ಕೆಲವರಿಗೆ ಮ್ಯೂಚುವಲ್ಫಂಡ್ಗಳು ಸುಲಭ ಎನ್ನಿಸಬಹುದು. ಆದರೆ, ಇತರರಿಗೆ ಅರ್ಥ ಮಾಡಿಕೊಳ್ಳಲು ಸಂಕೀರ್ಣವಾಗಿರಬಹುದು. ಮ್ಯೂಚುವಲ್ ಫಂಡ್ಗಳು ಹೇಗೆ ಕೆಲಸ ಮಾಡುತ್ತವೆ ಮತ್ತು ಯಾವ ರೀತಿಯ ರಿಸ್ಕ್ಗಳನ್ನು ಇವು ಎದುರಿಸುತ್ತವೆ ಎಂಬುದನ್ನು ಹೊಸ ಹೂಡಿಕೆದಾರರು ಅರ್ಥ ಮಾಡಿಕೊಳ್ಳಲಾರರು. ಇಂದು ಮಾರ್ಕೆಟ್ನಲ್ಲಿ ಸಾವಿರಾರು ಮ್ಯೂಚುವಲ್ ಫಂಡ್ ಸ್ಕೀಮ್ಗಳು ಇರುವುದರಿಂದ, ಇಂತಹ ಹೂಡಿಕೆದಾರರು ತಮಗೆ ಹೆಚ್ಚು ಸೂಕ್ತವಾಗುವ ಕೆಲವೇ ಫಂಡ್ಗಳ ಆಯ್ಕೆ ಮಾಡುವುದು ಕಷ್ಟಕರ ಎನಿಸಬಹುದು.
ಮ್ಯೂಚುವಲ್ ಫಂಡ್ಗಳಂತಹ ಮಾರ್ಕೆಟ್ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುವ ಮಾರ್ಕೆಟ್ ಮತ್ತು ವಿವಿಧ ಹೂಡಿಕೆ ಉತ್ಪನ್ನಗಳ ಬಗ್ಗೆ ಪರಿಚಯ ಹೊಂದಿರುವ ಹಲವು ಹೂಡಿಕೆದಾರರಿದ್ದಾರೆ. ಇಂತಹ ಹೂಡಿಕೆದಾರರು ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವ ಅನುಭವವನ್ನು ಹೊಂದಿರುತ್ತಾರೆ ಅಥವಾ ವಿಷಯದ ವಿವರವಾದ ಅಧ್ಯಯನವನ್ನು ನಡೆಸಿರುತ್ತಾರೆ. ಈ ಹೂಡಿಕೆದಾರರು ಮ್ಯೂಚುವಲ್ ಫಂಡ್ಗಳು, ಅವುಗಳ ವಿಭಾಗಗಳು ಮತ್ತು ಉಪ ವಿಭಾಗಗಳು ಕೆಲಸ ಮಾಡುವ ಬಗ್ಗೆ, ಈ ಫಂಡ್ಗಳಲ್ಲಿ ರಿಸ್ಕ್-ರಿಟರ್ನ್ ಟ್ರೇಡ್-ಆಫ್ ಮತ್ತು ಅವುಗಳ ಹೂಡಿಕೆ ಕಾರ್ಯತಂತ್ರದ ಬಗ್ಗೆ ಉತ್ತಮ ಐಡಿಯಾ ಹೊಂದಿರುತ್ತಾರೆ. ಹೂಡಿಕೆ ಮಾಡಲು ಮತ್ತು ತಮ್ಮ ಹೂಡಿಕೆಗಳನ್ನು ಮೇಲ್ವಿಚಾರಣೆ ನಡೆಸಲು ಸಾಕಷ್ಟು ಸ್ಕೀಮ್ಗಳನ್ನು ಆಯ್ಕೆ ಮಾಡಲು ಅವರು ತಮ್ಮದೇ ಸಂಶೋಧನೆಯನ್ನು ಮಾಡಬಹುದು. ಇಂತಹ ಹೂಡಿಕೆದಾರರು ಮ್ಯೂಚುವಲ್ ಫಂಡ್ಗಳ ಡೈರೆಕ್ಟ್ ಪ್ಲಾನ್ಗಳಲ್ಲಿ ಹೂಡಿಕೆ ಮಾಡಬಹುದು. ಅವರಿಗೆ ಡೈರೆಕ್ಟ್ ಪ್ಲಾನ್ನಲ್ಲಿ ಹೂಡಿಕೆ ಮಾಡುವುದರಲ್ಲಿ ಅರ್ಥವಿದೆ. ಯಾಕೆಂದರೆ, ಸ್ಕೀಮ್ ಆಯ್ಕೆಯನ್ನು ನಿರ್ವಹಿಸಲು ಅವರಿಗೆ ಆತ್ಮವಿಶ್ವಾಸವಿದೆ
ಇನ್ನಷ್ಟು ಓದಿ