ಗೋಲ್ಡ್ ಇಟಿಎಫ್‌ಗಳು 99.5% ಶುದ್ಧತೆಯ ಚಿನ್ನದ ಬುಲಿಯನ್‌ನಲ್ಲಿ ಹೂಡಿಕೆ ಮಾಡುತ್ತವೆ. ಇದು ಭೌತಿಕ ಲೋಹದಲ್ಲಿ ಹೂಡಿಕೆ ಮಾಡಿದಷ್ಟೇ ಉತ್ತಮವಾಗಿದೆ. ದೀರ್ಘಾವಧಿಗೆ ನೀವು ಚಿನ್ನವನ್ನು ಸಂಗ್ರಹಿಸಿಕೊಳ್ಳಲು ಬಯಸಿದ್ದರೆ, ಭೌತಿಕ ರೂಪದಲ್ಲಿ ಹೊಂದುವುದು ಅಥವಾ ಗೋಲ್ಡ್ ಫಂಡ್‌ನಲ್ಲಿ ಹೂಡಿಕೆ ಮಾಡುವುದಕ್ಕಿಂತ ಗೋಲ್ಡ್ ಇಟಿಎಫ್‌ನಲ್ಲಿ ಹೂಡಿಕೆ ಮಾಡುವುದು ಅತ್ಯಂತ ಉತ್ತಮ ವಿಧಾನವಾಗಿದೆ.
ಗಣಿಗಾರಿಕೆ, ಸಂಸ್ಕರಣೆ, ಫ್ಯಾಬ್ರಿಕೇಶನ್ ಮತ್ತು ಚಿನ್ನದ ವಿತರಣೆ ಮಾಡುವಲ್ಲಿ ತೊಡಗಿಸಿಕೊಂಡಿರುವ ಕಂಪನಿಗಳ ಷೇರುಗಳಲ್ಲಿ ಚಿನ್ನದ ಮ್ಯೂಚುವಲ್ ಫಂಡ್‌ಗಳು ಹೂಡಿಕೆ ಮಾಡಿರುತ್ತವೆ. ಈ ಕಂಪನಿಗಳ ಷೇರು ಬೆಲೆಗಳ ಚಲನೆಯನ್ನು ಆಧರಿಸಿ ಗೋಲ್ಡ್ ಫಂಡ್‌ಗಳು ಪರ್ಫಾರ್ಮ್ ಮಾಡುತ್ತವೆ. ಹಳದಿ ಲೋಹದ ಪರ್ಫಾರ್ಮೆನ್ಸ್‌ಗೆ ನೇರವಾಗಿ ಲಿಂಕ್ ಮಾಡಿದ ರಿಟರ್ನ್ಸ್ ಅನ್ನು ಗೋಲ್ಡ್ ಇಟಿಎಫ್‌ಗಳು ತೋರಿಸುತ್ತವೆ, ಆದರೆ ಗೋಲ್ಡ್ ಫಂಡ್‌ಗಳು ಚಿನ್ನದ ಉದ್ಯಮದ ಪರ್ಫಾರ್ಮೆನ್ಸ್‌ಗೆ ಸಂಬಂಧಿಸಿದ ರಿಟರ್ನ್ಸ್ ಅನ್ನು ತೋರಿಸುತ್ತವೆ.
ಫಂಡ್ ಮ್ಯಾನೇಜರ್‌ಗಳು ನಿರ್ವಹಿಸುವ ಗೋಲ್ಡ್ ಮ್ಯೂಚುವಲ್ ಫಂಡ್‌ಗಳನ್ನು ಸಕ್ರಿಯವಾಗಿ ನಿರ್ವಹಿಸಲಾಗುತ್ತದೆ. ಮಾರ್ಕೆಟ್ ಇಂಡೆಕ್ಸ್ ಅನ್ನು ಅನುಕರಿಸುವ ಗೋಲ್ಡ್ ಇಟಿಎಫ್‌ಗಳಿಗೆ ಹೋಲಿಸಿದರೆ ಅಧಿಕ ರಿಟರ್ನ್ಸ್ ಅನ್ನು ಒದಗಿಸುವ ಸಾಧ್ಯತೆ ಹೊಂದಿರುತ್ತವೆ. ಇಟಿಎಫ್‌ಗಳು ಸೂಚ್ಯಂಕವನ್ನು ಪ್ರತಿಫಲಿಸುವುದರಿಂದ, ಗೋಲ್ಡ್ ಫಂಡ್‌ಗಿಂತ ಕಡಿಮೆ ಎಕ್ಸ್‌ಪೆನ್ಸ್ ಅನುಪಾತವನ್ನು ಗೋಲ್ಡ್ ಇಟಿಎಫ್‌ಗಳು ಹೊಂದಿರುತ್ತವೆ. ಗೋಲ್ಡ್ ಮ್ಯೂಚುವಲ್ ಫಂಡ್‌ಗಳಿಗಿಂತ ಹೆಚ್ಚು ನಿಖರವಾಗಿ ಭೌತಿಕ ಹಳದಿ ಲೋಹದ ಬೆಲೆ ಚಲನೆಯನ್ನು ಗೋಲ್ಡ್ ಇಟಿಎಫ್‌ಗಳು ಟ್ರ್ಯಾಕ್ ಮಾಡುತ್ತವೆ. ಇಟಿಎಫ್‌ಗಳನ್ನು ಎಕ್ಸ್‌ಚೇಂಜ್‌ನಲ್ಲಿ ಲಿಸ್ಟ್ ಮಾಡಿರುವುದರಿಂದ, ಅವು ಹೆಚ್ಚು ಲಿಕ್ವಿಡಿಟಿ ಒದಗಿಸುತ್ತವೆ. ಚಿನ್ನದ ನಿಜವಾದ ಬೆಲೆಯಲ್ಲಿ ದಿನದ ಯಾವುದೇ ಸಮಯದಲ್ಲಿ ನಿಮ್ಮ ಹೋಲ್ಡಿಂಗ್ಸ್ ಅನ್ನು ಮಾರಬಹುದು ಅಥವಾ ಖರೀದಿ ಮಾಡಬಹುದು. ಹೀಗಾಗಿ, ಭೌತಿಕ ಚಿನ್ನವನ್ನು ಖರೀದಿಸುವುದಕ್ಕಿಂತ ಗೋಲ್ಡ್ ಇಟಿಎಫ್‌ಗಳು ಉತ್ತಮ ಪರ್ಯಾಯವಾಗಿರುತ್ತವೆ. ಎಸ್‌ಐಪಿ ಮೂಲಕ ದೀರ್ಘಕಾಲದವರೆಗೆ ಚಿನ್ನದ ಉದ್ಯಮದಲ್ಲಿ ಹೂಡಿಕೆ ಮಾಡಿರಲು ಗೋಲ್ಡ್ ಫಂಡ್‌ಗಳು ಉತ್ತಮ ಅವಕಾಶವನ್ನು ಒದಗಿಸುತ್ತವೆ.