ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡುವುದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ, ಯಾವುದೇ ಬ್ಯಾಂಕ್ನಲ್ಲಿ ಖಾತೆ ಹೊಂದಿರುವುದು, ಕೆವೈಸಿ / ಸಿಕೆವೈಸಿ, ಪ್ಯಾನ್ ಮತ್ತು ಆಧಾರ್ ಕಾರ್ಡ್ಗಳನ್ನು ಹೊಂದಿರಬೇಕಾದ್ದು ಅಗತ್ಯ. ಕೆಲವು ದುರುದ್ದೇಶಪೂರಿತ ಹೂಡಿಕೆದಾರರು ಹಣ ದುರ್ಬಳಕೆಗಾಗಿ ಮ್ಯೂಚುವಲ್ ಫಂಡ್ಗಳನ್ನು ಬಳಸಿಕೊಳ್ಳದೇ ಇರಲಿ ಎಂಬ ಉದ್ದೇಶಕ್ಕೆ ಇದನ್ನು ಕಡ್ಡಾಯ ಮಾಡಲಾಗಿದೆ. ಕೆಲವು ಮ್ಯೂಚುವಲ್ ಫಂಡ್ಗಳು ಮತ್ತು ಬ್ಯಾಂಕ್ಗಳು ಪೇರೆಂಟ್ ಕಂಪನಿಯಾಗಿರುತ್ತವೆ. ಅಂದರೆ ಅವು ಒಂದೇ ಕಾರ್ಪೊರೇಟ್ ಸಂಸ್ಥೆಗೆ ಸೇರಿದ್ದಾಗಿರುತ್ತವೆ. ಆದರೆ, ಬ್ಯಾಂಕ್ಗಳು ಆರ್ಬಿಐ ವ್ಯಾಪ್ತಿಗೆ ಒಳಪಟ್ಟಿದ್ದು, ಮ್ಯೂಚುವಲ್ ಫಂಡ್ಗಳ ವಹಿವಾಟುಗಳನ್ನು ಸೆಬಿ ನಿರ್ವಹಿಸುತ್ತಿರುತ್ತದೆ. ಮ್ಯೂಚುವಲ್ ಫಂಡ್ ಕಂಪನಿ ಮತ್ತು ಜನಪ್ರಿಯ ಬ್ಯಾಂಕ್ಗಳ ಹೆಸರು ಒಂದೇ ಇರುವುದನ್ನು ಕೆಲವು ಬಾರಿ ನೀವು ಗಮನಿಸಿರಬಹುದು. ಆದರೆ ಇವೆರಡೂ ಬೇರೆ ಬೇರೆ ಕಂಪನಿಗಳಾಗಿದ್ದು, ಇವನ್ನು ಸ್ವತಂತ್ರವಾಗಿ ನಿರ್ವಹಿಸುತ್ತಿರುತ್ತಾರೆ. ಈ ಮ್ಯೂಚುವಲ್ ಫಂಡ್ ಕಂಪನಿಯಲ್ಲಿ ಹೂಡಿಕೆ ಮಾಡಲು ನೀವು ಅವರ ಒಡೆತನದಲ್ಲೇ ಇರುವ ಬ್ಯಾಂಕ್ನಲ್ಲಿ ಸೇವಿಂಗ್ಸ್ ಖಾತೆ ಹೊಂದಿರಬೇಕು ಎಂದೇನಿಲ್ಲ.
ಬ್ಯಾಂಕ್ಗಳು ವಿವಿಧ ಮ್ಯೂಚುವಲ್ ಫಂಡ್ಗಳಿಗೆ ವಿತರಕರಾಗಿಯೂ ಕೆಲಸ ಮಾಡುತ್ತವೆ ಮತ್ತು ಈ ಫಂಡ್ಗಳನ್ನು ತಮ್ಮ ಗ್ರಾಹಕರಿಗೆ ಕ್ರಾಸ್ ಸೆಲ್ ಮಾಡುತ್ತಿರುತ್ತವೆ. ಮಾರ್ಕೆಟ್ನಲ್ಲಿ ಲಭ್ಯವಿರುವ ಎಲ್ಲ ಮ್ಯೂಚುವಲ್ ಫಂಡ್ಗಳನ್ನು ಅವು ಮಾರಾಟ ಮಾಡುತ್ತಿಲ್ಲದಿರಬಹುದು. ಆದರೆ ತಾವು ಯಾರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆಯೋ ಅವರ ಮ್ಯೂಚುವಲ್ ಫಂಡ್ಗಳನ್ನು ಮಾತ್ರ ನಿಮಗೆ ಒದಗಿಸಬಲ್ಲವು. ಮಾರಾಟ ಮಾಡುವ ಬ್ಯಾಂಕ್ಗೂ ಮತ್ತು ಮ್ಯೂಚುವಲ್ ಫಂಡ್ಗಳಿಗೂ ನೇರ ಸಂಬಂಧ ಇರುವುದಿಲ್ಲ. ಆದರೆ ಇದರಲ್ಲಿ ನೀವು ಹೂಡಿಕೆ ಮಾಡಲು ಆಯ್ಕೆ ಮಾಡಿಕೊಳ್ಳಬಹುದು.