ಬ್ಯಾಂಕ್‌ನ ಫಿಕ್ಸೆಡ್ ಡೆಪಾಸಿಟ್‌ನಲ್ಲಿ ನೀವು ನಿಮ್ಮ ಹಣವನ್ನು ಇಟ್ಟಾಗ, ಫಿಕ್ಸೆಡ್ ಬಡ್ಡಿ ರೂಪದಲ್ಲಿ ನಿಮಗೆ ಪಾವತಿ ಮಾಡುವ ಭರವಸೆ ನೀಡುತ್ತದೆ. ಇಲ್ಲಿ ನೀವು ಬ್ಯಾಂಕ್‌ಗೆ ಹಣವನ್ನು ಸಾಲ ನೀಡಿದ್ದೀರಿ ಮತ್ತು ನಿಮ್ಮ ಹಣಕ್ಕೆ ಬ್ಯಾಂಕ್ ಸಾಲಗಾರನಾಗಿದೆ. ಇದು ನಿಮಗೆ ಫಿಕ್ಸೆಡ್ ಸಕಾಲಿಕ ಬಡ್ಡಿಯನ್ನು ಒದಗಿಸುವ ಭರವಸೆ ನೀಡುತ್ತದೆ. ಸರ್ಕಾರಿ ಬಾಂಡ್‌ಗಳು, ಕಂಪನಿ ಬಾಂಡ್‌ಗಳು, ಮನಿ ಮಾರ್ಕೆಟ್ ಸೆಕ್ಯುರಿಟಿಗಳಂತಹ ಡೆಟ್ ಸೆಕ್ಯುರಿಟಿಗಳಲ್ಲಿ ಡೆಟ್ ಮ್ಯೂಚುವಲ್ ಫಂಡ್‌ಗಳು ಹೂಡಿಕೆ ಮಾಡುತ್ತವೆ. ಪವರ್ ಕಂಪನಿಗಳು, ಬ್ಯಾಂಕ್‌ಗಳು, ಗೃಹ ಹಣಕಾಸು ಕಂಪನಿಗಳು ಮತ್ತು ಸರ್ಕಾರದಂತಹ ಕಾರ್ಪೊರೇಟ್‌ಗಳ ಮೂಲಕ ಬಾಂಡ್‌ಗಳನ್ನು ವಿತರಿಸಲಾಗುತ್ತದೆ. ಬಾಂಡ್ ವಿತರಕರು ತಮ್ಮ ಹೂಡಿಕೆದಾರರಿಗೆ (ತಮ್ಮ ಬಾಂಡ್‌ಗಳನ್ನು ಖರೀದಿಸಿದವರಿಗೆ), ಬಾಂಡ್‌ಗಳಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಸಕಾಲಿಕ ಬಡ್ಡಿ ಪಾವತಿ ಮಾಡುವ ಭರವಸೆ ನೀಡುತ್ತಾರೆ.
ನಮ್ಮ ಎಫ್‌ಡಿ ಉದಾಹರಣೆಯಲ್ಲಿ ಬ್ಯಾಂಕ್ (ಸಾಲಗಾರರು) ರೀತಿಯಲ್ಲಿ ಬಾಂಡ್ ವಿತರಕರು ಕೆಲಸ ಮಾಡುತ್ತಾರೆ. ಹೂಡಿಕೆದಾರರಿಂದ ಹಣವನ್ನು ಸಾಲ ಪಡೆಯುತ್ತಾರೆ ಮತ್ತು ಸಕಾಲಿಕ ಬಡ್ಡಿ ನೀಡುವ ಭರವಸೆ ನೀಡುತ್ತಾರೆ. ನೀವು ಬ್ಯಾಂಕ್ ಎಫ್‌ಡಿಯಲ್ಲಿ ಹೂಡಿಕೆದಾರರಾಗಿದ್ದರೆ, ಡೆಟ್ ಫಂಡ್‌ಗಳು ಈ ಬಾಂಡ್‌ಗಳಲ್ಲಿ ಹೂಡಿಕೆದಾರನಾಗಿರುತ್ತದೆ. ಎಫ್‌ಡಿಯಿಂದ ನೀವು ಬಡ್ಡಿಯನ್ನು ಗಳಿಸಿದಂತೆಯೇ ಡೆಟ್ ಫಂಡ್‌ಗಳು ತಮ್ಮ ಬಾಂಡ್‌ನ ಪೋರ್ಟ್‌ಫೋಲಿಯೋದಿಂದ ಸಕಾಲಿಕ ಬಡ್ಡಿ ಪಡೆಯುತ್ತದೆ. ಎಫ್‌ಡಿಗಳಿಂದ ಖಚಿತ ಬಡ್ಡಿಯು ಸಿಗುತ್ತದೆಯಾದರೆ, ಈ ಬಾಂಡ್‌ಗಳಿಂದ ಫಿಕ್ಸೆಡ್ ಇನ್‌ಕಮ್ ಡೆಟ್ ಫಂಡ್‌ಗಳಿಗೆ ಸಕಾಲಿಕ ಬಡ್ಡಿ ಪಾವತಿಯು ಯಾವುದೇ ಗ್ಯಾರಂಟಿ ಇಲ್ಲದೇ ಫಿಕ್ಸೆಡ್ ಅಥವಾ ವೈವಿಧ್ಯದ್ದೂ ಆಗಿರಬಹುದು. ತಮ್ಮ ಪೋರ್ಟ್‌ಫೋಲಿಯೋದಿಂದ ಬಾಂಡ್‌ಗಳನ್ನು ಅವರು ಮಾರಾಟಮಾಡಿದಾಗ ಅವರಿಗೆ ಅಸಲು ವಾಪಸಾಗುತ್ತದೆ. ಫಿಕ್ಸೆಡ್ ಇನ್‌ಕಮ್ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದಾಗ, ನೀವು ಅದರ ಬಾಂಡ್ ಪೋರ್ಟ್‌ಫೋಲಿಯೋದಲ್ಲಿ ಪರೋಕ್ಷವಾಗಿ ಹೂಡಿಕೆ ಮಾಡಿರುತ್ತೀರಿ. ಹೀಗಾಗಿ ವಿಭಿನ್ನ ಬಾಂಡ್ ವಿತರಕರಲ್ಲಿ ರಿಸ್ಕ್ ವ್ಯಾಪಿಸಿರುತ್ತದೆ. ಇಂತಹ ರಿಸ್ಕ್ ವೈವಿಧ್ಯತೆಯಿಂದ ನಿಮಗೆ ಲಾಭವಾಗುತ್ತದೆ.