ದೀರ್ಘಕಾಲದಲ್ಲಿ ಸಂಪತ್ತು ಸೃಷ್ಟಿಗೆ ಸಹಾಯ ಮಾಡುವ ನಿರ್ದಿಷ್ಟ ಫಂಡ್‌ಗಳು ಇವೆಯೇ?

ದೀರ್ಘಕಾಲದಲ್ಲಿ ಸಂಪತ್ತು ಸೃಷ್ಟಿಗೆ ಸಹಾಯ ಮಾಡುವ ನಿರ್ದಿಷ್ಟ ಫಂಡ್‌ಗಳು ಇವೆಯೇ? zoom-icon

ಸಂಪತ್ತು ಎಂದರೇನು? ಇದು ಯಾವ ಉದ್ದೇಶವನ್ನು ಪೂರೈಸುತ್ತದೆ?

ಹಲವರು ಇದಕ್ಕೆ ವಿಧ ವಿಧವಾದ ಉತ್ತರವನ್ನು ನೀಡುತ್ತಾರೆ. “ನಮ್ಮ ಕನಸಿದ್ದ ಹಾಗೆ ಜೀವಿಸುವುದು” ಅಥವಾ “ಹಣದ ಬಗ್ಗೆ ಚಿಂತೆ ಮಾಡದೇ ಇರುವುದು” ಅಥವಾ “ಹಣಕಾಸು ಸ್ವಾತಂತ್ರ್ಯವನ್ನು ಅನುಭವಿಸುವುದು” ಇತ್ಯಾದಿ. ಸಂಪದ್ಭರಿತವಾಗಿರುವುದು ಎಂದರೆ, ತಮ್ಮ ಜವಾಬ್ದಾರಿಗಳು ಮತ್ತು ಕನಸುಗಳನ್ನು ಪೂರೈಸಲು ಸಾಕಷ್ಟು ಹಣವನ್ನು ಹೊಂದಿರುವುದು ಎಂದು ಅರ್ಥವಾಗಿರುತ್ತದೆ.

ಆದರೆ, ಎಲ್ಲ ದೀರ್ಘಕಾಲೀನ ವೆಚ್ಚಗಳನ್ನು ಮಾಡುವಾಗಲೂ “ಹಣದುಬ್ಬರ” ಎಂಬ ಒಂದು ಪ್ರಮುಖ ಅಂಶವನ್ನು ನಾವು ಮರೆಯಬಾರದು. ಹೆಸರೇ ಹೇಳುವಂತೆ, ಕಾಲ ಕಳೆದಂತೆ ನೀವು ನಿಮ್ಮ ಜೀವನದ ಗುರಿಯನ್ನು ಪೂರ್ಣಗೊಳಿಸಲು ವೆಚ್ಚ ಮಾಡಬೇಕಾಗಿ ಬಂದಾಗ ವೆಚ್ಚವನ್ನು ಹೆಚ್ಚಿಸುವ ಅಂಶವೇ ಹಣದುಬ್ಬರವಾಗಿದೆ.

ವೈವಿಧ್ಯಮಯ ಈಕ್ವಿಟಿ ಫಂಡ್‌ಗಳು ಸಕಾರಣವಾಗಿ ರಿಸ್ಕ್‌ ಮಟ್ಟದಲ್ಲಿ ದೀರ್ಘಕಾಲದಲ್ಲಿ ಸಂಪತ್ತು ಸೃಷ್ಟಿಸುವ ಆಯ್ಕೆಯನ್ನು ಒದಗಿಸುತ್ತವೆ. ಈಕ್ವಿಟಿಗಳಿಗೆ ಸಂಬಂಧಿಸಿದ ರಿಸ್ಕ್‌ ಮೂರು ಅಂಶಗಳಿಂದಾಗಿ ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ.

  • ಫಂಡ್‌ ಅನ್ನು ನಿರ್ವಹಣೆ ಮಾಡುವ ವೃತ್ತಿಪರ ಫಂಡ್‌ ಮ್ಯಾನೇಜರ್ ಪರಿಣಿತಿ
  • ಸೆಕ್ಯುರಿಟಿಗಳ ಬಾಸ್ಕೆಟ್‌ನಲ್ಲಿ ಮಾಡಿದ ಹೂಡಿಕೆಗಳಿಂದಾಗಿ ರಿಸ್ಕ್‌ಗಳ ವೈವಿಧ್ಯತೆ
  • ಅಲ್ಪಕಾಲದ ಅಸ್ಥಿರತೆಯ ಮೇಲೆ ಪರಿಣಾಮವನ್ನು ಕಡಿಮೆ ಮಾಡುವುದಕ್ಕಾಗಿ ದೀರ್ಘಕಾಲದಲ್ಲಿ ಹೂಡಿಕೆ ಮಾಡುವುದು

ಒಂದು ಅಸೆಟ್ ಕ್ಲಾಸ್ ಆಗಿ ಈಕ್ವಿಟಿಗಳು ಸಂಪತ್ತು ಸೃಷ್ಟಿಸುವ ಅವಕಾಶವನ್ನು ಹೂಡಿಕೆದಾರರಿಗೆ ನೀಡಿದರೂ ಅಲ್ಪಕಾಲದಲ್ಲಿ ಈಕ್ವಿಟಿಗಳು ಅಸ್ಥಿರವಾಗಿರುತ್ತವೆ ಎಂಬುದನ್ನೂ ನಾವು ಗಮನದಲ್ಲಿಟ್ಟುಕೊಳ್ಳಬೇಕಾದ್ದು ಅತ್ಯಂತ ಪ್ರಮುಖವಾಗಿದೆ. ಹೀಗಾಗಿ, ನೀವು ದೀರ್ಘಕಾಲಕ್ಕಾಗಿ ಹೂಡಿಕೆ ಮಾಡಬೇಕು.

437

ಮ್ಯೂಚುವಲ್‌ ಫಂಡ್‌ ಸೂಕ್ತವೇ??