ಮ್ಯೂಚುವಲ್‌ ಫಂಡ್‌ ನಿಂದ ಎಷ್ಟು ಬೇಗ ನನ್ನ ಹಣವನ್ನು ನಾನು ಹಿಂಪಡೆಯಬಹುದು?

ಮ್ಯೂಚುವಲ್‌ ಫಂಡ್‌ ನಿಂದ ಎಷ್ಟು ಬೇಗ ನನ್ನ ಹಣವನ್ನು ನಾನು ಹಿಂಪಡೆಯಬಹುದು?

ಮ್ಯೂಚುವಲ್‌ ಫಂಡ್‌ಗಳು ಅತ್ಯಂತ ಹೆಚ್ಚು ಲಿಕ್ವಿಡ್ ಅಸೆಟ್‌ಗಳಾಗಿವೆ. ಅಂದರೆ, ಇದನ್ನು ನಗದು ರೂಪದಲ್ಲಿ ಪರಿವರ್ತಿಸುವುದು ಅತ್ಯಂತ ಸುಲಭ. ಆಫ್‌ಲೈನ್‌ ಮೋಡ್‌ನಲ್ಲಿ ಫಂಡ್‌ಗಳನ್ನು ರಿಡೀಮ್‌ ಮಾಡಲು ಯೂನಿಟ್‌ ಹೋಲ್ಡರ್‌ಗಳು ಎಎಂಸಿಗಳಿಗೆ ಅಥವಾ ರಿಜಿಸ್ಟ್ರಾರ್‌ಗಳ ನಿಗದಿತ ಕಚೇರಿಗೆ ರಿಡೆಂಪ್ಷನ್‌ ವಿನಂತಿ ನಮೂನೆಯನ್ನು ಸಹಿ ಮಾಡಿ ಸಲ್ಲಿಸಬೇಕು. ಯೂನಿಟ್‌ ಹೋಲ್ಡರ್‌ಗಳ ಹೆಸರು, ಫಾಲಿಯೋ ಸಂಖ್ಯೆ, ಸ್ಕೀಮ್‌ ಹೆಸರು ಮತ್ತು ರಿಡೀಮ್‌ ಮಾಡಬೇಕಿರುವ ನಂಬರ್‌ ವಿವರಗಳನ್ನು   ನಮೂನೆಯಲ್ಲಿ ನಮೂದಿಸಬೇಕು. ರಿಡೆಂಪ್ಷನ್‌ನ ಪ್ರಕ್ರಿಯೆಯಲ್ಲಿ ಯುನಿಟ್‌ ಹೋಲ್ಡರ್‌ ಹೆಸರಿನ ನೋಂದಾಯಿತ ಬ್ಯಾಂಕ್‌ ಖಾತೆಗೆ ಕ್ರೆಡಿಟ್‌ ಆಗುತ್ತದೆ.

ಸಂಬಂಧಿತ ಫಂಡ್‌ನ ವೆಬ್‌ಸೈಟ್‌ನಲ್ಲೂ ಮ್ಯೂಚುವಲ್‌ ಫಂಡ್‌ಗಳನ್ನು ಖರೀದಿ ಮಾಡಬಹುದು ಮತ್ತು ರಿಡೀಮ್‌ ಮಾಡಿಕೊಳ್ಳಬಹುದು. ನೀವು ಬಯಸಿದ ಮ್ಯೂಚುವಲ್‌ ಫಂಡ್‌ನ ‘ಆನ್‌ಲೈನ್‌ ವಹಿವಾಟು’ ಪುಟಕ್ಕೆ ನೀವು ಸರಳವಾಗಿ ಲಾಗಿನ್‌ ಮಾಡಿ ಮತ್ತು ನಿಮ್ಮ ಫಾಲಿಯೋ ಸಂಖ್ಯೆ ಮತ್ತು/ಅಥವಾ  ಪ್ಯಾನ್ ಸಂಖ್ಯೆ ಬಳಸಿ ಲಾಗಿನ್‌ ಮಾಡಿ, ಸ್ಕೀಮ್ ಆಯ್ಕೆ ಮಾಡಿ ಮತ್ತು ನೀವು ರಿಡೀಮ್‌ ಮಾಡಲು ಬಯಸುವ ಯೂನಿಟ್‌ಗಳ ಸಂಖ್ಯೆ (ಅಥವಾ ಮೊತ್ತ) ನಮೂದಿಸಿ ಮತ್ತು ವಹಿವಾಟನ್ನು ದೃಢೀಕರಿಸಿ.

ಇದರ ಜೊತೆಗೆ.ಕ್ಯಾಮ್ಸ್ (ಕಂಪ್ಯೂಟರೈಸ್ಡ್ ಮ್ಯಾನೇಜ್‌ಮೆಂಟ್‌ ಸರ್ವೀಸಸ್‌ ಪ್ರೈ. ಲಿ.), ಕಾರ್ವಿ ಮುಂತಾದವುಗಳು ವಿವಿಧ ಎಎಂಸಿಗಳಿಂದ ಖರೀದಿಸಿದ ಮ್ಯೂಚುವಲ್‌ ಫಂಡ್‌ ಅನ್ನು ರಿಡೀಮ್‌ ಮಾಡಿಕೊಳ್ಳುವ ಅವಕಾಶವನ್ನು ನೀಡುತ್ತವೆ. ನೀವು ಆನ್‌ಲೈನ್‌ನಲ್ಲಿ ನಮೂನೆಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು ಅಥವಾ ಸಮೀಪದ ಕಚೇರಿಗೆ ಭೇಟಿ ನೀಡಬಹುದು.

ಇನ್ನಷ್ಟು ಓದಿ

ಮ್ಯೂಚುವಲ್‌ ಫಂಡ್‌ ಸೂಕ್ತವೇ??