ಕೆಲವು ಜನರು ಸುರಕ್ಷಿತವಾಗಿ ಆಟವಾಡಲು ಮತ್ತು ಪರಿಚಿತ ಆಯ್ಕೆಗಳನ್ನು ಮಾಡಲು ಬಯಸುತ್ತಾರೆ. ಒಂದು ವೇಳೆ ನೀವು ಹೊಸ ರೆಸ್ಟೋರೆಂಟ್‌ಗೆ ಹೋಗಿದ್ದೀರಿ. ಮೆನುವಿನಲ್ಲಿ ಆಕರ್ಷಕ ತಿನಿಸುಗಳಿವೆ. ಆದರೆ ಬೇರೆ ತಿನಿಸು ಚೆನ್ನಾಗಿಲ್ಲದಿದ್ದರೆ ಎಂಬ ಕಾರಣಕ್ಕೆ ನಿಮಗೆ ಪರಿಚಿತವಾದ ತಿನಿಸನ್ನೇ ಆರ್ಡರ್ ಮಾಡುತ್ತೀರಿ. ನೀವು ರೆಗ್ಯುಲರ್ ‘ಪನೀರ್ ಕಥಿ ರೋಲ್’ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮಗೆ ಅಷ್ಟೇನೂ ಪರಿಚಯವಿಲ್ಲದ ‘ಕಾಸ್ಕಸ್ ಪನೀರ್ ಸಲಾಡ್’ ಅನ್ನು ಆರ್ಡರ್ ಮಾಡದೇ ಇರಬಹುದು. ಆದರೆ ಹೊಸ ರೆಸ್ಟೋರೆಂಟ್‌ನಲ್ಲಿ ನೀವು ಅದರ ಸೇವೆ, ವಾತಾವರಣ ಮತ್ತು ಆಹಾರವನ್ನು ಆನಂದಿಸುತ್ತೀರಿ.
ಮ್ಯೂಚುವಲ್ ಫಂಡ್ಸ್‌ನಲ್ಲಿ ಹೂಡಿಕೆ ಮಾಡುವುದು ಎಂದರೆ ರೆಸ್ಟೋರೆಂಟ್‌ನಲ್ಲಿನ ಮೆನುವಿನಲ್ಲಿ ಸರಿಯಾದ ತಿನಿಸು ಆರ್ಡರ್ ಮಾಡಿದಂತೆ. ಸ್ಟಾಕ್ ಮಾರ್ಕೆಟ್‌ನಿಂದ ನೀವು ದೂರವಿರಬೇಕು ಎಂದು ಬಯಸಿದರೆ, ನಿಮ್ಮ ಹಣಕಾಸು ಗುರಿಗಳಿಗೆ ನೀವು ಡೆಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಆಯ್ಕೆ ಮಾಡಿಕೊಳ್ಳಬಹುದು. ಮ್ಯೂಚುವಲ್ ಫಂಡ್‌ಗಳನ್ನು ಸಾಮಾನ್ಯವಾಗಿ ಅವು ಎಲ್ಲಿ ಹೂಡಿಕೆ ಮಾಡುತ್ತವೆ ಎಂಬುದನ್ನು ಆಧರಿಸಿ ಈಕ್ವಿಟಿ, ಡೆಟ್ ಮತ್ತು ಹೈಬ್ರಿಡ್, ಸೊಲ್ಯುಶನ್ ಆಧರಿತ ಸ್ಕೀಮ್‌ಗಳು ಮತ್ತು ಇತರ ಸ್ಕೀಮ್‌ಗಳು ಎಂದು ವಿಭಾಗಿಸಲಾಗಿದೆ.
ಈಕ್ವಿಟಿ ಮ್ಯೂಚುವಲ್ ಫಂಡ್‌ಗಳ ಮೂಲಕ ನೀವು ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡಲು ಬಯಸದೇ ಇದ್ದರೆ, ಬ್ಯಾಂಕ್‌ಗಳು, ಕಾರ್ಪೊರೇಟ್‌ಗಳು, ಸರ್ಕಾರಿ ಸಂಸ್ಥೆಗಳಾದ ಆರ್‌ಬಿಐ ವಿತರಿಸುವ ಬಾಂಡ್‌ಗಳು ಮತ್ತು ಹಣದ ಮಾರ್ಕೆಟ್ ಸಲಕರಣೆಗಳಾದ ಕಮರ್ಷಿಯಲ್ ಪೇಪರುಗಳು, ಬ್ಯಾಂಕ್ ಸಿಡಿಗಳು, ಟಿ ಬಿಲ್‌ಗಳು