ನಾನು ಒಂದು ನಿಧಿಯಿಂದ ಇನ್ನೊಂದು ಕಂಪನಿಯ ನಿಧಿಗೆ ಹೇಗೆ ಬದಲಾಯಿಸುವುದು?

ನಾನು ಒಂದು ನಿಧಿಯಿಂದ ಇನ್ನೊಂದು ಕಂಪನಿಯ ನಿಧಿಗೆ ಹೇಗೆ ಬದಲಾಯಿಸುವುದು?

ಹೂಡಿಕೆದಾರರು ಉತ್ತಮ ಹಣಕಾಸು ಯೋಜನೆಗಾಗಿ ಒಂದೇ ಫಂಡ್ ಹೌಸ್‌ನಲ್ಲಿ ಒಂದು ಓಪನ್ ಎಂಡೆಡ್‌ ಸ್ಕೀಮ್‌ನಿಂದ ಇನ್ನೊಂದಕ್ಕೆ ಹೂಡಿಕೆಯನ್ನು ಬದಲಾವಣೆ ಮಾಡಬಹುದು. ಒಂದೇ ಫಂಡ್‌ ಹೌಸ್‌ನಲ್ಲಿ ಬದಲಾವಣೆ ಮಾಡಲು ಮೂಲ ಸ್ಕೀಮ್‌ನ ಮೊತ್ತ, ಯೂನಿಟ್‌ಗಳ ಸಂಖ್ಯೆ ಹಾಗೂ ಯಾವ ಸ್ಕೀಮ್‌ಗೆ ಬದಲಾಯಿಸಲು ಬಯಸಿದ್ದೀರಿ ಎಂಬುದನ್ನು ನಿರ್ದಿಷ್ಟಪಡಿಸಿ ಬದಲಾವಣೆ ನಮೂನೆಯನ್ನು ಭರ್ತಿ ಮಾಡಿ.  ಈಗಿನ ಸ್ಕೀಮ್‌ ಮತ್ತು ಬದಲಾವಣೆ ಮಾಡುತ್ತಿರುವ ಸ್ಕೀಮ್‌ಗೆ ಎಷ್ಟು ಕನಿಷ್ಠ ಹೂಡಿಕೆ ಮೊತ್ತವನ್ನು ನಿಗದಿಸಬೇಕು ಎಂಬ ಮಾನದಂಡವನ್ನು ನೀವು ಪೂರೈಸಬೇಕು. ಬದಲಾವಣೆ ಮಾಡುವಾಗ ಎಕ್ಸಿಟ್ ಲೋಡ್ ಮತ್ತು ಕ್ಯಾಪಿಟಲ್ ಗೇನ್ಸ್ ತೆರಿಗೆ ವಿಧಿಸಬಹುದು. ಒಂದೇ ಫಂಡ್ ಹೌಸ್‌ನಲ್ಲಿ ಬದಲಾವಣೆ ಮಾಡಲು ಸೆಟಲ್‌ಮೆಂಟ್ ಪೀರಿಯಡ್‌ ಬಗ್ಗೆ ಚಿಂತಿಸಬೇಕಿಲ್ಲ. ಯಾಕೆಂದರೆ ಫಂಡ್ ಹೌಸ್‌ನಿಂದ ಹಣ ಹೊರಗೆ ಹೋಗುವುದಿಲ್ಲ.

ನೀವು ಮ್ಯೂಚುವಲ್‌ ಫಂಡ್‌ ಸ್ಕೀಮ್ ಎ ಇಂದ ಮ್ಯೂಚುವಲ್ ಫಂಡ್ ಬಿ ಗೆ ಬದಲಾವಣೆ ಮಾಡುತ್ತಿದ್ದಾಗ ಒಂದು ಫಂಡ್‌ನಲ್ಲಿ ಹೂಡಿಕೆಯನ್ನು ಮಾರಾಟ ಮಾಡಿದಂತೆ ಮತ್ತು ಇನ್ನೊಂದರಲ್ಲಿ ಪುನಃ ಹೂಡಿಕೆ ಮಾಡಿದಂತೆ ಆಗುತ್ತದೆ. ಮೊದಲ ಮ್ಯೂಚುವಲ್‌ ಫಂಡ್‌ನಿಂದ ನೀವು ರಿಡೆಂಪ್ಷನ್‌ಗೆ ಅರ್ಜಿ ಸಲ್ಲಿಸಬಹುದು ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಇದು ಸಿಗುವವರೆಗೂ ನೀವು ನಿರೀಕ್ಷಿಸಬಹುದು. ನಿಮ್ಮ ಹೂಡಿಕೆಗಳನ್ನು ನೀವು ರಿಡೀಮ್ ಮಾಡುವಾಗ ಎಕ್ಸಿಟ್‌ ಲೋಡ್ ಮತ್ತು ತೆರಿಗೆ ಬಾಧ್ಯತೆಗಳನ್ನು ಪರಿಗಣಿಸಬೇಕಾಗುತ್ತದೆ. ನೀವು ಮೊದಲ ಫಂಡ್‌ನಿಂದ ಕ್ರೆಡಿಟ್ ಪಡೆದ ನಂತರ ನೀವು ಎಲ್ಲಿ ಮರುಹೂಡಿಕೆ ಮಾಡಲು ಬಯಸಿದ್ದೀರೋ ಆ ಮ್ಯೂಚುವಲ್‌ ಫಂಡ್‌ನ ಅರ್ಜಿ ನಮೂನೆಯನ್ನು ಭರ್ತಿ ಮಾಡಿ. ಸ್ವಿಚ್‌ಗಾಗಿ ಸರಿಯಾದ ಫಂಡ್‌ಗಳನ್ನು ಆಯ್ಕೆಮಾಡುವಲ್ಲಿ ನೀವು ಹಣಕಾಸು ತಜ್ಞರಿಂದ ಸಹಾಯ ಪಡೆಯಬಹುದು.

434

ಮ್ಯೂಚುವಲ್‌ ಫಂಡ್‌ ಸೂಕ್ತವೇ??