕೀಮ್‌ನ ಗ್ರೋತ್ ಪ್ಲಾನ್‌ನಲ್ಲಿ ಹೂಡಿಕೆ ಮಾಡಬೇಕು ಮತ್ತು ಮಾಸಿಕ ಪಾವತಿ ಎಂದು ಅಗತ್ಯವಿರುವ ಫಿಕ್ಸೆಡ್ ಮೊತ್ತವನ್ನು ನಿಗದಿಪಡಿಸಬೇಕು. ಆಗ ನಿಯೋಜಿತ ದಿನಾಂಕದಂದು, ಫಿಕ್ಸೆಡ್‌ಡೆಪಾಸಿಟ್‌ಗೆ ಎಷ್ಟು ಯೂನಿಟ್ ಆಗುತ್ತದೆಯೋ ಅದನ್ನು ರಿಡೀಮ್‌ಮಾಡಲಾಗುತ್ತದೆ. ಉದಾಹರಣೆಗೆ, ಒಬ್ಬ ಹೂಡಿಕೆದಾರರು ರೂ. 10 ಲಕ್ಷ ಹೂಡಿಕೆ ಮಾಡುತ್ತಾರೆ ಮತ್ತು ಪ್ರತಿ ತಿಂಗಳ 1ನೇ ದಿನಾಂಕದಂದು 10,000 ರೂ. ಪಾವತಿ ಮಾಡುವಂತೆ ವಿನಂತಿ ಮಾಡುತ್ತಾರೆ. ಹೀಗಾಗಿ ರೂ. 10,000 ಮೌಲ್ಯದ ಯೂನಿಟ್‌ಗಳನ್ನು ಪ್ರತಿ ತಿಂಗಳ 1 ನೇ ದಿನಾಂಕದಂದು ರಿಡೀಮ್ ಮಾಡಲಾಗುತ್ತದೆ.
ಡಿವಿಡೆಂಡ್ ಮತ್ತು ಎಸ್‌ಡಬ್ಲ್ಯೂಪಿ ಎರಡರ ತೆರಿಗೆ ವಿಧಾನ ವಿಭಿನ್ನವಾಗಿರುತ್ತದೆ ಮತ್ತು ಇದಕ್ಕೆ ಅನುಗುಣವಾಗಿ ಹೂಡಿಕೆದಾರರು ಯೋಜನೆಯನ್ನು ರೂಪಿಸಿಕೊಳ್ಳಬೇಕು.
* ಮಾಸಿಕ ಆದಾಯವು ಖಚಿತವಲ್ಲ ಮತ್ತು ಭವಿಷ್ಯದ ರಿಟರ್ನ್ಸ್ನ ಖಚಿತತೆ ಎಂದು ಪರಿಗಣಿಸುವಂತಿಲ್ಲ.