ತಮ್ಮ ಆರ್ಥಿಕ ಭವಿಷ್ಯವನ್ನು ರಕ್ಷಿಸಲು ಇದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದ್ದರೂ, ಜನರು ಹೂಡಿಕೆ ಮಾಡಲು ಪ್ರಾರಂಭಿಸಲು ವಯಸ್ಸಿನ ಮಧ್ಯಾವಸ್ಥೆಯವರೆಗೂ ಕಾಯುತ್ತಾರೆ. ಹೊಸದಾಗಿ ಕೆಲಸಕ್ಕೆ ಸೇರುವವರು ತಮ್ಮ ಭವಿಷ್ಯಕ್ಕಾಗಿ ಯೋಜಿಸುವುದಕ್ಕಿಂತ ತಮ್ಮ ಜೀವನಶೈಲಿಯನ್ನು ನವೀಕರಿಸುವುದು ಹೆಚ್ಚು ಸಾಮಾನ್ಯವಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅವರು ಜೀವನದಲ್ಲಿ ಮಧ್ಯಾವಸ್ಥೆ ಆಗುವವರೆಗೂ ಹೂಡಿಕೆ ಮಾಡಲು ಪ್ರಾರಂಭಿಸುವುದಿಲ್ಲ.
ಹೂಡಿಕೆಯನ್ನು ಪ್ರಾರಂಭಿಸಲು ಎಂದಿಗೂ ತಡವಾಗಿಲ್ಲದಿದ್ದರೂ, ಮೊದಲೇ ಪ್ರಾರಂಭಿಸುವುದರಿಂದ ಅನೇಕ ಪ್ರಯೋಜನಗಳಿವೆ. ಇದಲ್ಲದೆ, ಜೀವನದ ಆರಂಭದಲ್ಲಿ ಹೂಡಿಕೆ ಮಾಡುವುದರಿಂದ ಯುವ ಹೂಡಿಕೆದಾರರು ತಮ್ಮ ವೃತ್ತಿಪರ ಪ್ರಯಾಣದ ಆರಂಭದಲ್ಲಿ ಕಡಿಮೆ ಬದ್ಧತೆಗಳನ್ನು ಹೊಂದಿರುವುದರಿಂದ ನಂತರದ ಜೀವನದಲ್ಲಿ ಹೂಡಿಕೆ ಮಾಡುವುದಕ್ಕಿಂತ ಹೆಚ್ಚಿನದನ್ನು ಉಳಿಸಲು ಸಹಾಯ ಮಾಡುತ್ತದೆ.
ಚಿಕ್ಕ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಲು 5 ಪ್ರಮುಖ ಕಾರಣಗಳನ್ನು ನೋಡೋಣ:
- ಸಂಯೋಜನೆಯ (ಕಂಪೌಂಡಿಂಗ್) ಲಾಭವನ್ನು ಆನಂದಿಸಿ
ಮುಂಚಿತವಾಗಿ ಹೂಡಿಕೆ ಮಾಡುವ ಅತ್ಯಂತ ಮಹತ್ವದ ಪ್ರಯೋಜನವೆಂದರೆ ನಿಮ್ಮ ಬಳಿ ಹೆಚ್ಚುವರಿ ಸಮಯವನ್ನು ಹೊಂದಿರುವುದು. ಕಂಪೌಂಡಿಂಗ್ ಸಹಾಯದಿಂದ, ಕಾಲಾನಂತರದಲ್ಲಿ ನಿಮ್ಮ ಹೂಡಿಕೆಯನ್ನು ಹೆಚ್ಚಿಸಲು ನಿಮಗೆ ಉತ್ತಮ ಸಾಧ್ಯತೆ ಇದೆ. ಫಂಡ್ ನ ಲಾಭವು ಹೆಚ್ಚಾದಾಗ, ನಿಮ್ಮ ಹೂಡಿಕೆಗಳ ಮೇಲೆ ನೀವು ಗಳಿಸುವ ಬಡ್ಡಿಯನ್ನು ಹೆಚ್ಚಿನ ಆದಾಯ ಗಳಿಸಲು ಮರುಹೂಡಿಕೆ ಮಾಡಲಾಗುತ್ತದೆ.
ಒಂದು ಉದಾಹರಣೆಯನ್ನು ನೋಡೋಣ:
ನಿಮ್ಮ ಮೊದಲ ಸಂಬಳವನ್ನು ಪಡೆದಾಗ 25 ನೇ ವಯಸ್ಸಿನಲ್ಲಿ ನೀವು ವ್ಯವಸ್ಥಿತ ಹೂಡಿಕೆ ಯೋಜನೆಯನ್ನು ಪ್ರಾರಂಭಿಸುತ್ತೀರಿ ಎಂದುಕೊಳ್ಳಿ. ವಾರ್ಷಿಕ ಸರಾಸರಿ 10% ರಿಟರ್ನ್ ನೊಂದಿಗೆ
ಇನ್ನಷ್ಟು ಓದಿ