ದೀರ್ಘಕಾಲೀನ ಹೂಡಿಕೆಗೆ ನಾನು ಯಾವ ಮ್ಯೂಚುವಲ್‌ ಫಂಡ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು?

Video

ಭವಿಷ್ಯದ ಗುರಿಗಳಾದ ಕಾಲೇಜು ಶಿಕ್ಷಣ, ಮನೆ, ನಿವೃತ್ತಿ ಇತ್ಯಾದಿಗೆ ದೀರ್ಘಕಾಲೀನ ಹೂಡಿಕೆಗಳು ಸೂಕ್ತ. ಆದರೂ ನೀವು ನಿಮ್ಮ ಸಂಪತ್ತು ರಚನೆಗೆ ಸೂಕ್ತವಾದ ಫಂಡ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ದೀರ್ಘಕಾಲೀನ ಗುರಿಗಳು 10 ವರ್ಷಕ್ಕಿಂತ ಹೆಚ್ಚು ವ್ಯಾಪ್ತಿಯನ್ನು ಹೊಂದಿವೆ ಮತ್ತು ಈಕ್ವಿಟಿ ಆಧರಿತ ಸ್ಕೀಮ್‌ಗಳು (65% ಈಕ್ವಿಟಿ ನಿಯೋಜನೆ) ಉತ್ತಮ ದೀರ್ಘಕಾಲೀನ ಹೂಡಿಕೆ ಆಯ್ಕೆಗಳಾಗಿವೆ. ಹೈಬ್ರಿಡ್ ಮತ್ತು  ಡೆಟ್‌ ಫಂಡ್‌ಗಳಿಗೆ ಹೋಲಿಸಿದರೆ ಅಲ್ಪಾವಧಿಯಲ್ಲಿ ಹೆಚ್ಚು ಅಸ್ಥಿರವಾಗಿದ್ದರೂ ದೀರ್ಘಕಾಲದಲ್ಲಿ ಹೆಚ್ಚುಗಳಿಕೆ ನೀಡುವ ಸಾಧ್ಯತೆಯನ್ನು ಈಕ್ವಿಟಿಗಳು ಹೊಂದಿರುತ್ತವೆ. ಉತ್ತಮ ವೈವಿಧ್ಯತೆಯನ್ನು ಹೊಂದಿದ ಈಕ್ವಿಟಿ ಫಂಡ್‌  ದೀರ್ಘಕಾಲದಲ್ಲಿ ಸ್ಥಿರ ಗ್ರೋತ್ಅನ್ನು ನೀಡುವ ಸಾಧ್ಯತೆ ಹೆಚ್ಚಿರುತ್ತದೆ.

ಅಧಿಕ ರಿಸ್ಕ್ ಅಡ್ಜಸ್ಟಡ್ ರಿಟರ್ನ್ಸ್‌ಗಳನ್ನು ಒದಗಿಸುವ (ಹರಿತ ಅನುಪಾತ) ಅಂದರೆ ಅದೇ ಪ್ರಮಾಣದ ರಿಸ್ಕ್‌ಗೆ ಅಧಿಕ ರಿಟರ್ನ್ಸ್ ಅನ್ನು ಕೊಡುವ ಫಂಡ್‌ಗಳನ್ನು  ನೋಡಿ. ಸಂಚಿತ ಪರಿಣಾಮದಿಂದಾಗಿ ಫಂಡ್ಸ್ ರಿಟರ್ನ್ ಮೇಲೆ  ದೀರ್ಘಾವಧಿಯಲ್ಲಿ ವೆಚ್ಚ ಅನುಪಾತವು ಪರಿಣಾಮ ಉಂಟುಮಾಡುತ್ತದೆ. ಕಡಿಮೆ ವೆಚ್ಚ ಅನುಪಾತ ಹೊಂದಿರುವ ಫಂಡ್ ಆಯ್ಕೆ ಮಾಡಿ. ಆಗ ದೀರ್ಘಕಾಲದಲ್ಲಿ ಫಂಡ್‌ನ ರಿಟರ್ನ್ ಅನ್ನು ಹೆಚ್ಚಿಸಲು ಹೆಚ್ಚು ಫಂಡ್ಸ್ ಲಭ್ಯವಿರುತ್ತದೆ.  ಫಂಡ್‌ ಮ್ಯಾನೇಜರ್‌ ಉತ್ತಮ  ಫಲಿತಾಂಶವನ್ನು ನೀಡುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಲು, ಫಂಡ್‌ ಮ್ಯಾನೇಜರ್‌ರ  ಟ್ರ್ಯಾಕ್ ರೆಕಾರ್ಡ್ ನೋಡಿ. ಅವರು ನಿರ್ವಹಿಸಿದ ಫಂಡ್‌ಗಳನ್ನು ನೋಡಿ ಮತ್ತು ಅವರ ಫಂಡ್‌ ಇತರ ಫಂಡ್‌ಗಳಿಗೆ ಹೋಲಿಸಿದರೆ ನಿರಂತರವಾಗಿ ಉತ್ತಮ ಸಾಧನೆ ಮಾಡಿದೆಯೇ ಎಂದು ನೋಡಿ. ದೀರ್ಘಕಾಲೀನ ಹೂಡಿಕೆಗಳಿಗೆ ಅಧಿಕ ಬೀಟಾ ಹೊಂದಿರುವ ಫಂಡ್‌ಗಳನ್ನೂ ನೀವು ನೋಡಬಹುದು. ಅವು ಮಾರ್ಕೆಟ್‌ಗಿಂತ ಹೆಚ್ಚು ಗಳಿಕೆ/ನಷ್ಟವನ್ನುಇವು ದಾಖಲಿಸಿರುತ್ತವೆ. ಹೀಗಾಗಿ ಅಧಿಕ ಬೀಟಾಇದ್ದರೆ, ದೀರ್ಘಕಾಲದಲ್ಲಿ ಮಾರ್ಕೆಟ್‌ಗಿಂತ ಹೆಚ್ಚು ಗಳಿಕೆ ಮಾಡಿರುತ್ತದೆ.

435

ಮ್ಯೂಚುವಲ್‌ ಫಂಡ್‌ ಸೂಕ್ತವೇ??